
ಮುಂಬೈ[ಜೂ.08]: ಬಿಜೆಪಿ ಸಂಸದೆ ಪ್ರಜ್ಞಾಸಿಂಗ್ ಠಾಕೂರ್ ಶುಕ್ರವಾರ ಮುಂಬೈನ ಎನ್‌ಐಎನ ವಿಶೇಷ ಕೋರ್ಟ್‌ಗೆ ಹಾಜರಾದರು. ಒಂದೇ ವಾರದಲ್ಲಿ ಎರಡು ಗೈರಾಗಿದ್ದ ಸಾಧ್ವಿ, ವಿಶೇಷ ನ್ಯಾಯಾಲಯದ ಕಡ್ಡಾಯ ಹಾಜರಾತಿಯ ನಿರ್ದೇಶನದ ಮೇರೆಗೆ ಶುಕ್ರವಾರ ಹಾಜರಾದರು.
11 ವರ್ಷಗಳಷ್ಟು ಹಳೆಯ ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಧೀಶ ವಿ.ಎಸ್. ಪಡಲ್ಕರ್, ಸ್ಪೋಟದ ಬಗ್ಗೆ ಮಾಹಿತಿ ಕೇಳಿದಾಗ ‘ಮಾಲೇಗಾಂವ್ ಸ್ಪೋಟದ ಬಗ್ಗೆ ತನಗೆ ಏನೂ ಗೊತ್ತಿಲ್ಲ’ ಎಂದು ಪ್ರಜ್ಞಾ ಹಾಗೂ ಅವರ ಸಹಚರರೂ ಸ್ಪಷ್ಟಪಡಿಸಿದರು.
ಇದೇ ವೇಳೆ ಕೋರ್ಟ್‌ನಲ್ಲಿ ಕೊಟ್ಟಕುರ್ಚಿಯ ಮೇಲೆ ದೂಳು ಇದೆ ಎಂದು ದೂರಿದ ಪ್ರಜ್ಞಾ, ಎರಡೂವರೆ ಗಂಟೆ ನಿಂತುಕೊಂಡೇ ವಿಚಾರಣೆ ಎದುರಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.