
ಬೆಂಗಳೂರು(ಡಿ.23): ‘ಒಬ್ಬರ ತಪ್ಪಿಗೆ, ಇಡೀ ಬ್ಯಾಂಕಿಂಗ್ ವ್ಯವಸ್ಥೆ ದೂಷಿಸುವುದು ತಪ್ಪು. ‘ಎಲ್ಲ ದಾಖಲೆಗಳನ್ನೂ ಸಿಬಿಐಗೆ ಕೊಟ್ಟಿದ್ದೇವೆ, ಪರಿಶೀಲಿಸಿದ್ದಾರೆ’‘ಎಲ್ಲ ದಾಖಲೆಗಳನ್ನೂ ಸಿಬಿಐಗೆ ಕೊಟ್ಟಿದ್ದೇವೆ. ಅವರೇ ಪರಿಶೀಲಿಸಿ ಯಾವುದೇ ಅಕ್ರಮ ನಡೆದಿಲ್ಲ ಎಂದು ತಿಳಿಸಿದ್ದಾರೆ ಎಂದು ಕರ್ಣಾಟಕ ಬ್ಯಾಂಕ್ ಎಂಡಿ ಮಹಾಬಲೇಶ್ವರ ರಾವ್ ಸ್ಪಷ್ಟನೆ ನೀಡಿದ್ದಾರೆ.
ಸುವರ್ಣ ನ್ಯೂಸ್ ಜೊತೆ ತುಮಕೂರಿನ ಪಾವಗಡ ಶಾಖೆಯಲ್ಲಿ ಹಣ ಬದಲಾವಣೆ ಪ್ರಕರಣಕ್ಕೆ ಸಂಬಂಧಿಸಿತಂತೆ ಮಾತನಾಡಿದ ಅವರು, ‘ಕರ್ಣಾಟಕ ಬ್ಯಾಂಕ್ನಲ್ಲಿ ಯಾವುದೇ ಪ್ರಮಾದವಾಗಿಲ್ಲ. ಯಾರೋ ಒಬ್ಬ ವ್ಯಕ್ತಿ ಮಾಡಿದ ತಪ್ಪಿಗೆ, ಇಡೀ ವ್ಯವಸ್ಥೆಯನ್ನು ದೂಷಿಸಬೇಡಿ. ನಮ್ಮಲ್ಲಿ ಕೂಡಾ ಒಂದು ಪ್ರಕರಣದಲ್ಲಿ ಆರೋಪ ಕೇಳಿ ಬಂದಿತ್ತು. ನಾವು ಒಬ್ಬ ಹಿರಿಯ ಅಧಿಕಾರಿಯನ್ನು ಸಿಬಿಐ ಕಚೇರಿಗೆ ಕಳುಹಿಸಿ, ಎಲ್ಲ ದಾಖಲೆ ಒದಗಿಸಿದೆವು. ಈಗ ಸಿಬಿಐನವರೇ ಆರೋಪಿ ಅಧಿಕಾರಿಯ ತಪ್ಪೇನೂ ಇಲ್ಲ ಎನ್ನುತ್ತಿದ್ದಾರೆ. ಮುಂದೆಯೂ ಕೂಡಾ ಯಾವುದೇ ಕಾನೂನು ಇಲಾಖೆ ದಾಖಲೆ ಕೇಳಿದರೂ ನಾವು ಒದಗಿಸಲು ಸಿದ್ಧ. ನಮಗಂತೂ ಶೇ.100ರಷ್ಟು ನ್ಯಾಯ ಮತ್ತು ಸತ್ಯವಾಗಿ ಕೆಲಸ ಮಾಡಿದ್ದೇವೆ ಎಂಬ ನಂಬಿಕೆಯಿದೆ. ನಮ್ಮ ಸಿಬ್ಬಂದಿಯ ಮೇಲೆ ನನಗೆ ಆ ನಂಬಿಕೆಯಿದೆ ಎಂದು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.