ಬೆಂಗಳೂರಿನಲ್ಲಿಂದು ಮದ್ಯ ಮಾರಾಟವಿಲ್ಲ..!

By Web Desk  |  First Published Nov 10, 2019, 1:33 PM IST

ಭಾನುವಾರ[ನ.10] ಬೆಂಗಳೂರು ನಗರದಾದ್ಯಂತ ಮದ್ಯ ಮಾರಟಕ್ಕೆ ನಿಷೇಧ ಹೇರಲಾಗಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...


ಬೆಂಗಳೂರು[ನ.10]: ಮುಸ್ಲಿಮರ ಪವಿತ್ರ ಹಬ್ಬವಾದ ಈದ್ ಮಿಲಾದ್ ಅನ್ನು ದೇಶಾದ್ಯಂತ ಆಚರಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯಬಾರದು ಎಂದು ಮುನ್ನೆಚ್ಚರಿಕಾ ಕ್ರಮವಾಗಿ ಬೆಂಗಳೂರಿನ ನಗರದಾದ್ಯಂತ ಇಂದು[ನವೆಂಬರ್ 10] ಮದ್ಯ ಮಾರಾಟಕ್ಕೆ ನಿಷೇಧ ಹೇರಲಾಗಿದೆ. 

ಅಯೋಧ್ಯೆ ತೀರ್ಪು: ಜಾಲತಾಣದಲ್ಲೂ ಸೌಹಾರ್ದತೆ!

Tap to resize

Latest Videos

undefined

ಪ್ರವಾದಿ ಮಹಮ್ಮದ್ ಪೈಗಂಬರ್ ಜನ್ಮದಿನವನ್ನು ಈದ್-ಮಿಲಾದ್ ಹಬ್ಬವಾಗಿ ಆಚರಿಸಲಾಗುತ್ತದೆ. ಇಂದು ಬೆಳಗ್ಗೆ 6 ಗಂಟೆಯಿಂದ ರಾತ್ರಿ 12 ಗಂಟೆವರೆಗೂ ಮದ್ಯ ಮಾರಾಟಕ್ಕೆ ನಿಷೇಧ ಹೇರಿರುವುದಾಗಿ ಬೆಂಗಳೂರು ಪೊಲೀಸ್ ಆಯುಕ್ತರಾದ ಬಾಸ್ಕರ್ ರಾವ್ ಆದೇಶಿಸಿದ್ದರು. ಹೀಗಾಗಿ ನಗರದ ವ್ಯಾಪ್ತಿಗೆ ಬರುವ ಎಲ್ಲಾ ಬಾರ್, ವೈನ್ ಶಾಪ್ ಹಾಗೂ ಮದ್ಯ ಮಾರಾಟ ಅಂಗಡಿಗಳು ಬಂದ್ ಆಗಿವೆ.  

ರಾಮ ಮಂದಿರ ಕಿಚ್ಚು ಹಚ್ಚಿಸಿದ್ದೇ ಸಿಂಘಾಲ್, ಅಡ್ವಾಣಿ

ಅಯೋಧ್ಯ ತೀರ್ಪು ಪ್ರಕಟಣೆ ಹಿನ್ನಲೆಯಲ್ಲಿ ಶನಿವಾರವೂ ಮದ್ಯ ಮಾರಾಟಕ್ಕೆ ನಿಷೇಧ ಹೇರಲಾಗಿತ್ತು. ಹೀಗಾಗಿ ಮದ್ಯ ಪ್ರಿಯರು ಎರಡು ದಿನ ಮದ್ಯವಿಲ್ಲದೇ ಕಾಲಕಳೆಯುವಂತಾಗಿದೆ. 

ನವೆಂಬರ್ 10ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!