ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದ RBI: ಇಂದಿನಿಂದ ಎಟಿಎಂ ವಿತ್ ಡ್ರಾಗೆ ಯಾವುದೇ ಮಿತಿ ಇಲ್ಲ

By Suvarna Web DeskFirst Published Mar 13, 2017, 4:42 AM IST
Highlights

ನೋಟುಗಳ ನಿಷೇಧದ ಬಳಿಕ ಆರ್ ಬಿಐ ಎಟಿಎಂ ವಿತ್ ಡ್ರಾ ಮಿತಿಯನ್ನು ತೆರವುಗೊಳಿಸಿದೆ. ಇಂದಿನಿಂದ ಎಟಿಎಂನಲ್ಲಿ ಹಣ ಪಡೆಯಲು ಯಾವುದೇ ಮಿತಿ ಇರುವುದಿಲ್ಲ.

ನವದೆಹಲಿ(ಮಾ.13): ನೋಟುಗಳ ನಿಷೇಧದ ಬಳಿಕ ಆರ್ ಬಿಐ ಎಟಿಎಂ ವಿತ್ ಡ್ರಾ ಮಿತಿಯನ್ನು ತೆರವುಗೊಳಿಸಿದೆ. ಇಂದಿನಿಂದ ಎಟಿಎಂನಲ್ಲಿ ಹಣ ಪಡೆಯಲು ಯಾವುದೇ ಮಿತಿ ಇರುವುದಿಲ್ಲ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈ ಕುರಿತು ಪ್ರಕಟಣೆ ಹೊರಡಿಸಿದೆ. 2 ಸಾವಿರ ರೂ. ನೋಟು ಮತ್ತು ಹೊಸದಾಗಿ ಚಲಾವಣೆಗೆ ಬಂದಿರುವ 500 ರೂ. ನೋಟುಗಳನ್ನು ಯಾವುದೇ ಕಾರಣಕ್ಕೂ ನಕಲು ಮಾಡಲು ಸಾಧ್ಯವಿಲ್ಲ ಎಂದು ಆರ್ ಬಿಐ ಹೇಳಿದೆ. ನ.8ರಂದು 500 ಮತ್ತು 1000 ರೂ. ನೋಟುಗಳನ್ನು ನಿಷೇಧ ಮಾಡಿದ ಬಳಿಕ ಎಟಿಎಂ ನಿಂದ ಹಣ ವಿತ್ ಡ್ರಾ ಮಾಡಲು ಮಿತಿ ಹೇರಲಾಗಿತ್ತು.

ಸದ್ಯ, ಉಳಿತಾಯ ಖಾತೆಯಿಂದ ವಾರಕ್ಕೆ 24 ಸಾವಿರ ರೂ. ಡ್ರಾ ಮಾಡಬಹುದಾಗಿದೆ. ಫೆ.20ರಿಂದ ಈ ಮಿತಿಯನ್ನು 50 ಸಾವಿರಕ್ಕೆ ಹೆಚ್ಚಳ ಮಾಡಲಾಗಿತ್ತು. ಇಂದಿನಿಂದ ಎಟಿಎಂನಿಂದ ಹಣ ವಿತ್ ಡ್ರಾ ಮಾಡಲು ಯಾವುದೇ ಮಿತಿ ಇರುವುದಿಲ್ಲ.

 

click me!