ತುಳು ಹಾಗೂ ಕೊಂಕಣಿ ಭಾಷೆಗಳನ್ನು ಸಂವಿಧಾನದ ೮ನೇ ಪರಿಚ್ಛೇದದಲ್ಲಿ ಸೇರಿಸಿ ಸಾಂವಿಧಾನಿಕ ಮಾನ್ಯತೆ ನೀಡಬೇಕು ಎಂದು ಕರ್ನಾಟಕದ ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರು ಮೇಲ್ಮನೆಯಲ್ಲಿ ಮಂಡಿಸಿದ ಖಾಸಗಿ ಮಸೂದೆಯ ಮೇಲೆ ನಡೆದ ಚರ್ಚೆಗೆ ಉತ್ತರಿಸಿ ಮಾತನಾಡಿದರಿಜಿಜು, ‘ಯಾವುದೇ ಭಾಷೆಯ ಮೇಲೆ ಹಿಂದಿಯನ್ನು ಹೇರುತ್ತಿಲ್ಲ. ಹಿಂದಿ ಒಂದು ಅಧಿಕೃತ ಭಾಷೆ. ಆದರೆ ರಾಷ್ಟ್ರೀಯ ಭಾಷೆ ಎಂಬ ಯಾವುದೇ ಭಾಷೆ ಇಲ್ಲ. ಎಲ್ಲ ಭಾಷೆಗಳೂ ರಾಷ್ಟ್ರೀಯ ಭಾಷೆಗಳು. ಹೀಗಾಗಿ ಹಿಂದಿ ಹೇರಿಕೆಯ ಪ್ರಶ್ನೆ ಬರುವುದಿಲ್ಲ. ಹಿಂದಿಯನ್ನು ಪ್ರಚುರಪಡಿಸಲು ಯಾವುದೇ ವಿಶೇಷ ಪ್ರಯತ್ನಗಳುನಡೆಯುತ್ತಿಲ್ಲ’ ಎಂದು ಸ್ಪಷ್ಟಪಡಿಸಿದರು.
ನವದೆಹಲಿ(ಜು.22):‘ಹಿಂದಿಯನ್ನು ಯಾವುದೇ ಭಾರತೀಯ ಭಾಷೆಯ ಮೇಲೆ ಹೇರಿಕೆ ಮಾಡುತ್ತಿಲ್ಲ. ದೇಶದಲ್ಲಿ ಯಾವುದೇ ಭಾಷೆ ರಾಷ್ಟ್ರೀಯ ಭಾಷೆಯಲ್ಲ. ಹಿಂದಿ ಕೂಡ ಒಂದು ಅಧಿಕೃತ ಭಾಷೆ’ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ಸಂಸತ್ತಿಗೆ ಹೇಳಿದ್ದಾರೆ.
‘ಹಿಂದಿ ರಾಷ್ಟ್ರಭಾಷೆ’ ಎಂದು ಈಗ ಉಪರಾಷ್ಟ್ರಪತಿ ಅಭ್ಯರ್ಥಿಯಾಗಿರುವ ಹಿಂದಿನ ಕೇಂದ್ರ ಸಚಿವ ವೆಂಕಯ್ಯ ಅವರ ಹೇಳಿಕೆ ಹಾಗೂ ಕರ್ನಾಟಕ, ತಮಿಳುನಾಡಿನಲ್ಲಿ ‘ಹಿಂದಿ ಹೇರಿಕೆ’ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳ ಬೆನ್ನಲ್ಲೇ ಕೇಂದ್ರ ಸರ್ಕಾರದ ಈ ಸ್ಪಷ್ಟನೆ ಬಂದಿದೆ.
ತುಳು ಹಾಗೂ ಕೊಂಕಣಿ ಭಾಷೆಗಳನ್ನು ಸಂವಿಧಾನದ ೮ನೇ ಪರಿಚ್ಛೇದದಲ್ಲಿ ಸೇರಿಸಿ ಸಾಂವಿಧಾನಿಕ ಮಾನ್ಯತೆ ನೀಡಬೇಕು ಎಂದು ಕರ್ನಾಟಕದ ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರು ಮೇಲ್ಮನೆಯಲ್ಲಿ ಮಂಡಿಸಿದ ಖಾಸಗಿ ಮಸೂದೆಯ ಮೇಲೆ ನಡೆದ ಚರ್ಚೆಗೆ ಉತ್ತರಿಸಿ ಮಾತನಾಡಿದರಿಜಿಜು, ‘ಯಾವುದೇ ಭಾಷೆಯ ಮೇಲೆ ಹಿಂದಿಯನ್ನು ಹೇರುತ್ತಿಲ್ಲ. ಹಿಂದಿ ಒಂದು ಅಧಿಕೃತ ಭಾಷೆ. ಆದರೆ ರಾಷ್ಟ್ರೀಯ ಭಾಷೆ ಎಂಬ ಯಾವುದೇ ಭಾಷೆ ಇಲ್ಲ. ಎಲ್ಲ ಭಾಷೆಗಳೂ ರಾಷ್ಟ್ರೀಯ ಭಾಷೆಗಳು. ಹೀಗಾಗಿ ಹಿಂದಿ ಹೇರಿಕೆಯ ಪ್ರಶ್ನೆ ಬರುವುದಿಲ್ಲ. ಹಿಂದಿಯನ್ನು ಪ್ರಚುರಪಡಿಸಲು ಯಾವುದೇ ವಿಶೇಷ ಪ್ರಯತ್ನಗಳುನಡೆಯುತ್ತಿಲ್ಲ’ ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ ತ್ರಿಭಾಷಾ ಸೂತ್ರದ ಬಗ್ಗೆ ಪ್ರಸ್ತಾಪಿಸಿದ ರಿಜಿಜು
‘ಈಗಾಗಲೇ ತ್ರಿಭಾಷಾ ಸೂತ್ರ ಎಂಬುದು ಇದೆ. ಹೀಗಾಗಿ ಯಾವುದೇ ರಾಜ್ಯವು ತನ್ನ ಭಾಷೆಯಲ್ಲಿ ವ್ಯವಹಾರ ನಡೆಸಲು ಕೇಂದ್ರ ಸರ್ಕಾರದ ಅಡ್ಡಿ ಇಲ್ಲ. ಒಂದು ಭಾಷೆಯ ಮೇಲೆ ಇನ್ನೊಂದನ್ನು ಎತ್ತಿಕಟ್ಟುವ ಯತ್ನ ನಡೆಸಿಲ್ಲ’ ಎಂದು ಹೇಳಿದರು.
ಇನ್ನು ಕೊಂಕಣಿ ಹಾಗೂ ತುಳು ಭಾಷೆಗಳನ್ನು ೮ನೇ ಪರಿಚ್ಛೇದಕ್ಕೆ ಸೇರಿಸುವ ಬಗ್ಗೆ ಅವರು ಉತ್ತರಿಸಿ, ಕೇಂದ್ರ ಸರ್ಕಾರವು ಈ ಕುರಿತ ೩೮ ಭಾಷಗಳ ಪ್ರಸ್ತಾಪ ಪರಿಶೀಲನೆಗೆ ಸಮಿತಿ ರಚಿಸಿದೆ. ದಯವಿಟ್ಟು ಖಾಸಗಿ ಮಸೂದೆ ಹಿಂಪಡೆಯಬೇಕೆಂದು ಕೋರಿದರು. ಬಳಿಕ ಹರಿಪ್ರಸಾದ್ ಅವರು ಮಸೂದೆಹಿಂಪಡೆದರು.
'ಹಿಂದಿ ರಾಷ್ಟ್ರೀಯ ಭಾಷೆ ಎಂದು ಕೇಂದ್ರದ ಮಾಜಿ ಸಚಿವ ವೆಂಕಯ್ಯನಾಯ್ಡು ಹೇಳಿದ್ದನ್ನು ಕನ್ನಡಪ್ರಭ ಜೂ.೨೫ರಂದು ವರದಿ ಮಾಡಿತ್ತು.