ಸಾರ್ವಜನಿಕರು ಇನ್ಮುಂದೆ ಆದಾಯ ತೆರಿಗೆ ಪಾವತಿಸಬೇಕಾಗಿಲ್ಲ ! ಆದರೆ ?

By Suvarna Web DeskFirst Published Apr 10, 2017, 1:46 PM IST
Highlights

2014ರ ಮಧ್ಯದಲ್ಲಿ ತೈಲ ಉತ್ಪನ್ನಗಳ ಬೆಲೆಗಳು ಅಪಾರ ಪ್ರಮಾಣದಲ್ಲಿ ಕಡಿತ ಉಂಟಾದ ಕಾರಣ ಆದಾಯ ತೆರಿಗೆ ವ್ಯವಸ್ಥೆ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೊಳಿಸಲಾಗಿತ್ತು.

ದೋಹಾ(ಏ.10): ಸಾರ್ವಜನಿಕರು ಇನ್ನು ಮುಂದೆ ಆದಾಯ ತೆರಿಗೆ ಪಾವತಿಸಬೇಕಾಗಿಲ್ಲ. ಹೇಗೆಂದು ನಾಗರಿಕರ್ಯಾರು ಖುಷಿ ಪಡೆಬೇಕಾಗಿಲ್ಲ. ಈ ಕಾನೂನು ನಮ್ಮ ದೇಶದಲ್ಲಿ ಜಾರಿಗೊಳಿಸಲಾಗಿಲ್ಲ. ಸದ್ಯ ಈ ಕಾಲಕ್ಕಂತೂ ನಮ್ಮಲ್ಲಿ ಜಾರಿಯಾಗುವುದಿಲ್ಲ.

ಈ ಆದೇಶ ಜಾರಿಯಾಗಿರುವುದು ತೈಲ ರಾಷ್ಟ್ರ ಸೌದಿ ಅರೇಬಿಯಾದಲ್ಲಿ. ಸೌದಿ ಕಂಪನಿಗಳು ಸಹ ಹೊಸ ಆದೇಶದ ಅನ್ವಯದ ಪ್ರಕಾರ ಲಾಭಾಂಶವನ್ನು ತೋರಿಸಬೇಕಾಗಿಲ್ಲ. ಈ ಮೊದಲು ಸೌದಿಯಲ್ಲಿ ಅಲ್ಲಿನ ಜನರು ಆದಾಯತೆರಿಗೆ ಪಾವತಿಸಬೇಕಾಗಿರಲಿಲ್ಲ.

2014ರ ಮಧ್ಯದಲ್ಲಿ ತೈಲ ಉತ್ಪನ್ನಗಳ ಬೆಲೆಗಳು ಅಪಾರ ಪ್ರಮಾಣದಲ್ಲಿ ಕಡಿತ ಉಂಟಾದ ಕಾರಣ ಆದಾಯ ತೆರಿಗೆ ವ್ಯವಸ್ಥೆ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೊಳಿಸಲಾಗಿತ್ತು. ಈಗ ಮತ್ತೆ ತೆರಿಗೆಯನ್ನು ರದ್ದುಗೊಳಿಸಲಾಗಿದೆ. ಸೌದಿ ಅರೇಬಿಯಾ ಸೇರಿದಂತೆ ವಿಶ್ವದ 11 ರಾಷ್ಟ್ರಗಳಲ್ಲಿ ಆದಾಯ ತೆರಿಗೆ ವ್ಯವಸ್ಥೆಯಿಲ್ಲ.

click me!