
ನಾಗಪುರ: ಹೊಸ 2000 ರು. ಹಾಗೂ 500 ರು. ನೋಟುಗಳು ಹರಿದರೆ ಅವುಗಳನ್ನು ಆರ್‌ಬಿಐ ಅಥವಾ ಬ್ಯಾಂಕ್‌ಗಳಲ್ಲಿ ಬದಲಿ ನೋಟಿನೊಂದಿಗೆ ವಿನಿಮಯ ಮಾಡಿಕೊಳ್ಳಬಹುದು ಎಂಬ ತಿಳಿವಳಿಕೆ ನಿಮ್ಮದಾಗಿದ್ದರೆ ಅದು ತಪ್ಪಾದೀತು.ಈ ನೋಟುಗಳು ಹರಿದರೆ ಅವುಗಳ ವಿನಿಮಯಕ್ಕೆ ಈಗಿನ ಮಟ್ಟಿಗೆ ಅವಕಾಶವಿಲ್ಲ ಎಂಬ ವಿಷಯ ಈಗ ಬಹಿರಂಗವಾಗಿದೆ.
‘ನೋಟು ಬದಲಾವಣೆ ನಿಯಮಾವಳಿ-2009’ರಲ್ಲಿ 2000 ರು., 500 ರು., 200 ರು. ಹಾಗೂ 50 ರು. ಮೌಲ್ಯದ ಹೊಸ ನೋಟುಗಳನ್ನು ಇನ್ನೂ ಸೇರಿಸಿಲ್ಲ. ಇದಕ್ಕೆ ಸಂಸತ್ತಿನ ಒಪ್ಪಿಗೆ ಬೇಕು. ಹೀಗಾಗಿ ಈ ಎರಡೂ ಮುಖಬೆಲೆಯ ನೋಟುಗಳನ್ನು ಬ್ಯಾಂಕ್‌ಗಳಲ್ಲಾಗಲಿ, ಆರ್‌ಬಿಐನಲ್ಲಾಗಲಿ ವಿನಿಮಯ ಮಾಡಿಕೊಳ್ಳಲು ಅವಕಾಶವಿಲ್ಲ. ಒಮ್ಮೆ ಹರಿದರೆ ಅಥವಾ ಇನ್ನಾವುದೇ ರೀತಿ ಹಾನಿಯಾದರೆ ಈ ನೋಟುಗಳು ರದ್ದಿ ಪೇಪರ್‌ಗೆ ಸಮ ಎಂದು ಪತ್ರಿಕೆಯೊಂದು ವರದಿ ಮಾಡಿದೆ.
ಇತ್ತೀಚೆಗೆ ಮಹಾರಾಷ್ಟ್ರದ ನಾಗಪುರದ ರಾಮ ಮಡಕೆ ಎಂಬುವರ ಬುದ್ಧಿಮಾಂದ್ಯ ಮಗಳು 2000 ರು. ನೋಟನ್ನು ಹರಿದಾಗ ಅದರ ವಿನಿಮಯಕ್ಕೆ ಬ್ಯಾಂಕ್ ಸಿಬ್ಬಂದಿ ಈ ಮೇಲಿನಂತೆ ಕಾರಣ ಹೇಳಿ ನಿರಾಕರಿಸಿದರು ಎಂದು ಮಾಧ್ಯಮ ವರದಿ ಹೇಳಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.