
ಬೆಂಗಳೂರು(ಎ.08): ಕನ್ನಡ ಚಿತ್ರಗಳಿಗೆ ಎಸಿ ಹಾಕುವುದಿಲ್ಲ. ಸಿನಿಮಾ ನೋಡುವವರು ನೋಡಬಹುದು ಇಲ್ಲದಿದ್ದರೆ ಎದ್ದು ಹೋಗಬಹುದು ಎಂದಿದ್ದಕ್ಕೆ ಮಾಲ್'ನ ವಿರುದ್ಧ ಗಲಾಟೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ನಾಗಾವಾರ ಬಳಿ ಇರುವ ಎಲಿಮೆಂಟ್ ಮಾಲ್'ನಲ್ಲಿರುವ ಪಿವಿಆರ್'ನಲ್ಲಿ ರಾಜಕುಮಾರ ಚಲನಚಿತ್ರ ಪ್ರದರ್ಶನ ಆಗುತ್ತಿತ್ತು. ಚಿತ್ರ ಪ್ರಾರಂಭವಾಗಿ ಅರ್ಧ ತಾಸು ಕಳೆದರೂ ಎಸಿಯನ್ನು ಮಾತ್ರ ಆನ್ ಮಾಡಿರಲಿಲ್ಲ. ನೋಡಿ ನೋಡಿ ಬೇಸತ್ತ ಪ್ರೇಕ್ಷಕರು ಎಸಿ ಆನ್ ಮಾಡಿ ಅಂತ ಮಾಲ್ ಅವರನ್ನು ಕೇಳಲು ಹೋಗಿದ್ದಾರೆ. ಇದಕ್ಕೆ ಉದ್ದಟವಾಗಿ ಉತ್ತರ ನೀಡ ಮಾಲ್'ನ ಸಿಬ್ಬಂದಿ ಕನ್ನಡ ಚಲನಚಿತ್ರಗಳಿಗೆಲ್ಲಾ ಎಸಿ ಹಾಕೋಕೆ ಆಗುವುದಿಲ್ಲ. ಸಿನಿಮಾ ನೋಡುವವರು ನೋಡಬಹುದು ಇಲ್ಲ ಎದ್ದು ಮನೆಗೆ ಹೋಗಬಹುದು ಎಂದಿದ್ದಾರೆ.
ಇದರಿಂದ ಕೋಪಗೊಂಡ ಪ್ರೇಕ್ಷಕರು ಮಾಲ್‌ನಲ್ಲಿ ಗಲಾಟೆ ಮಾಡಿ, ಕನ್ನಡಿಗರಿಗೆ ಅವಮಾನ ಮಾಡಿದ್ದಾರೆ ಅಂತ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.