RSS ಬಗ್ಗೆ ಗುಪ್ತ​ಚರ ಮಾಹಿ​ತಿ ಕೋರಿದ ಮುಖ್ಯಮಂತ್ರಿ ನಿತೀಶ್!

By Web DeskFirst Published Jul 18, 2019, 11:01 AM IST
Highlights

ಮುಖ್ಯಮಂತ್ರಿ ಇದೀಗ ತಮ್ಮ ಮಾಹಿತಿಗಾಗಿ ಗುಪ್ತಚರ ಇಲಾಖೆ ಮೊರೆ ಹೋಗಿದ್ದಾರೆ. ಸಿಎಂ ಗುಪ್ತಚರ ಇಲಾಖೆಯಿಂದ ಬಯಸಿದ ಮಾಹಿತಿ ಏನು?

ಪಟನಾ [ಜು.18]: ಕೇಂದ್ರದಲ್ಲಿ ಸರ್ಕಾ​ರ​ ರಚನೆ ವೇಳೆ ಮಿತ್ರ​ಪ​ಕ್ಷ ಜೆಡಿಯು ಅನ್ನು ನಿರ್ಲ​ಕ್ಷಿ​ಸಿದ ಪರಿ​ಣಾಮ ಜೆಡಿಯು ವರಿಷ್ಟಹಾಗೂ ಬಿಹಾರ ಸಿಎಂ ನಿತೀಶ್‌ ಕುಮಾ​ರ್‌ ತಮ್ಮ ಬೆಂಬಲ ವಾಪಸ್‌ ಪಡೆದು ಎನ್‌​ಡಿ​ಎದಿಂದ ಹೊರಬಂದಿ​ದ್ದರು. 

ಇದೀಗ ಬಿಹಾ​ರ​ದಲ್ಲಿ ಬಿಜೆ​ಪಿಯ ತಾರ್ಕಿಕ ಶಕ್ತಿಯಾಗಿ​ರುವ ಆರ್‌​ಎ​ಸ್‌​ಎಸ್‌ ಮತ್ತು ಅದರ 19 ಪ್ರಮುಖ ವ್ಯಕ್ತಿ​ ಅಥವಾ ಶಾಖೆ​ಗಳು ಮತ್ತು ಅದರ ಚಟು​ವ​ಟಿ​ಕೆ​ಗಳ ಕುರಿತು ಗುಪ್ತ​ಚರ ಮಾಹಿತಿ ಸಂಗ್ರ​ಹಿ​ಸು​ತ್ತಿ​ರು​ವುದು ನಿತೀಶ್‌ ಮತ್ತು ಬಿಜೆಪಿ ಮಧ್ಯದ ಬಿಕ್ಕ​ಟ್ಟನ್ನು ಮತ್ತಷ್ಟು ಜಟಿ​ಲ​ಗೊ​ಳಿಸುವ ಸಾಧ್ಯ​ತೆ​ಗ​ಳಿವೆ.

ಸಿಎಂ ಹುದ್ದೆ ಜತೆಗೆ ಗೃಹ ಇಲಾಖೆ ಹಾಗೂ ಗುಪ್ತ​ಚರ ಇಲಾ​ಖೆ​ಯನ್ನೂ ಹೊಂದಿ​ರುವ ನಿತೀಶ್‌ ಕುಮಾರ್ ಇದೀಗ ಒಂದು ವಾರ​ದೊ​ಳ​ಗಾಗಿ ಈ ಕುರಿತ ಮಾಹಿತಿ ನೀಡು​ವಂತೆ ಹೆಚ್ಚು​ವರಿ ಎಸ್ಪಿ​ಗಳ ಮೂಲಕ ಮಾಹಿತಿ ಕೋರಿ​ದ್ದಾರೆ. 

ಅಲ್ಲದೇ 2017ರಲ್ಲಿ ಅಂದಿನ ಬಿಹಾರ ಸಿಎಂ ಲಾಲೂ ಪ್ರಸಾದ ಯಾದವ್‌ ಕೈಗೊಂಡಿದ್ದ ಆರ್‌​ಎ​ಸ್‌​ಎಸ್‌ ನಿಷೇ​ಧದ ಸಾಧ್ಯ​ತೆ​ಗಳ ಬಗ್ಗೆಯೂ ಚಿಂತನೆ ನಡೆ​ಸಿ​ದ್ದಾರೆ ಎನ್ನ​ಲಾ​ಗಿದ್ದು, ಈ ಮೂಲಕ ರಾಜ್ಯ ಬಿಜೆ​ಪಿಗೆ ಪೆಟ್ಟು ನೀಡಲು ಮುಂದಾ​ಗಿದ್ದಾರೆ.

click me!