ನಿತ್ಯಾನಂದರಿಗಾಗಿ 1 ಗಂಟೆವರೆಗೂ ತೆರೆದಿದ್ದ ಮೇಲುಕೋಟೆ ದೇಗುಲದ ಬಾಗಿಲು

Published : Nov 30, 2016, 08:20 AM ISTUpdated : Apr 11, 2018, 01:02 PM IST
ನಿತ್ಯಾನಂದರಿಗಾಗಿ 1 ಗಂಟೆವರೆಗೂ ತೆರೆದಿದ್ದ ಮೇಲುಕೋಟೆ ದೇಗುಲದ ಬಾಗಿಲು

ಸಾರಾಂಶ

ನೂರಾರು ವಿದೇಶಿ ಭಕ್ತರೊಂದಿಗೆ ಚಲುವರಾಯಸ್ವಾಮಿ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದರು. ದೇವಸ್ಥಾನ ಆಡಳಿತ ಸಿಬ್ಬಂದಿಗಳು ಕೂಡ ಮಧ್ಯಾಹ್ನ 12.30ಕ್ಕೆ ಬಾಗಿಲು ಬಂದ್ ಮಾಡಬೇಕಾದವರು ಮಧ್ಯಾಹ್ನ ಒಂದು ಗಂಟೆಯಾದರೂ ಬಾಗಿಲು ತೆಗೆದು ನಿಯಮ ಉಲ್ಲಂಘಿಸಿದರು.

ಮೇಲುಕೋಟೆ(ನ.30): ಬಹುದಿನಗಳ ಬಳಿಕ ವಿವಾದಿತ ನಿತ್ಯಾನಂದ ಸ್ವಾಮೀಜಿ  ಇವತ್ತು ಮಾಧ್ಯಮಗಳ ಕಣ್ಣಿಗೆ ಬಿದ್ದರು. ಮಂಡ್ಯ ಜಿಲ್ಲೆ ಮೇಲುಕೋಟೆಗೆ ಖಾಸಗಿ ಕಾರ್ಯಕ್ರಮ ನಿಮಿತ್ತ ನಿತ್ಯಾನಂದ ಭೇಟಿ ನೀಡಿದ್ದರು. ಮಾಧ್ಯಮಗಳು ಅದಾಗಲೇ ಕಾದು ನಿಂತಿದ್ದನ್ನು ಅರಿತ ನಿತ್ಯಾನಂದ ಬೆಳಗ್ಗೆ ಹತ್ತು ಗಂಟೆಗೆ ಬದಲು, ಮಧ್ಯಾಹ್ನ ಒಂದು ಗಂಟೆಗೆ ದೇವಸ್ಥಾನಕ್ಕೆ ಆಗಮಿಸಿದರು. ಈ ವೇಳೆ, ಮಾಧ್ಯಮದವರ ಚಿತ್ರೀಕರಣಕ್ಕೆ ನಿತ್ಯಾ ಭಕ್ತರು ತಡೆಯೊಡ್ಡಿದರು.

ನೂರಾರು ವಿದೇಶಿ ಭಕ್ತರೊಂದಿಗೆ ಚಲುವರಾಯಸ್ವಾಮಿ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದರು. ದೇವಸ್ಥಾನ ಆಡಳಿತ ಸಿಬ್ಬಂದಿಗಳು ಕೂಡ ಮಧ್ಯಾಹ್ನ 12.30ಕ್ಕೆ ಬಾಗಿಲು ಬಂದ್ ಮಾಡಬೇಕಾದವರು ಮಧ್ಯಾಹ್ನ ಒಂದು ಗಂಟೆಯಾದರೂ ಬಾಗಿಲು ತೆಗೆದು ನಿಯಮ ಉಲ್ಲಂಘಿಸಿದರು.

ಇದೇವೇಳೆ, ನಿತ್ಯಾನಂದನ ನೂರಾರು ಭಕ್ತರು ದೇವಾಲಯದ ಪಡಶಾಲೆಯಲ್ಲೆ ಕುಳಿತು ಸಹಪಂಕ್ತಿ ಭೋಜನ ಮಾಡಿದರು. ನಿತ್ಯಾನಂದ ಭೇಟಿ ಹಿನ್ನೆಲೆ ಬಗ್ಗೆ ಯಾವುದೇ ಮಾಹಿತಿ ನೀಡದ ಸಿಇಒ ಸತೀಶ್ ದೇವಾಲಯದ ಯಾವುದೇ ನಿಯಮ ಉಲ್ಲಂಘಿಸಿಲ್ಲ ಅಂತ ಸ್ಪಷ್ಟಪಡಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಭಾರತದಲ್ಲಿ ಮಿಡ್ಲ್ ಕ್ಲಾಸ್ ಮದುವೆ ಖರ್ಚು ಭಾರಿ ಏರಿಕೆ? ಅದ್ಧೂರಿ ವಿವಾಹಕ್ಕೆ ಲೆಕ್ಕವೇ ಸಿಗುತ್ತಿಲ್ಲ
ಕಾಶಿ ವಿಶ್ವನಾಥ ಭಕ್ತರೇ ಗಮನಿಸಿ: ಇಂದಿನಿಂದ ಹೊಸ ನಿಯಮ ಜಾರಿ! ದರ್ಶನಕ್ಕೆ ತೆರಳುವ ಮುನ್ನ ಈ ಬದಲಾವಣೆಗಳನ್ನು ತಪ್ಪದೇ ತಿಳ್ಕೊಳ್ಳಿ!