
ನವದೆಹಲಿ(ಜ.26): ಮಹಿಳೆಯರ ಸುರಕ್ಷತೆ ಮತ್ತು ಭದ್ರತೆಗಾಗಿ 2013ರಲ್ಲಿ ಸ್ಥಾಪಿಸಲಾದ ನಿರ್ಭಯಾ ನಿಧಿಯಲ್ಲಿ ಒಂದು ಪೈಸೆಯೂ ಖರ್ಚಾಗಿಲ್ಲ!
ಹೌದು. ಸತತ 3 ವರ್ಷಗಳಿಂದಲೂ ಈ ನಿಧಿಯಲ್ಲಿನ ಒಂದೇ ಒಂದು ಪೈಸೆಯೂ ವೆಚ್ಚವಾಗದೇ ಹಾಗೆಯೇ ಉಳಿದಿದೆ ಎಂಬ ಅಂಶ ಇದೀಗ ಬಹಿರಂಗವಾಗಿದೆ. 2013ರಿಂದ ಈವರೆಗೂ ಪ್ರತಿ ವರ್ಷವೂ ಸರ್ಕಾರ ನಿರ್ಭಯಾ ನಿಧಿಗೆ ₹1 ಸಾವಿರ ಕೋಟಿ ಅನುದಾನ ನೀಡುತ್ತಾ ಬಂದಿದೆ. ಆದರೆ, ಬಂದ ಅನುದಾನವೆಲ್ಲ ಅಲ್ಲೇ ಕೊಳೆತುಹೋಗುತ್ತಿದೆಯೇ ವಿನಾ ಉಪಯೋಗಕ್ಕೆ ಬಂದಿಲ್ಲ.
2012ರ ಡಿಸೆಂಬರ್'ನಲ್ಲಿ ದೆಹಲಿಯಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ಮೃತಪಟ್ಟ ಅರೆವೈದ್ಯಕೀಯ ವಿದ್ಯಾರ್ಥಿನಿಯ ನೆನಪಲ್ಲಿ ಯುಪಿಎ ಸರ್ಕಾರವು ‘ನಿರ್ಭಯಾ ನಿಧಿ’ಯನ್ನು ಸ್ಥಾಪಿಸಿತ್ತು. ಈ ನಿಧಿಗೆ ₹1 ಸಾವಿರ ಕೋಟಿ ಅನುದಾನ ಮೀಸಲಿಡುವ ಯುಪಿಎ ಸಂಪ್ರದಾಯವನ್ನು ಎನ್'ಡಿಎ ಕೂಡ ಪಾಲಿಸಿಕೊಂಡ ಬಂದಿದೆ. ಆದರೆ, ಅದರ ಹಣವನ್ನು ಖರ್ಚು ಮಾಡುವ ಯಾವುದೇ ಯೋಜನೆಯನ್ನೂ ಆರಂಭಿಸಲಾಗಿಲ್ಲ. ಮಹಿಳೆಯರ ಸುರಕ್ಷತೆಗಾಗಿ ಕೆಲಸ ಮಾಡುವ ಎನ್'ಜಿಒಗಳಿಗೆ ಈ ನಿಧಿಯಿಂದ ಸಹಾಯಧನ ನೀಡಬಹುದಾದರೂ, 3 ವರ್ಷಗಳಿಂದ ಯಾರೂ ಆ ಕೆಲಸ ಮಾಡಿಲ್ಲ. ಹೀಗಾಗಿ ವರ್ಷ ಕಳೆದಂತೆ ನಿಧಿಯಲ್ಲಿನ ಮೊತ್ತ ಹೆಚ್ಚುತ್ತಿದೆಯೇ ವಿನಾ ಅದು ಯಾರ ಪ್ರಯೋಜನಕ್ಕೂ ಬರುತ್ತಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.