ನಿರ್ಭಯ ಹತ್ಯಾಚಾರಿಗಳಿಗೆ ಗಲ್ಲು ಫಿಕ್ಸ್, ಬಯಲಾಯ್ತು ನಟಿಯ ಸೆಕ್ಸ್ ರಾಕೆಟ್; ಜ.17ರ ಟಾಪ್ 10 ಸುದ್ದಿ!

By Suvarna News  |  First Published Jan 17, 2020, 6:28 PM IST

ನಿರ್ಭಯ ಅತ್ಯಾಚಾರ ಹಾಗೂ ಹತ್ಯೆ ಅಪರಾಧಿಗಳ ಕ್ಷಮದಾನ ಅರ್ಜಿಯನ್ನು ರಾಷ್ಟ್ರಪತಿ ತಿರಸ್ಕರಿಸಿದ್ದಾರೆ. ಈ ಮೂಲಕ ಗಲ್ಲು ಶಿಕ್ಷೆ ಫಿಕ್ಸ್ ಆಗಿದೆ. ರಾಜ್ಯಜಲ್ಲಿ ಪೌರತ್ವ ಕಾಯ್ದೆ ಪರ ಹೋರಾಟ ನಡೆಸಿದ ಚಿಂತಕ ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ತೇಜಸ್ವಿ ಸೂರ್ಯ ಹತ್ಯೆಗೆ ಸ್ಕೆಚ್ ನಡೆದಿತ್ತು ಅನ್ನೋ ಸ್ಫೋಟಕ ಮಾಹಿತಿ ಬಯಲಾಗಿದೆ.  ಡಿಕೆ ಶಿವಕುಮಾರ್‌ಗೆ ಕೆಪಿಸಿಸಿ ಅಧ್ಯಕ್ಷ ಪಟ್ಟ, ಹೈ ಪ್ರೊಫೈಲ್ ನಟಿಯ ಸೆಕ್ಸ್ ರಾಕೆಟ್ ಸೇರಿದಂತೆ ಜನವರಿ 17ರ ಟಾಪ್ 10 ಸುದ್ದಿ ಇಲ್ಲಿದೆ.


ಯೋಗ್ಯರಲ್ಲ ನೀವು ಬದುಕಲು: ಫೆ.1ರಂದು ಹತ್ಯಾಚಾರಿಗಳಿಗೆ ಗಲ್ಲು!...

Tap to resize

Latest Videos

undefined

ಕಗ್ಗಂಟಾಗಿದ್ದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ) ಅಧ್ಯಕ್ಷ ಆಯ್ಜೆ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದೆ. ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹೆಸರು ಅಂತಿಮಗೊಂಡಿದ್ದು, ಹೈಕಮಾಂಡ್‌ನಿಂದ ಅಧಿಕೃತ ಆದೇಶ ಹೊರ ಬೀಳುವುದೊಂದೇ ಬಾಕಿ ಇದೆ.  ಆದ್ರೆ, ಕೆಪಿಸಿಸಿ ಅಧ್ಯಕ್ಷರಿಗೆ ಸಿದ್ದರಾಮಯ್ಯ ನಾಲ್ಕು ಗೋಡೆಗಳನ್ನು ಕಟ್ಟಿಬಂದಿದ್ದಾರೆ. 

ಟೌನ್‌ಹಾಲ್ ಟಾರ್ಗೆಟ್: ತೇಜಸ್ವಿ ಸೂರ್ಯ, ಸೂಲಿಬೆಲೆ ಮಿಸ್ ಆಗಿದ್ದು ಹೀಗೆ!

ಡಿ. 22 ರಂದು ಟೌನ್‌ಹಾಲ್ ಮುಂದೆ ನಡೆದ ಪೌರತ್ವ ಕಾಯ್ದೆ ಪರ ಪ್ರತಿಭಟನೆಯಲ್ಲಿ ತೇಜಸ್ವಿ ಸೂರ್ಯ ಹಾಗೂ ಚಕ್ರವರ್ತಿ ಸೂಲಿಬೆಲೆ ಹತ್ಯೆಗೆ ಎಸ್‌ಡಿಪಿಐ ಕಾರ್ಯಕರ್ತರು ಸಂಚು ರೂಪಿಸಿರುವ ಸಂಗತಿ ಬೆಚ್ಚಿ ಬೀಳಿಸಿದೆ.  ತೇಜಸ್ವಿ ಸೂರ್ಯ, ಚಕ್ರವರ್ತಿ ಸೂಲಿಬೆಲೆ ಹತ್ಯೆಗೆ ಎಸ್‌ಡಿಪಿಐ ಕಾರ್ಯಕರ್ತರು ಪಕ್ಕಾ ಪ್ಲಾನ್ ಮಾಡಿದ್ದರೂ ಮಿಸ್ ಆಗಿದ್ದಾರೆ.

ಹೈ ಪ್ರೊಫೈಲ್ ಸೆಕ್ಸ್‌ ರಾಕೆಟ್‌ನಿಂದ ನಟಿ ಪಾರು..!

ಹೈ ಪ್ರೊಫೈಲ್‌ ಸೆಕ್ಸ್ ರಾಕೆಟ್‌ನಿಂದ ಸಾವ್‌ಧಾನ್‌ ಇಂಡಿಯಾ ನಟಿ ಸೇರಿದಂತೆ ಮೂವರನ್ನು ಮುಂಬೈ ಪೊಲೀಸರು ರಕ್ಷಿಸಿದ್ದಾರೆ. ಅಂಧೇರಿ ಉಪನಗರದ ತ್ರೀ ಸ್ಟಾರ್‌ ಹೋಟೆಲ್‌ ಒಂದರಲ್ಲಿ ನಡೆಯುತ್ತಿದ್ದ ದಂಧೆಯನ್ನು ಮುಂಬೈ ಪೊಲೀಸರು ಬೇಧಿಸಿದ್ದು, ದಂಧೆ ನಡೆಸುತ್ತಿದ್ದ ಪ್ರಿಯಾ ಶರ್ಮಾ ಎಂಬಾಕೆಯನ್ನು ಬಂಧಿಸಿದ್ದಾರೆ.

ಕನಕಪುರ ಬಂಡೆ ಕಿಸೆ ಸೇರಿದ 'ಕೈ' ಸಾರಥ್ಯ?

ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆಶಿ ಹೆಸರು ಬಹುತೇಕ ಅಧಿಕೃತಗೊಂಡಿದೆ. ಕೈ ಹೈ ಕಮಾಂಡ್‌ನಿಂದ ಅಂತಿಮ ಘೋಷಣೆಯೊಂದೇ ಬಾಕಿ ಉಳಿದಿದೆ ಎನ್ನಲಾಗಿದೆ. ತೆರೆಮರೆಯಲ್ಲಿ ಡಿಕೆಶಿಗೆ ಅಭಿಮಾನಿಗಳಿಂದ ಶುಭಾಶಯಗಳ ಸುರಿಮಳೆ ಶುರುವಾಗಿದೆ.  


ಮಹಿಳಾ ಎಸ್‌ಐನ ಮಂಚಕ್ಕೆ ಕರೆದವನ ಬಂಧನ!

ಮಹಿಳಾ ಪಿ ಎಸ್ ಐ ಓರ್ವರನ್ನು ಮಂಚಕ್ಕೆ ಕರೆದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಿಯತಮೆಗೆ ಸಹಾಯ ಮಾಡಲು ಹೋಗಿ ಪೊಲೀಸರ ಅತಿಥಿಯಾಗಿದ್ದಾನೆ. 

ರಶ್ಮಿಕಾ ಮಂದಣ್ಣ ಐಟಿ ದಾಳಿಗೂ ಮುನ್ನ ನಡೆದಿತ್ತು ಮೆಗಾ ಪ್ಲಾನ್

ನಟಿ ರಶ್ಮಿಕಾ ಮಂದಣ್ಣಗೆ ಇಂದು ಐಟಿ ಡ್ರಿಲ್ ಶುರುವಾಗಿದೆ. ಇಂದು ಬೆಳಿಗ್ಗೆ 9 ಗಂಟೆಯಿಂದ ಐಟಿ ವಿಚಾರಣೆ ಆರಂಭಿಸಿದೆ.  ವಿಚಾರಣೆ ನಿಮಿತ್ತ ಮನೆಯಲ್ಲೇ ಇರುವಂತೆ ರಶ್ಮಿಕಾ ಹಾಗೂ ತಂದೆ ಮದನ್‌ಗೆ ಸೂಚನೆ ನೀಡಲಾಗಿದೆ. 

ನೋಡ್ರಪ್ಪಾ! ಮರುಭೂಮಿಲೂ 'ತಂಗಾಳಿಗಿಂತ ತಂಪಾಗಿ'ದೆ ರಾಖಿ ರೊಮ್ಯಾನ್ಸ್

ಬಾಲಿವುಡ್ ಸೆಕ್ಸಿ ಕ್ವೀನ್ ರಾಖಿ ಸಾವಂತ್ ಮರುಭೂಮಿಯಲ್ಲಿ ಹಾಟ್ ಮಿರ್ಚಿ ಲುಕ್‌ ರೋಮ್ಯಾನ್ಸ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ....


ಸಿಂಪಲ್ಲಾಗ್ ಒಂದ್ ಅಮ್ಮ-ಮಗಳ ಸ್ಟೋರಿ! ಇದು ಶ್ವೇತಾ - ಆಶ್ಮಿತಾ ಫೋಟೋಸ್!...

2006ರಲ್ಲಿ 'ಮುಖಾ ಮುಖಿ' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಶ್ವೇತಾ ಶ್ರೀವಾಸ್ತವ್ ತಮ್ಮ ಮುದ್ದು ಮಗಳು ಅಶ್ಮಿತಾ ಜೊತೆ ಸಂಕ್ರಾಂತಿ ಹಬ್ಬದ ಪ್ರಯುಕ್ತ ಫೋಟೋ ಶೂಟ್‌ ಮಾಡಿಸಿದ್ದಾರೆ, ಸಾಮಾಜಿಕ ಜಾಲತಾಣದಲ್ಲಿ ಸ್ಟಾರ್‌ ಕಿಡ್‌ ಆಗಿರುವ ಅಶ್ಮಿತಾ ಪೋಟೋ ವೈರಲ್ ಆಗಿದೆ.

ಏಕಾಏಕಿ 29 ವರ್ಷಗಳಷ್ಟು ಹಿಂದಕ್ಕೆ ಹೋದ ಚೀನಾ: ಡ್ರ್ಯಾಗನ್ ತಾಕತ್ತು ಇಷ್ಟೇನಾ?

ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕ ವ್ಯವಸ್ಥೆ ಹೊಂದಿರುವುದಾಗಿ ಬೀಗುತ್ತಿದ್ದ ಚೀನಾ, ನಿರಂತರ ಜಿಡಿಪಿ ಕುಸಿತದಿಂದ ಬಳಲಿ ಬೆಂಡಾಗಿದೆ. ಕಳೆದ ವರ್ಷ ಚೀನಾದ ಜಿಡಿಪಿ ಬೆಳವಣಿಗೆ ಶೇ.6.1 ರಷ್ಟು ದಾಖಲಾಗಿದ್ದು, ಇದು 29 ವರ್ಷಗಳಲ್ಲಿ ಅತಿ ಕಡಿಮೆ ವಾರ್ಷಿಕ ಬೆಳವಣಿಗೆಯ ದರವಾಗಿದೆ.

ಕೆಪಿಸಿಸಿ ಅಧ್ಯಕ್ಷ ಹಾದಿ ಸುಗಮಕ್ಕೆ ದೇವರ ಮೊರೆ ಹೋದ ತಾಯಿ-ಮಗ

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ) ಅಧ್ಯಕ್ಷ ಸ್ಥಾನಕ್ಕೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹೆಸರು ಅಂತಿಮಗೊಂಡಿದ್ದು, ಹೈಕಮಾಂಡ್‌ನಿಂದ ಅಧಿಕೃತ ಆದೇಶ ಹೊರ ಬೀಳುವುದೊಂದೇ ಬಾಕಿ ಇದೆ.  ಆದ್ರೆ, ಕೆಲ ಅಡಚಡೆಗಳು ಉಂಟಾಗಿವೆ. ಆ ತೊಡಕುಗಳನ್ನು ನಿವಾರಸಲು ಈಗ ಡಿಕೆಶಿ ಹಾಗೂ ಅವರ ತಾಯಿ ದೇವರ ಮೊರೆ ಹೋಗಿದ್ದಾರೆ. 
 

click me!