
ಮಂಡ್ಯ(ನ.23): ನಿಮಿಷಾಂಭ ದೇವಸ್ಥಾನದಲ್ಲಿನ ದೇವರ ಸೀರೆಯನ್ನೆ ಆರ್ಚಕ ಕದಿದ್ದಾನೆ. ದೇವಾಲಯದಲ್ಲಿ ಅಳವಡಿಸಿದ ಸಿಸಿಟಿವಿಯಲ್ಲಿ ಈ ಎಲ್ಲಾ ದೃಶ್ಯಗಳು ಸೆರೆಯಾಗಿವೆ ಎಂಬ ಪ್ರಕರಣಕ್ಕೆ ಸಂಬಂದಿಸಿದಂತೆ ನಿಮಿಷಾಂಭ ದೇವಸ್ಥಾನದ ಆರ್ಚಕ ಈ ಕುರಿತು ಸುವರ್ಣ ನ್ಯೂಸ್'ಗೆ ಸ್ಪಷ್ಟೀಕರಣ ನೀಡಿದ್ದಾರೆ.
ನನ್ನ ಮೇಲೆ ಸುಳ್ಳು ಆರೋಪ ಮಾಡಲಾಗಿದೆ, ನಾನೇ ದೇವಸ್ಥಾನದ ಎಲ್ಲಾ ಕಡೆ ಸಿಸಿಟಿವಿ ಹಾಕಿಸಿದ್ದು, ಇದೆಲ್ಲ ಜಯ ಕರ್ನಾಟಕ ಸಂಘಟನೆಯ ಕುಮಾರಸ್ವಾಮಿ ಮಾಡುತ್ತಾ ಇರುವ ಸುಳ್ಳು ಆರೋಪ. ಈ ಆರೋಪ ನನಗೆ ಹಾಗೂ ಭಕ್ತರಿಗೆ ತುಂಬಾ ನೋವು ತಂದಿದೆ ಎಂದರು.
ನನ್ನ ಮೇಲೆ ಸುಳ್ಳು ಆರೋಪ ಮಾಡಿದವರ ವಿರುದ್ದ ಕಾನೂನಾತ್ಮಕವಾದ ಹೋರಾಟ ಮಾಡ್ತೇನಿ, ನನ್ನ ಮಾನ ಹಾನಿಯಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.