
ಹಾಸನ(ಡಿ.07): ನಗರದ ಪ್ರತಿಷ್ಠಿತ ಪಶು ವೈದ್ಯಕೀಯ ಕಾಲೇಜಿನ ಲೇಡಿಸ್ ಹಾಸ್ಟೆಲ್'ನಲ್ಲಿ ಪೋಲಿ ಹುಡುಗನ ಹುಚ್ಚಾಟ ಮಿತಿಮೀರಿದೆ.
ಆ ಯುವಕ, ಸ್ಪೈಡರ್ ಮ್ಯಾನ್ ರೀತಿ 40 ಅಡಿ ಕಟ್ಟಡ ಏರಿದ್ದಾನೆ. ಅಲ್ಲದೇ ಸಿನಿಮಾ ಸ್ಟೈಲ್'ನಲ್ಲಿ ವಾಟರ್ ಪೈಪ್ ಮೂಲಕ ಎರಡನೇ ಮಹಡಿಯೇರಿದ ಯುವಕ, ಚಾಲಾಕಿತನದಿಂದ ಇಳಿದು ಹೋಗಿದ್ದಾನೆ.
ಈ ನೈಟ್ ರೋಮಿಯೋನ ಕಾಟದಿಂದ ಹಾಸ್ಟೆಲ್ ವಿದ್ಯಾರ್ಥಿನಿಯರಲ್ಲಿ ಆತಂಕ ಹೆಚ್ಚಾಗಿದ್ದು, ಹಾಸ್ಟೆಲ್'ನಲ್ಲಿ ಆತನ ಓಡಾಟದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಯಾವುದೇ ವಸ್ತುಗಳು ಕಳವಾಗಿಲ್ಲ. ಆದರೆ ಇದು ಕಾಮುಕನ ಪುಂಡಾಟವೋ..? ಇಲ್ಲಾ ಸೈಕೋನ ಹುಚ್ಚಾಟವೋ..ಎಂಬ ಹಲವು ಪ್ರಶ್ನೆಗಳಿಗೆ ಮಾತ್ರ ಇನ್ನೂ ಉತ್ತರ ಸಿಕ್ಕಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.