ಉಗ್ರರಿಗೆ ಆರ್ಥಿಕ ನೆರವು: ಕಾಶ್ಮೀರದ ಮಾಜಿ ಶಾಸಕ ಬಂಧನ!

By Web Desk  |  First Published Aug 11, 2019, 10:22 AM IST

ಉಗ್ರರಿಗೆ ಆರ್ಥಿಕ ನೆರವು: ಕಾಶ್ಮೀರದ ಮಾಜಿ ಶಾಸಕ ರಶೀದ್‌ ಬಂಧಿಸಿದ ಎನ್‌ಐಎ| ನ್ಯಾಯಾಲಯ ಆತನನ್ನು 4 ದಿನಗಳ ಕಾಲ ಎನ್‌ಐಎ ವಶಕ್ಕೆ ಒಪ್ಪಿಸಿದೆ


ನವದೆಹಲಿ[ಆ.11]: ಭಯೋತ್ಪಾದಕರಿಗೆ ಆರ್ಥಿಕ ನೆರವು ನೀಡಿದ ಆರೋಪ ಪ್ರಕರಣದಲ್ಲಿ ಜಮ್ಮು- ಕಾಶ್ಮೀರದ ಮಾಜಿ ಶಾಸಕ ರಶೀದ್‌ ಎಂಜಿನಿಯರ್‌ರನ್ನು ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ಶನಿವಾರ ಬಂಧಿಸಿದೆ.

ಬಳಿಕ ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಈ ವೇಳೆ ನ್ಯಾಯಾಲಯ ಆತನನ್ನು 4 ದಿನಗಳ ಕಾಲ ಎನ್‌ಐಎ ವಶಕ್ಕೆ ಒಪ್ಪಿಸಿದೆ.

Tap to resize

Latest Videos

ಭಯೋತ್ಪಾದಕರಿಗೆ ಹಣಕಾಸು ನೆರವು ನೀಡಿದ ಆರೋಪದ ಮೇಲೆ ರಶೀದ್‌ನನ್ನು ಭಯೋತ್ಪಾದನಾ ನಿಗ್ರಹ ದಳ ತನಿಖೆ ನಡೆಸುತ್ತಿತ್ತು. ಇನ್ನು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತ್ಯೇಕತಾವಾದಿಗಳಾದ ಶಬ್ಬೀರ್‌ ಶಾ, ಮಸ್ರತ್‌ ಅಲಾಂ, ಆಸಿಯಾ ಅಂದ್ರಾಬಿ ಈಗಾಗಲೇ ಬಂಧಿಸಲ್ಪಟ್ಟಿದ್ದಾರೆ.

click me!