
ಬೆಂಗಳೂರು (ಡಿ.12): ವಿಧಾನಸಭೆ ಚುನಾವಣೆ ಆರಂಭಕ್ಕೂ ಮುನ್ನವೇ ಜೆಡಿಎಸ್ನಲ್ಲಿ ಗೌಡರ ಕುಟುಂಬದಿಂದ ನಾಲ್ವರು ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.
ಎಚ್'ಡಿ ಕುಮಾರಸ್ವಾಮಿ, ರೇವಣ್ಣ, ಅನಿತಾ ಕುಮಾರಸ್ವಾಮಿ ಪ್ರಜ್ವಲ್ ರೇವಣ್ಣ ಕೂಡ ಸ್ಪರ್ಧಿಸಲಿದ್ದಾರೆ ಎಂಬುದುವುದು ಬಹುತೇಕ ಖಚಿತವಾಗಿದೆ. ಗೌಡರ ಕುಟುಂಬದಲ್ಲಿ ಎಷ್ಟು ಜನ ಸ್ಪರ್ಧಿಸುತ್ತಾರೆ ಎಂಬುದರ ಕುರಿತು ತೀವ್ರ ಕುತೂಹಲವಿತ್ತು. ಅಲ್ಲದೇ ಗೌಡರ ಕುಟುಂಬದಲ್ಲಿ ಹೆಚ್ಚು ಮುಖಂಡರು ಚುನಾವಣೆಗೆ ಸ್ಪರ್ಧಿಸುವುದರಿಂದ ಕುಟುಂಬ ರಾಜಕಾರಣ ಎಂಬ ಅಪವಾದಕ್ಕೆ ಗುರಿಯಾಗುವ ಭೀತಿಯ ಮಧ್ಯೆಯೂ ನಾಲ್ವರು ಕಣಕ್ಕಿಳಿಯುವುದು ಬಹುತೇಕ ನಿಶ್ಚಿತವಾಗಿದೆ. ಇನ್ನು ಈ ನಿರ್ಧಾರ ಗೌಡ ಕುಟುಂಬದಲ್ಲಿ ಕಲಹಕ್ಕೂ ಕಾರಣವಾಗಲಿದೆಯೇ ಎಂಬ ಅನುಮಾನ ಮೂಡಿದೆ. ಅನಿತಾ ಕುಮಾರಸ್ವಾಮಿ ಸ್ಪರ್ಧಿಸುವುದಾದರೇ ನಾನು ಸ್ಪರ್ಧಿಸುತ್ತೇನೆ ಎಂದು ಭವಾನಿ ರೇವಣ್ಣ ಬೇಡಿಕೆ ಇಡುವ ಲಕ್ಷಣಗಳಿವೆ. ಭವಾನಿ ರೇವಣ್ಣ ಸ್ಪರ್ಧಿಸಲು ಇಚ್ಛಿಸಿದರೆ ಮತ್ತೆ ಕುಟುಂಬದಲ್ಲಿ ಟಿಕೆಟ್ ಕಲಹ ಮುಂದುವರಿಯುವ ಲಕ್ಷಣಗಳು ಇವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.