
ಬೆಂಗಳೂರು(ಫೆ. 06): ಕೊತ್ತನೂರಿನಲ್ಲಿ ನಡೆದಿದ್ದ ಉಗಾಂಡ ಯುವತಿ ಫ್ಲೋರೆನ್ಸ್ ಕೊಲೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಆರೋಪಿ ಇಶಾನ್ ವಿಚಾರಣೆ ನಡೆಸುತ್ತಿರುವ ಪೊಲೀಸರಿಗೆ ಒಂದು ಇಂಟ್ರಸ್ಟಿಂಗ್ ಮಾಹಿತಿ ಸಿಕ್ಕಿದೆ. ಅಂದಿನ ಕೊಲೆಗೆ ಕಾರಣವಾಗಿದ್ದು ಎರಡನೇ ಬಾರಿ ನಡೆದ ಸೆಕ್ಸ್ ಅಟೆಂಪ್ಟ್.
ಐದು ಸಾವಿರ ರೂಪಾಯಿ ಹಣಕ್ಕೆ ಸೆಕ್ಸ್'ಗಾಗಿ ಇಶಾನ್ ಮತ್ತು ಫ್ಲೋರೆನ್ಸ್ ನಡುವೆ ಒಪ್ಪಂದವಾಗಿರುತ್ತದೆ. ಫ್ಲೋರೆನ್ಸ್ ಪ್ರಕಾರ ಆ ಒಪ್ಪಂದವಾಗಿದ್ದು ಕೇವಲ ಒಂದು ಬಾರಿಗೆ ಮಾತ್ರ. ಆದ್ರೆ ಕುಡಿತದ ನಶೆಯಲ್ಲಿದ್ದ ಇಶಾನ್ ಆ ರಾತ್ರಿ 2 ಬಾರಿ ಆಕೆಯೊಂದಿಗೆ ಸೆಕ್ಸ್ ಮಾಡಿರುತ್ತಾನೆ. ಸೆಕ್ಸ್ ಮುಗಿದ ಮೇಲೆ ಒಪ್ಪಂದವಾದಂತೆ ಇಶಾನ್ ಉಗಾಂಡ ಯುವತಿಗೆ 5 ಸಾವಿರ ಹಣ ಕೊಟ್ಟಿರುತ್ತಾನೆ. ಆದ್ರೆ ಈ ವೇಳೆ ಫ್ಲೋರೆನ್ಸ್ ಕಿರಿಕ್ ಮಾಡುತ್ತಾಳೆ. ಎರಡು ಬಾರಿ ಸೆಕ್ಸ್ ಮಾಡಿದ್ದರಿಂದ 10 ಸಾವಿರ ಕೊಡಬೇಕು ಅಂತ ಬೇಡಿಕೆಯಿಟ್ಟಿರುತ್ತಾಳೆ. ಈ ವೇಳೆ ಇಬ್ಬರ ನಡುವೆ ಜಗಳ ಆರಂಭವಾಗಿದೆ. ಇದು ವಿಕೋಪಕ್ಕೆ ತಿರುಗಿದಾಗ ಫ್ಲೋರೆನ್ಸ್ ಮನೆಯಲ್ಲಿನ ಚಾಕುವಿನಿಂದ ಇಶಾನ್ ಮೇಲೆ ಆರು ಬಾರಿ ಹಲ್ಲೆ ನಡೆಸಿರುತ್ತಾಳೆ. ಸಿಟ್ಟಿಗೆದ್ದ ಇಶಾನ್ ಚಾಕುವನ್ನು ಕಿತ್ತುಕೊಂಡು ಆಕೆಯನ್ನೇ ಬರ್ಬರವಾಗಿ ಕೊಲೆ ಮಾಡಿಬಿಡುತ್ತಾನೆ. ವಿಚಾರಣೆ ವೇಳೆ ಈ ವಿಷಯವನ್ನು ಇಶಾನ್ ಪೊಲೀಸರಿಗೆ ತಿಳಿಸಿದ್ದಾನೆ.
- ರಮೇಶ್ ಕೆ.ಹೆಚ್., ಸುವರ್ಣನ್ಯೂಸ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.