ಮಧುಮೇಹದಿಂದ ಬಳಲುತ್ತಿರುವವರಿಗೆ ಇದೆ ಸಿಹಿ ಸುದ್ದಿ

By Suvarna Web DeskFirst Published Jul 14, 2017, 6:31 PM IST
Highlights

ರಕ್ತದಲ್ಲಿರುವ ಗ್ಲುಕೋಸ್ ಅಂಶದ ಪರಿಮಾಣ ಸುಲಭವಾಗಿ  ತಿಳಿದುಕೊಳ್ಳುವಂತಾಗಲು ಬ್ರಿಟನ್ ವಿಜ್ಞಾನಿಗಳು ನೋವುತರಹಿತ ವಿಧಾನವನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಹೊಸ ವಿಧಾನ ಕ್ಲಿನಿಕಲ್ ಪರೀಕ್ಷೆಗಳಲ್ಲಿ  ಅಂಗೀಕೃತಗೊಂಡರೆ, ಮಧುಮೇಹಿಗಳು ಮೊಬೈಲ್ ಆ್ಯಪ್‌ ಮೂಲಕ ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ತಿಳಿದುಕೊಳ್ಳಬಹುದಾಗಿದೆಯೆಂದು ಡೈಲಿ ಎಕ್ಸ್’ಪ್ರೆಸ್ ವರದಿ ಮಾಡಿದೆ.

ಬ್ರಿಟನ್’ನ ನಾಲ್ಕು ಕೇಂದ್ರಗಳಲ್ಲಿ ಮುಂಬರುವ ತಿಂಗಳಿನಲ್ಲಿ ಈ ಆ್ಯಪ್ ವೈದ್ಯಕೀಯ ಪರೀಕ್ಷೆಗೊಳಪಡಲಿದೆ. ಈ ಆ್ಯಪ್ ವಿಧಾನ ಯಶಸ್ವಿಯಾದಲ್ಲಿ ಮಧುಮೇಹಿಗಳು ಇನ್ಮುಂದೆ ರಕ್ತ ಪರೀಕ್ಷಿಸಲು ಹಲವಾರು ಬಾರಿ ಸೂಜಿ ಚುಚ್ಚಿಸಿಕೊಂಡು, ರಕ್ತ ತೆಗೆಯುವ ಅವಶ್ಯಕತೆ ಇರುವುದಿಲ್ಲವೆನ್ನಲಾಗಿದೆ. ಹೊಸ ಆ್ಯಪ್‌ ಟೈಪ್ 1 ಹಾಗೂ ಟೈಪ್ 2  ಬಗೆಯ ಮಧುಮೇಹ ಕಾಯಿಲೆ ಇರುವವರಿಗೂ ಸಹಕಾರಿಯಾಗಲಿದೆ ಎಂದು ಹೇಳಲಾಗಿದೆ.

ಹೇಗೆ ಕೆಲಸ ಮಾಡುತ್ತದೆ?

ಮಧುಮೇಹ ಕಾಯಿಲೆ ಇರುವವರು, ಸ್ಮಾರ್ಟ್ ಫೋನ್’ನಲ್ಲಿ ಆ್ಯಪನ್ನು ಡೌನ್’ಲೋಡ್ ಮಾಡಿಕೊಳ್ಳಬೇಕು. ಬಳಿಕ ಫೋನ್ ಕ್ಯಾಮೆರಾ ಲೆನ್ಸ್ ಮೇಲೆ ಬೆರಳತುದಿ ಇಡಬೇಕು. ಆಗ ಕ್ಯಾಮೆರಾ ಮೂಲಕ ವ್ಯಕ್ತಿಯ ಹೃದಯಬಡಿತ, ಉಷ್ಣಾಂಶ, ರಕ್ತದೊತ್ತಡ ಹಾಗೂ ರಕ್ತದ ಆಮ್ಲಜನಕ ಪ್ರಮಾಣ ಮುಂತಾದ ವಿವರಗಳನ್ನು ಆ್ಯಪ್‌ ಸಂಗ್ರಹಿಸುತ್ತದೆ. ಹೊಸ ಆ್ಯಪ್‌’ನಲ್ಲಿ  ಇನ್ಸುಲಿನ್ ಪ್ರತಿರೋಧ ಮಟ್ಟವನ್ನು ಕೂಡಾ ತಿಳಿದುಕೊಳ್ಳಬಹುದಾಗಿದೆ. ಆ ಮೂಲಕ ಮಧುಮೇಹವಿರುವುದನ್ನು ಬೇಗನೆ ಪತ್ತೆಮಾಡಿಕೊಳ್ಳಬಹುದಾಗಿದೆ. ರಕ್ತದಲ್ಲಿರುವ ಗ್ಲುಕೋಸ್ ಸಾಂದ್ರತೆಯು ವ್ಯಕ್ತಿಯ ನಾಡಿ ಮಿಡಿತದೊಂದಿಗೆ ಸಂಬಂಧವಿದೆ. ನಾಡಿ ಮಿಡಿತದಲ್ಲಾಗುವ ಬದಲಾವಣೆಗಳ ಆಧಾರದಲ್ಲಿ ಆ್ಯಪ್‌ ಸಕ್ಕರೆ ಪ್ರಮಾಣವನ್ನು ಪತ್ತೆ ಹಚ್ಚುತ್ತದೆ.

click me!