ಕಲಬುರಗಿ ಜಿಲ್ಲಾಸ್ಪತ್ರೆಯ ದಿಟ್ಟ ಹೆಜ್ಜೆ : ಮಗು ಅದಲು ಬದಲು ತಡೆಗೆ 'ಬೇಬಿ ಬ್ಯಾಂಡ್'

Published : Mar 09, 2017, 03:38 AM ISTUpdated : Apr 11, 2018, 12:45 PM IST
ಕಲಬುರಗಿ ಜಿಲ್ಲಾಸ್ಪತ್ರೆಯ ದಿಟ್ಟ ಹೆಜ್ಜೆ : ಮಗು ಅದಲು ಬದಲು ತಡೆಗೆ 'ಬೇಬಿ ಬ್ಯಾಂಡ್'

ಸಾರಾಂಶ

ಆಸ್ಪತ್ರೆಗಳಲ್ಲಿ ಮಗು ಅದಲು ಬದಕು ಆಗಿರುವ ಪ್ರಕರಣಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ಹಲವು ಬಾರಿ ನಡೆದಿವೆ. ನನ್ನ ಗಂಡು ಮಗುವನ್ನು ವೈದ್ಯರೇ ಬದಲಾಯಿಸಿ ಹೆಣ್ಣು ಮಗು ನೀಡಿದ್ದಾರೆ ಅಂತೆಲ್ಲಾ ಪಾಲಕರು ಸಿಬ್ಬಂದಿ ವಿರುದ್ಧ ಸಿಡಿದೆದ್ದ ಘಟನೆಗಳು ಜರುಗಿವೆ. ಇಂತಹ ಅಚಾತುರ್ಯ ತಡೆಗೆ ಕಲಬುರಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆ ಹೊಸ ಕ್ರಮ ಕೈಗೊಂಡಿದೆ. ಅದುವೇ ಬೇಬಿ ಬ್ಯಾಂಡ್ ಇದೇನಿದು ಬೇಬಿ ಬ್ಯಾಂಡ್ ಅನ್ನೋ ಕುತೂಹಲನಾ? ಹಾಗಾದರೆ ಈ ಸ್ಟೋರಿ ನೋಡಿ.

ಕಲಬುರಗಿ(ಮಾ.09): ಆಸ್ಪತ್ರೆಗಳಲ್ಲಿ ಮಗು ಅದಲು ಬದಕು ಆಗಿರುವ ಪ್ರಕರಣಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ಹಲವು ಬಾರಿ ನಡೆದಿವೆ. ನನ್ನ ಗಂಡು ಮಗುವನ್ನು ವೈದ್ಯರೇ ಬದಲಾಯಿಸಿ ಹೆಣ್ಣು ಮಗು ನೀಡಿದ್ದಾರೆ ಅಂತೆಲ್ಲಾ ಪಾಲಕರು ಸಿಬ್ಬಂದಿ ವಿರುದ್ಧ ಸಿಡಿದೆದ್ದ ಘಟನೆಗಳು ಜರುಗಿವೆ. ಇಂತಹ ಅಚಾತುರ್ಯ ತಡೆಗೆ ಕಲಬುರಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆ ಹೊಸ ಕ್ರಮ ಕೈಗೊಂಡಿದೆ. ಅದುವೇ ಬೇಬಿ ಬ್ಯಾಂಡ್ ಇದೇನಿದು ಬೇಬಿ ಬ್ಯಾಂಡ್ ಅನ್ನೋ ಕುತೂಹಲನಾ? ಹಾಗಾದರೆ ಈ ಸ್ಟೋರಿ ನೋಡಿ.

ಈ ಹಾಲುಗಲ್ಲದ ಮುದ್ದು ಕಂದಮ್ಮಗಳನ್ನ ನೋಡಿದ್ರೆ ಮುದ್ದಾಡ್ಬೇಕು ಅಂತ ಅನ್ನಿಸುತ್ತದೆ ಅಲ್ವಾ? ಮಕ್ಕಳ ಮೇಲಿನ ಈ ಮೋಹವೇ ಕೆಲವೊಮ್ಮೆ ಗೊಂದಲ ಸೃಷ್ಟಿಸಿ ಬಿಡುತ್ತದೆ. ನನ್ನ ಮಗುವನ್ನು ಅದಲು ಬದಲು ಮಾಡಿ ಕೊಟ್ಟಿದ್ದಾರೆ. ನನ್ನ ಮಗು ಇದಲ್ಲ ಅದು ನನ್ನ ಮಗು ಅಂತ ಹೆತ್ತವರು ಆಸ್ಪತ್ರೆಗಳಲ್ಲಿ ಜಗಳಕ್ಕೆ ನಿಂತ ಉದಾಹರಣೆಗಳಿವೆ. ಅಪರೂಪಕ್ಕೆ  ಕೆಲ ಸಿಬ್ಬಂದಿ ದುರುದ್ದೇಶದಿಂದ ಮಗು ಬದಲಾವಣೆ ಮಾಡಿರಲೂಬಹುದು. ಇಲ್ಲವೇ ಇನ್ನು ಕೆಲವೊಮ್ಮೆ ಸಿಬ್ಬಂದಿಗಳ ಅಚಾತುರ್ಯದಿಂದಲೂ ಈ ಅದಲು ಬದಲು ಆಗಿರಲೂ ಬಹುದು. ಆದರೆ, ಹೆತ್ತವರ ಪಾಲಿಗೆ ಮಾತ್ರ ಸಹಿಸಲು ಅಸಾಧ್ಯ. ಇಂತಹ ಗೊಂದಲಗಳಿಗೆ ಕಡಿವಾಣ ಹಾಕಲು ಕಲಬುರಗಿ ಜಿಲ್ಲಾಸ್ಪತ್ರೆಯಲ್ಲಿ ಮಗು ಜನಿಸಿದ ತಕ್ಷಣವೇ ಅಂಗಾಲಿನ ಸ್ಕ್ಯಾನ್ ಮಾಡಿ ಕೈಗೆ ಬೇಬಿ ಬ್ಯಾಂಡ್ ಕಟ್ಟಲಾಗುತ್ತದೆ.

ಮಗು ಜನಿಸಿದ ತಕ್ಷಣವೇ ಅಂಗಾಲಿನ ಸ್ಕ್ಯಾನ್ ಮಾಡಲಾಗುತ್ತೆ. ಆ ಸ್ಕ್ಯಾನ್ ಕಾಪಿ ಆಧರಿಸಿಯೇ ಒಂದು ಫೈಲ್ ರೆಡಿಯಾಗುತ್ತದೆ. ಮಗುವಿನ ತಾಯಿಯ ಹೆಸರು, ಮಗುವಿನ ಲಿಂಗ, ಜನನ ಸಮಯ ಸೇರಿ ಅತ್ಯುಪಯುಕ್ತ ಮಾಹಿತಿಯನ್ನ ಇದು ಹೊಂದಿರುತ್ತದೆ. ಈ ಮಾಹಿತಿ ಆಧರಿಸಿ ಮಗುವಿನ ಕೈಗೆ ಬೇಬಿ ಬ್ಯಾಂಡ್ ಕಟ್ಟಲಾಗುತ್ತದೆ. ಹಾಗಾಗಿ ಬಲು ಸಲೀಸಾಗಿ ಮಗು ಯಾವ ತಾಯಿಯದ್ದು ಎನ್ನುವ ಗುರುತು ಹಿಡಿಯಬಹುದು.

ಕಳೆದ ಆರು ತಿಂಗಳ ಹಿಂದೆ ಇದೇ ಆಸ್ಪತ್ರೆಯಲ್ಲಿ ಮಗು ಅದಲು ಬದಲಾದ ಪ್ರಕರಣ ತೀವ್ರ ಗಲಾಟೆಗೆ ಕಾರಣವಾಗಿತ್ತು. ಗಂಡು ಮಗು ನನ್ನದು ಅಂತ ಇಬ್ರು ತಾಯಂದಿರು ಪಟ್ಟು ಹಿಡಿದು ಕುಳಿದಿದ್ದರು. ಹೆಣ್ಣು ಮಗುವಿಗೆ ಇಬ್ಬರೂ ಹಾಲು ಉಣಿಸದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಕಡೆಗೆ ಹಿರಿಯ ವೈದ್ಯರು ಮಧ್ಯ ಪ್ರವೇಶಿಸಿ ಇಬ್ಬರೂ ತಾಯಂದಿರು ಮತ್ತು ಪೋಷಕರಿಗೆ ಯಾವ ಮಗು ಯಾರದ್ದು ಅಂತ ತಿಳಿ ಹೇಳಿ ಒಪ್ಪಿಸುವಲ್ಲಿ ಸಾಕು ಸಾಕಾಗಿ ಹೋಗಿತ್ತು. ಇಂತಹ ಪ್ರಕರಣ ಮರುಕಳಿಸದಂತೆ ಕಲಬುರಗಿ ಜಿಲ್ಲಾಸ್ಪತ್ರೆ ಕೈಗೊಂಡಿರುವ ಈ ಬೇಬಿ ಬ್ಯಾಂಡ್ ಕ್ರಮ ಪೋಷಕರಿಗೆ ಮಾತ್ರವಲ್ಲ ಆಸ್ಪತ್ರೆಯ ಸಿಬ್ಬಂದಿಗೂ ನೆಮ್ಮದಿ ತಂದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Uttara Kannada: ಆಸ್ಪತ್ರೆಗೆ ಹೋಗಿದ್ದ ಗರ್ಭಿಣಿ ಹುಟ್ಟುಹಬ್ಬದಂದೇ ಸಾವು; ಹೊಟ್ಟೆಯಲ್ಲೇ ಅಸುನೀಗದ ಮಗು!
ಯಕ್ಷಗಾನ ಕಲಾವಿದರ ಅಪಮಾನ: 'ಬಿಳಿಮಲೆಗೆ ಒಂದು ನೋಟಿಸ್ ಕೊಡೋಕೂ ಕಷ್ಟವೇ? ಸುನೀಲ್ ಕುಮಾರ್ ಪ್ರಶ್ನೆ, ಈ ವಿಷಯ ದೊಡ್ಡದು ಮಾಡೋದು ಬೇಡ ಎಂದ ತಂಗಡಗಿ