ಹೊಸ ಹಲ್ಲಿ ತಳಿಗೆ ಬೆಂಗಳೂರು ವಿಜ್ಞಾನಿಯ ಹೆಸರು

By Internet deskFirst Published Sep 28, 2016, 6:54 PM IST
Highlights

ಮುಂಬೈ(ಸೆ.29): ಗೋರೆಗಾಂವ್‌ನ ಆರೆ ಕಾಲನಿ ಮತ್ತು ಠಾಣೆಯ ಬಾದಲ್‌ಪುರ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿರುವ ನೆಲದಲ್ಲಿ ವಾಸಿಸುವ ಹೊಸ ಜಾತಿಯ ಹಲ್ಲಿಗೆ ಬೆಂಗಳೂರು ಮೂಲದ ವಿಜ್ಞಾನಿ ವರಾದ್ ಗಿರಿಯವರ ಹೆಸರನ್ನಿಡಲಾಗಿದೆ ಎಂದು ‘ದ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ. ಆಗ್ನೇಯ ಏಷ್ಯಾ, ಭಾರತ ಮತ್ತು ಶ್ರೀಲಂಕಾದಲ್ಲಿ ಕಂಡು ಬರುವ ಈ ಹಲ್ಲಿ ಜಾತಿಯ ಪ್ರಾಣಿ ಗೆಕೊಯೆಲ್ಲ ಉಪಜಾತಿಗೆ ಸೇರಿದುದಾಗಿದೆ. ಈ ಹಲ್ಲಿಗಳು ಅರಣ್ಯಗಳಲ್ಲಿ ತರಗೆಲೆಗಳ ಮೇಲೆ ಇರುತ್ತವೆ.

ಬೆಂಗಳೂರಿನ ರಾಷ್ಟ್ರೀಯ ಜೈವಿಕ ವಿಜ್ಞಾನಗಳ ಕೇಂದ್ರದ ಝೀಶನ್ ಮಿರ್ಜಾ ಮತ್ತು ಅನುರಾಗ್ ಮಿಶ್ರಾ, ಬಾಂಬೆ ನೈಸರ್ಗಿಕ ಇತಿಹಾಸ ಸಮಾಜದ ಸೌನಕ್ ಪಾಲ್‌ರೊಂದಿಗೆ ಅಮೆರಿಕದ ವಿಲ್ಲನೊವ ವಿಶ್ವವಿದ್ಯಾಲಯದ ಇಶಾನ್ ಅಗರ್ವಾಲ್ ಮತ್ತು ಆರೊಣ್ ಬಾಯರ್‌ರ ಹಲವು ವರ್ಷಗಳ ಕಾಲದ ಸೂಕ್ಷ್ಮ ಪ್ರಯತ್ನಗಳಿಂದ ಇದು ಸಾಧ್ಯವಾಗಿದೆ ಎಂದು ಗಿರಿ ಹೇಳಿದ್ದಾರೆ.

Latest Videos

ಸಿರ್ಟೊಡಾಕ್ಟಿಲಸ್ ವರದಗಿರಿ ಅಥವಾ ‘ಗಿರಿ’ಸ್ ಗೆಕೊಯೆಲ್ಲ ಎಂದು ನಾಮಕರಣಗೊಂಡಿರುವ ಹೊಸ ತಳಿಗೆ ಈ ಹಿಂದೆ ಗೆಕೊಯೆಲ್ಲ ಕೊಲ್ಲೆಗಾಲೆನ್ಸಿಸ್ ಎಂದು ಹೇಳಲಾಗುತಿತ್ತು. ಪ್ರಾಣಿಯ ರಚನಾತ್ಮಕ ವಿಶ್ಲೇಷಣೆ ಮತ್ತು ಡಿಎನ್‌ಎ ದತ್ತಾಂಶದ ಆಧಾರದಲ್ಲಿ ಇದೊಂದು ಹೊಸ ತಳಿ ಎಂದು ಅಗರ್ವಾಲ್ ಮತ್ತು ಅವರ ಸಹೋದ್ಯೋಗಿಗಳು ಪ್ರತಿಪಾದಿಸಿದ್ದಾರೆ.

click me!