ಮೊಬೈಲ್‌ ಒತ್ತಿದರೆ ರಕ್ಷಣೆಗೆ ಬರ್ತಾರೆ ಪೊಲೀಸರು!

First Published Jun 20, 2018, 7:54 AM IST
Highlights

ಪೊಲೀಸ್‌ ಸೇವೆ ಮತ್ತಷ್ಟುಜನಸ್ನೇಹಿಗೊಂಡಿದ್ದು, ಇನ್ನು ಮುಂದೆ ಠಾಣೆಗಳು ಸೇರಿದಂತೆ ಪೊಲೀಸರ ಸಮಗ್ರ ಮಾಹಿತಿಯನ್ನು ನಾಗರಿಕರು ಆ್ಯಪ್‌ ಮೂಲಕ ಪಡೆದುಕೊಳ್ಳಬಹುದಾಗಿದೆ. ಇದಕ್ಕಾಗಿ ‘ಕೆಎಸ್‌ಪಿ’ ಎಂಬ ಹೆಸರಿನಲ್ಲಿ ಹೊಸ ಆ್ಯಪ್‌ ಸಿದ್ಧಪಡಿಸಿರುವ ಇಲಾಖೆಯು ಮಂಗಳವಾರದಿಂದ ಅದನ್ನು ಸಾರ್ವಜನಿಕರ ಬಳಕೆಗೆ ಬಿಡುಗಡೆಗೊಳಿಸಿದೆ.
 

ಬೆಂಗಳೂರು (ಜೂ. 20):  ಪೊಲೀಸ್‌ ಸೇವೆ ಮತ್ತಷ್ಟುಜನಸ್ನೇಹಿಗೊಂಡಿದ್ದು, ಇನ್ನು ಮುಂದೆ ಠಾಣೆಗಳು ಸೇರಿದಂತೆ ಪೊಲೀಸರ ಸಮಗ್ರ ಮಾಹಿತಿಯನ್ನು ನಾಗರಿಕರು ಆ್ಯಪ್‌ ಮೂಲಕ ಪಡೆದುಕೊಳ್ಳಬಹುದಾಗಿದೆ.

ಇದಕ್ಕಾಗಿ ‘ಕೆಎಸ್‌ಪಿ’ ಎಂಬ ಹೆಸರಿನಲ್ಲಿ ಹೊಸ ಆ್ಯಪ್‌ ಸಿದ್ಧಪಡಿಸಿರುವ ಇಲಾಖೆಯು ಮಂಗಳವಾರದಿಂದ ಅದನ್ನು ಸಾರ್ವಜನಿಕರ ಬಳಕೆಗೆ ಬಿಡುಗಡೆಗೊಳಿಸಿದೆ.

ಈ ಆ್ಯಪ್‌ನಲ್ಲಿ ಪೊಲೀಸ್‌ ಠಾಣೆಗಳು, ಆ ಠಾಣೆಗೆ ಸಂಬಂಧಪಟ್ಟಅಧಿಕಾರಿಗಳ ದೂರವಾಣಿ ಸಂಖ್ಯೆ, ಇ-ಮೇಲ್‌ ಹಾಗೂ ದೂರವಾಣಿ ಸಂಖ್ಯೆ ಸೇರಿದಂತೆ ಸಂಪೂರ್ಣ ವಿವರ ಲಭ್ಯವಿದೆ. ಅಲ್ಲದೆ ಸಮೀಪದ ಠಾಣೆಗೆ ನೀವಿರುವ ಜಾಗದಿಂದ ಹೇಗೆ ತಲುಪಬೇಕು ಹಾಗೂ ಎಷ್ಟುದೂರವಿದೆ ಎಂಬ ಮಾಹಿತಿ ಸಹ ತಿಳಿಸಲಾಗಿದೆ.

ನೀವು ಯಾವುದೇ ಅಪಾಯಕ್ಕೆ ಸಿಲುಕಿದರೆ ‘ಎಸ್‌ಓಎಸ್‌’ ಎಂಬ ಬಟನ್‌ ಒತ್ತಿದರೆ ತಕ್ಷಣವೇ ಪೊಲೀಸರು ರಕ್ಷಣೆಗೆ ಧಾವಿಸಲಿದ್ದಾರೆ. ನೀವು ತಿಳಿಸಿದ ಮೊಬೈಲ್‌ ನಂಬರ್‌ಗೆ ನೀವಿರುವ ಜಾಗದ ಮಾಹಿತಿ ಸಮೇತ ಸಂದೇಶ ಬರುತ್ತದೆ. ಅಲ್ಲದೆ, ಕಳುವಾದ ವಾಹನಗಳು, ಕಾಣೆಯಾದವರ ಬಗ್ಗೆ ಎಫ್‌ಐಆರ್‌ ಕುರಿತ ಮಾಹಿತಿಯನ್ನು ಆ್ಯಪ್‌ನಲ್ಲಿ ಪಡೆದುಕೊಳ್ಳಬಹುದು.

ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ‘ಕೆಎಸ್‌ಪಿ’ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡ ನಂತರ ಒಂದು ಬಾರಿ ನಿಮ್ಮ ಮೊಬೈಲ್‌ ಸಂಖ್ಯೆ ನಮೂದಿಸಿ ಈ ಸಾಫ್ಟ್‌ವೇರ್‌ ಆಕ್ಟಿವೇಟ್‌ ಮಾಡಿಕೊಳ್ಳಬೇಕು. ಸಾರ್ವಜನಿಕರ ಸಲಹೆ ಸೂಚನೆಗಳನ್ನು ಪಡೆದು ಈ ಆ್ಯಪ್‌ ಮುಂದಿನ ದಿನಗಳಲ್ಲಿ ಮತ್ತಷ್ಟುಜನ ಸ್ನೇಹಿಯಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆ್ಯಪ್‌ ಅನ್ನು ‘KSP’ ಎಂದು ಟೈಪ್‌ ಮಾಡಿ Google playstore ನಲ್ಲಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು. 

click me!