
ನವದೆಹಲಿ(ನ.29): ಹಿಂದಿನ ಯುಪಿಎ ಸರ್ಕಾರ 2010-11ರಲ್ಲಿ ಸಾಧಿಸಿದ್ದ ಎರಡಂಕಿಯ ಶೇ.10.3 ದರದ ಜಿಡಿಪಿ ಬೆಳವಣಿಗೆ ಸೇರಿದಂತೆ 2006ರಿಂದ 11ರವರೆಗಿನ 5 ವರ್ಷಗಳ ಜಿಡಿಪಿ ದರವನ್ನು ಎನ್‌ಡಿಎ ಸರ್ಕಾರ ಇಳಿಸಿದೆ. 2019ರ ಲೋಕಸಭೆ ಚುನಾವಣೆ ಮುನ್ನ ಮೋದಿ ಸರ್ಕಾರ ಕೈಗೊಂಡ ಈ ಕ್ರಮ ಯುಪಿಎ ಹಾಗೂ ಎನ್‌ಡಿಎ ನಡುವೆ ಹೊಸ ಕಾದಾಟಕ್ಕೆ ವೇದಿಕೆ ಮಾಡಿಕೊಟ್ಟಿದೆ.
ಈ ಮುನ್ನ 2004-05ನ್ನು ‘ಮೂಲ ವರ್ಷ’ವಾಗಿ ಜಿಡಿಪಿ ಬೆಳವಣಿಗೆ ದರವನ್ನು ಅಳೆಯಲಾಗಿತ್ತು. ಆದರೆ ಈ ಮೂಲ ವರ್ಷವನ್ನು 2011-12ಕ್ಕೆ ಬದಲಿಸಲು ಈಗ ಕೇಂದ್ರ ಸರ್ಕಾರ ನಿರ್ಧರಿಸಿದೆ. ಹೀಗಾಗಿ 2010-11ರಲ್ಲಿ ಶೇ.10.3 ದರದ ಜಿಡಿಪಿ ಬೆಳವಣಿಗೆಯನ್ನು ಶೇ.8.5ಕ್ಕೆ ಪರಿಷ್ಕರಿಸಿ ಕೇಂದ್ರ ಸಾಂಖ್ಯಿಕ ಸಚಿವಾಲಯ ಬುಧವಾರ ಆದೇಶ ಹೊರಡಿಸಿದೆ. ಭಾರತವು ಆ ಒಂದೇ ವರ್ಷದಲ್ಲಿ ಎರಡಂಕಿ ಪ್ರಗತಿ ದರವನ್ನು ದಾಖಲಿಸಿತ್ತು. ಈಗ ದರ ಪರಿಷ್ಕರಣೆಯಿಂದ ಆ ಎರಡಂಕಿ ಬೆಳವಣಿಗೆಯ ಹಣೆಪಟ್ಟಿ ಕಳಚಿ ಬಿದ್ದಿದೆ.
2006ರಿಂದ 11ರವರೆಗಿನ 5 ವರ್ಷಗಳ ಪ್ರಗತಿ ದರವನ್ನು ಪರಿಷ್ಕರಿಸಲಾಗಿದ್ದು, ಭಾರಿ ಪ್ರಮಾಣದ ಕಡಿಮೆ ಬೆಳವಣಿಗೆಯನ್ನು ಆ ಸಾಲುಗಳಲ್ಲಿ ಭಾರತ ಕಂಡಿತು ಎಂದು ಬಿಂಬಿಸಲಾಗಿದೆ. ಈ ಬಗ್ಗೆ ಸುದ್ದಿಗಾರರು, ‘ಕೇವಲ ಮನಮೋಹನ ಸಿಂಗ್ ಅವಧಿಯ ಜಿಡಿಪಿ ಪರಿಷ್ಕರಿಸಲಾಗಿದೆಯಲ್ಲ’ ಎಂಬ ಪ್ರಶ್ನೆ ಕೇಳಿದಾಗ, ‘ಅರ್ಥವ್ಯವಸ್ಥೆಯ ನೈಜ ಚಿತ್ರಣ ಸಿಗಬೇಕು ಎಂಬ ಉದ್ದೇಶದಿಂದ ಮೂಲ ವರ್ಷವನ್ನು ಬದಲಿಸಿ ಈ ಪರಿಷ್ಕರಣೆ ಮಾಡಲಾಗಿದೆ. ರಾಜಕೀಯ ಉದ್ದೇಶವಿಲ್ಲ’ ಎಂದು ಸರ್ಕಾರದ ಮುಖ್ಯ ಸಾಂಖ್ಯಿಕ ಅಧಿಕಾರಿ ಪ್ರವೀಣ್ ಶ್ರೀವಾಸ್ತವ ಹೇಳಿದ್ದಾರೆ.
--
ವರ್ಷ ಹಿಂದಿನ ದರ ಪರಿಷ್ಕೃತ (%)
2005-06 9.3 7.9
2006-07 9.3 8.1
2007-08 9.8 7.7
2008-09 3.9 3.1
2009-10 8.5 7.9
2010-11 10.5 8.5
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.