ರೈತರ ಹಿತದೃಷ್ಟಿಯಿಂದ ನೂತನ ಬ್ಯಾಂಕ್ ಶಾಖೆ

By Sujatha NRFirst Published Oct 2, 2022, 11:29 PM IST
Highlights

ಜಿಲ್ಲೆಯ ರೈತರ ಹಿತದೃಷ್ಟಿಯಿಂದ ನಾವು ರೈತರ ಮನೆ ಬಾಗಿಲಿಗೆ ಹೋಗಬೇಕೆಂಬ ಸಂಕಲ್ಪದೊಂದಿಗೆ ಇತ್ತೀಚಿನ ದಿನಗಳಲ್ಲಿ ಅನೇಕ ಹೊಸ ಶಾಖೆಗಳನ್ನು ಪ್ರಾರಂಭಿಸುವ ಕೆಲಸ ಡಿಸಿಸಿ ಬ್ಯಾಂಕ್‌ ವತಿಯಿಂದ ಮಾಡಲಾಗುತ್ತಿದೆ 

 ತಾಳಿಕೋಟೆ (ಅ.3) :ಜಿಲ್ಲೆಯ ರೈತರ ಹಿತದೃಷ್ಟಿಯಿಂದ ನಾವು ರೈತರ ಮನೆ ಬಾಗಿಲಿಗೆ ಹೋಗಬೇಕೆಂಬ ಸಂಕಲ್ಪದೊಂದಿಗೆ ಇತ್ತೀಚಿನ ದಿನಗಳಲ್ಲಿ ಅನೇಕ ಹೊಸ ಶಾಖೆಗಳನ್ನು ಪ್ರಾರಂಭಿಸುವ ಕೆಲಸ ಡಿಸಿಸಿ ಬ್ಯಾಂಕ್‌ ವತಿಯಿಂದ ಮಾಡಲಾಗುತ್ತಿದೆ ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಹಾಗೂ ಶಾಸಕ ಶಿವಾನಂದ ಪಾಟೀಲ ಹೇಳಿದರು.

ಶುಕ್ರವಾರ ತಾಲೂಕಿನ ಹಿರೂರ ಗ್ರಾಮದಲ್ಲಿ ಡಿಸಿಸಿ ಬ್ಯಾಂಕ್‌ನ 45ನೇ ನೂತನ ಶಾಖೆ ಉದ್ಘಾಟಿಸಿ ಮಾತನಾಡಿ, ರೈತಾಪಿ ಜನರು ವರ್ತಮಾನ ದಿನದಲ್ಲಿ ಸದೃಢವಾಗಿ ಬೆಳೆಯಬೇಕು. ಅವರು ಬೆಳೆದರೆ ಈ ದೇಶ ಸುಭಿಕ್ಷೆಯಿಂದ ಇರುತ್ತದೆ. ಜಗತ್ತಿನಲ್ಲಿ ಇನ್ನೂ 5 ರಿಂದ 10 ವರ್ಷದ ಹೊತ್ತಿಗೆ ಮನುಷ್ಯನಿಗೆ ತಿನ್ನುವ ಅನ್ನ, ಕುಡಿಯುವ ನೀರು ಕಡಿಮೆಯಾಗುತ್ತದೆ ಎಂದು ಜಗತ್ತಿನ ನಾನಾ ಜನರು ಕಲ್ಪನೆ ಮಾಡುತ್ತಿದ್ದಾರೆ. ಪ್ರಕೃತಿ ಮುನಿದರೆ ಏನೆಲ್ಲಾ ಅವಾಂತರವಾಗುತ್ತದೆ ಎಂಬುದಕ್ಕೆ ಅನೇಕ ಸಾಕ್ಷಿಗಳು ಸಿಗುತ್ತವೆ ಎಂದರು.

ಎಲ್ಲಿ ಬಂಜರು ಭೂಮಿ ಇತ್ತು ಅಲ್ಲಿ ಮಳೆಯಾಗುತ್ತಿದೆ ಇಲ್ಲಿಯವರೆಗೆ ನಮಗೆ ವಿಜಯಪುರ ಜಿಲ್ಲೆಗೆ ಪಂಚನದಿಗಳ ಬೀಡು ಅನ್ನುತ್ತಿದ್ದರು. ಆದರೆ ಬರಗಾಲ ತಪ್ಪಿದಿಲ್ಲಾ ಆದರೆ ಇನ್ನೂ ಬರುವಂತಹ ದಿನಗಳಲ್ಲಿ ಬಂಜರು ಭೂಮಿಹೋಗಿ ಬಂಗಾರದ ಕಡ್ಡಿಯಾಗುತ್ತದೆ ಎಂದರು.

ಅಧ್ಯಕ್ಷತೆವಹಿಸಿದ್ದ ಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ರಾಜಶೇಖರ ಗುಡದಿನ್ನಿ ಮಾತನಾಡಿ, ರೈತರ ಹಿತ ದೃಷ್ಟಿಯಿಂದ ಪ್ರಾರಂಭಿಸಲಾಗುತ್ತಿರುವ ಡಿಸಿಸಿ ಬ್ಯಾಂಕ್‌ ಶಾಖೆಯ ಉಪಯೋಗ ರೈತರು ಪಡೆದು ಆರ್ಥಿಕವಾಗಿ ಸಬಲರಾಗಬೇಕೆಂದರು. ಹಿರೂರ ಅನ್ನದಾನೇಶ್ವರ ಹಿರೇಮಠದ ಗುರು ಜಯ ಸಿದ್ದೇಶ್ವರ ಮಹಾಸ್ವಾಮಿಗಳು ಸಾನ್ನಿಧ್ಯವಹಿಸಿದ್ದರು.

ಡಿಸಿಸಿ ಬ್ಯಾಂಕ್‌ ನಿರ್ದೇಶಕ ಸೋಮನಗೌಡ ಬಿರಾದಾರ, ಎಚ್‌.ಆರ್‌.ಬಿರಾದಾರ, ಹಣಮಂತ್ರಾಯಗೌಡ ಪಾಟೀಲ, ಹಿರೂರ ಗ್ರಾಪಂ ಅಧ್ಯಕ್ಷೆ ವಿಜಯಲಕ್ಷ್ಮೀ ಅಂಗಡಗೇರಿ, ಡಿಸಿಸಿ ಬ್ಯಾಂಕ್‌ ತರಬೇತಿ ಸಂಯೋಜಕ ಆರ್‌.ಎಂ. ಬಣಗಾರ, ವಿಜಯಪುರ ಡಿಸಿಸಿ ಬ್ಯಾಂಕ್‌ ಉಪಪ್ರಧಾನ ವ್ಯವಸ್ಥಾಪಕ ಆರ್‌.ಎಂ. ಪಾಟೀಲ, ಪಿಕೆಪಿಎಸ್‌ ಅಧ್ಯಕ್ಷ ದೇವಿಂದ್ರಪ್ಪಗೌಡ ಬಿರಾದಾರ, ತಮದಡ್ಡಿ ಪಿಕೆಪಿಎಸ್‌ ಅಧ್ಯಕ್ಷ ಚಂದ್ರಶೇಖರ ಕನಕರಡ್ಡಿ, ಶರಣ ಸೋಮನಾಳ ಪಿಕೆಪಿಎಸ್‌ ಅಧ್ಯಕ್ಷ ಶಿವನಗೌಡ ಬಿರಾದಾರ, ಬಳಗಾನೂರ ಪಿಕೆಪಿಎಸ್‌ ಅಧ್ಯಕ್ಷ ಬಾಬುಗೌಡ ಬಿರಾದಾರ, ಸಾಸನೂರ ಪಿಕೆಪಿಎಸ್‌ ಅಧ್ಯಕ್ಷ ಸುರೇಶಗೌಡ ಪಾಟೀಲ, ಹೇಮರಡ್ಡಿ ಮಲ್ಲಮ್ಮ ಬ್ಯಾಂಕ್‌ ಅಧ್ಯಕ್ಷ ಬಿ.ಎನ್‌.ಹಿಪ್ಪರಗಿ, ತಾಪಂ ಮಾಜಿ ಸದಸ್ಯ ಗುರು ಕೊಪ್ಪದ, ಪಿಎಲ್‌ಡಿ ಬ್ಯಾಂಕ್‌ ಸದಸ್ಯ ಬಸನಗೌಡ ಬಗಲಿ, ಸಿ.ಎಸ್‌. ಚೌದ್ರಿ, ಡಿ.ಎಲ್‌. ಕೊಪ್ಪದ, ಎಸ್‌.ಆರ್‌. ಬಿರಾದಾರ, ಎಸ್‌.ಎಚ್‌. ಬಿರಾದಾರ, ಮುದ್ದೇಬಿಹಾಳ ಡಿಸಿಸಿ ಬ್ಯಾಂಕ್‌ ವ್ಯವಸ್ಥಾಪಕ ಪ್ರಕಾಶ ಪಾಟೀಲ, ತಾಳಿಕೋಟೆ ವ್ಯವಸ್ಥಾಪಕ ಆರ್‌.ಜಿ. ಹಿರೂರ, ಹಿರೂರ ಶಾಖಾ ವ್ಯವಸ್ಥಾಪಕ ಬಿ.ಎಸ್‌. ಕಾಂಬಳೆ, ಇತರರಿದ್ದರು.

ಈ ಬ್ಯಾಂಕ್ ಗಳ ಕ್ರೆಡಿಟ್, ಡೆಬಿಟ್ ಕಾರ್ಡ್ ಬಳಸಿ ಹಬ್ಬದ ಶಾಪಿಂಗ್ ಮಾಡಿದ್ರೆ ಆಕರ್ಷಕ ಆಫರ್ ಗಳು!

ಹಬ್ಬಗಳ ಸೀಸನ್ ಪ್ರಾರಂಭವಾಗಿದೆ. ನವರಾತ್ರಿ ರಂಗು ಎಲ್ಲೆಡೆ ಹರಡಿದೆ. ಕೆಲವೇ ದಿನಗಳಲ್ಲಿ ದಸರಾ ಹಬ್ಬವಿದೆ. ಅದಾದ ಕೆಲವು ದಿನಗಳ ಬಳಿಕ ಬೆಳಕಿನ ಹಬ್ಬ ದೀಪಾವಳಿ. ಹಬ್ಬಗಳು ಅಂದ್ರೆ ಖರೀದಿ ಭರಾಟೆ ಕೂಡ ಹೆಚ್ಚಿರುತ್ತದೆ. ಬಟ್ಟೆ, ಒಡವೆ, ಮನೆಗೆ ಅಗತ್ಯವಾದ ಸಾಮಗ್ರಿಗಳು ಹೀಗೆ ಹಬ್ಬದ ಸಂಭ್ರಮ ಹೆಚ್ಚಿಸಲು ಶಾಪಿಂಗ್ ಮಾಡೋದು ಕಾಮನ್. ಹೀಗಾಗಿ ಈ ಹಬ್ಬದ ಸೀಸನ್ ನಲ್ಲಿ ಗ್ರಾಹಕರಿಗೆ ಅನೇಕ ಬ್ಯಾಂಕ್ ಗಳು ಕೂಡ ಆಕರ್ಷಕ ಆಫರ್ ಗಳನ್ನು ಘೋಷಿಸಿವೆ. ಕೆಲವು ಬ್ಯಾಂಕ್ ಗಳು ಕ್ರೆಡಿಟ್, ಡೆಬಿಟ್ ಕಾರ್ಡ್ ಗಳ ಬಳಕೆ ಮೇಲೆ ಡಿಸ್ಕೌಂಟ್ಸ್ ಹಾಗೂ ಕ್ಯಾಶ್ ಬ್ಯಾಕ್ ಗಳನ್ನು ಒದಗಿಸುತ್ತಿವೆ.ಇನ್ನೂ ಕೆಲವು ಬ್ಯಾಂಕುಗಳು ಗೃಹ, ವಾಹನ ಹಾಗೂ ವೈಯಕ್ತಿಕ ಸಾಲಗಳ ಮೇಲೆ ಕೂಡ ಆಕರ್ಷಕ ಆಫರ್ ಗಳನ್ನು ಒದಗಿಸುತ್ತಿವೆ. ಹಬ್ಬದ ಸಮಯದಲ್ಲಿ ಗ್ರಾಹಕರ ಖರೀದಿ ಹೆಚ್ಚಿರುವ ಕಾರಣ ಹಣದ ಅವಶ್ಯಕತೆ ಕೂಡ ಜಾಸ್ತಿ ಇರುತ್ತದೆ. ಹೀಗಾಗಿ ಈ ಸಂದರ್ಭವನ್ನು ಬ್ಯಾಂಕ್ ಗಳು ಕೂಡ ಬಳಸಿಕೊಳ್ಳಲು ಮುಂದಾಗಿವೆ. ಈ ಕಾರಣದಿಂದ ಸಾರ್ವಜನಿಕ ಹಾಗೂ ಖಾಸಗಿ ವಲಯದ ಬ್ಯಾಂಕುಗಳ ವೆಬ್ ಸೈಟ್ ಗಳು ವಿವಿಧ ಆಫರ್ ಗಳಿಂದ ತುಂಬಿ ತುಳುಕುತ್ತಿವೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ), ಪಂಜಾಬ್ ನ್ಯಾಷನಲ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಸೆಂಟ್ರಲ್ ಬ್ಯಾಂಕ್ ಗಳು ಹಬ್ಬದ ಸೀಸನ್ ಗೆ ಏನೆಲ್ಲ ಆಫರ್ ಗಳನ್ನು ನೀಡಿವೆ

 

click me!