ಈ ರಾಷ್ಟ್ರದಲ್ಲಿ ಗಾಂಜಾ ಬಳಕೆಗೆ ಕಾನೂನು ಮಾನ್ಯತೆ ಇದೆ, ಆದರೆ ಮೂಲ ಭೂತ ಹಕ್ಕುಗಳೇ ಇಲ್ಲ. ಸರಕಾರ ಹೇಳಿದಂತೆ ನಾಗರಿಕರು ಬದುಕಬೇಕು. ಯಾವ ರಾಷ್ಟ್ರ ಅಂತೀರಾ?
ಉತ್ತರ ಕೋರಿಯಾ ಎಂದಾಕ್ಷಣ ನಮ್ಮ ತಲೆಯಲ್ಲಿ ಡಿಫರೆಂಟ್ ಲುಕ್ ನ ಸರ್ವಾಧಿಕಾರಿ ಕಿಮ್ ಜಾಂಗ್ ಕಣ್ಣ ಮುಂದೆ ಬರುತ್ತಾರೆ. ಈ ನಾರ್ತ್ ಕೋರಿಯಾ ಬಗ್ಗೆ ಕೆಲ ಆಸಕ್ತಿದಾಯಕ ವಿಚಾರಗಳಿವೆ. ಗೊತ್ತಿರದ ಆ 20 ಸಂಗತಿಗಳನ್ನು ನಾವು ನಿಮ್ಮ ಮುಂದೆ ಇಡುತ್ತಿದ್ದೇವೆ.
1. ಕ್ಯಾಲೆಂಡರ್: ಉತ್ತರ ಕೋರಿಯಾದ ಕ್ಯಾಲೆಂಡರ್ ಆ ದೇಶದ ಸಂಸ್ಥಾಪಕನ ಜನ್ಮ ದಿನಾಂಕಕ್ಕೆ ಬದ್ಧವಾಗಿದೆ. ಇಡೀ ಪ್ರಪಂಚ ಇಂಗ್ಲಿಷ್ ಕ್ಯಾಲೆಂಡರ್ ಬಳಕೆ ಮಾಡಿಕೊಳ್ಳುತ್ತಿದೆ. ಆದರೆ ಉತ್ತರ ಕೋರಿಯಾ ಅಲ್ಲಿಯ ಸಂಸ್ಥಾಪಕ ಕಿಮ್ -2 ಸಂಗ್ ನ ಜನ್ಮ ದಿನ ಏಪ್ರಿಲ್ 15 , 1912 ನ್ನು ಕ್ಯಾಲೆಂಡರ್ ಗೆ ಮಾನದಂಡ ಮಾಡಿಕೊಂಡಿದೆ.
2. ದೇಶದಲ್ಲಿ ಕೇವಲ 3 ಸುದ್ದಿ ವಾಹಿನಿಗಳು: ಉತ್ತರ ಕೋರಿಯಾದಲ್ಲಿ ಮಾಧ್ಯಮಗಳ ಮೇಲೆ ಆಡಳಿತದ ಬಲವಾದ ಹಿಡಿತ ಇದೆ. ಕೇವಲ ಮೂರು ಸುದ್ದಿ ವಾಹಿನಿಗಳು ಇದ್ದು ಯಾವ ಕಾರ್ಯಕ್ರಮ ಪ್ರಸಾರ ಮಾಡಬೇಕು ಎಂಬುದನ್ನು ಸರಕಾರವೇ ನಿರ್ಧರಿಸುತ್ತದೆ.
3. ಪ್ರತಿದಿನ ರಾತ್ರಿ ಪವರ್ ಕಟ್: ಇಂಧನದ ಉಳಿತಾಯ ದೃಷ್ಟಿಯಿಂದ ಪ್ರತಿದಿನ ಪವರ್ ಕಟ್ ಮಾಡಲಾಗುತ್ತದೆ. ಬಾಹ್ಯಾಕಾಶದಿಂದ ತೆಗೆದ ನಾರ್ತ್ ಕೋರಿಯಾದ ಝಗಮಗಿಸುವ ಚಿತ್ರ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ನಂತರ ಪವರ್ ಕಟ್ ತೀರ್ಮಾನ ಮಾಡಲಾಗಿದೆ.
4. ಚುನಾವಣೆ ನಡೆಯುತ್ತೆ!: ಉತ್ತರ ಕೋರಿಯಾದಲ್ಲಿ ಚುನಾವಣೆ ನಡೆಯುತ್ತದೆ ಆದರೆ ಅಭ್ಯರ್ಥಿ ಮಾತ್ರ ಒಬ್ಬರೆ! 1948ರಿಂದ ಹೀಗೆ ನಡೆದುಕೊಂಡೆ ಬಂದಿದೆ. ಮೇಯರ್,ಸ್ಥಳೀಯ ಸಂಸ್ಥೆ ಯಾವ ಯಾವ ಚುನಾವಣೆ ನಡೆದರೂ ಅಭ್ಯರ್ಥಿ ಮಾತ್ರ ಒಬ್ಬರೆ ಆಗಿರುತ್ತದೆ.
5. ಪಾಲಕರೆ ನೀಡಬೇಕು: ಶಾಲೆಗೆ ಮಕ್ಕಳನ್ನು ಕಳಿಸುವ ಪಾಲಕರು ತಮ್ಮ ಮಕ್ಕಳಿಗೆ ಡೆಸ್ಕ್ ಮತ್ತು ಬೆಂಚ್ ನೀಡಬೇಕು.
6. ಮೂರು ಪೀಳಿಗೆ ಶಿಕ್ಷೆ: ವ್ಯಕ್ತಿಯೊಬ್ಬ ತಪ್ಪು ಮಾಡಿದರೆ ಆತನ ಮೊಮ್ಮಕ್ಕಳವರೆಗೂ ಶಿಕ್ಷೆ ನೀಡುವ ಪದ್ಧತಿ ಸಹ ಉತ್ತರ ಕೋರಿಯಾದಲ್ಲಿದೆ. ಎಲ್ಲರನ್ನು ಒಂದೆ ಸಾರಿಗೆ ಜೈಲಿಗೆ ಹಾಕಲಾಗುತ್ತದೆ.
7. ಕ್ರಿಯಾತ್ಮಕ ಯೋಚನೆಗೆ ಜೈಲು: ಕೋರಿಯಾದ ನಿರ್ದೇಶಕ ಶಿಂಗ್ ಸಂಗ್ ಒಕೆ ಮತ್ತು ಆತನ ಪತ್ನಿಯನ್ನು ಸರ್ವಾಧಿಕಾರಿ ಕಿಮ್ ಜಾಂಗ್ ಅಪಹರಣ ಮಾಡುತ್ತಾರೆ. ನಟ ಚೋಲಿ ಇನ್ ಹೂಯ್ ರನ್ನು ಅಪಹರಣ ಮಾಡಿದ ಉದಾಹರಣೆಯೂ ಇದೆ. ಆದರೆ ಕಿಮ್ ಜಾಂಗ್ ಸಲುಗೆ ಗಳಿಸಿಕೊಂಡ ನಿರ್ದೇಶಕ ದಂಪತಿ ಅಲ್ಲಿಂದ ಎಸ್ಕೇಪ್ಆಗುತ್ತಾರೆ.
8. ಕೇವಲ 28 ವೆಬ್ ಸೈಟ್ ಗಳು! ಕ್ವಾನ್ ಯಾನ್ ಮೊಂಗ್ ಎಂದು ಕರೆದುಕೊಳ್ಳುವ ಇಂಟರ್ ನೆಟ್ ನಲ್ಲಿ ಕೇವಲ 28 ಸೈಟ್ ಗಳನ್ನು ಮಾತ್ರ ಬ್ರೌಸ್ ಮಾಡಬಹುದಾಗಿದೆ. ಎಲ್ಲ ಸೈಟ್ ಗಳನ್ನು ಉಚಿತವಾಗಿಯೇ ಬ್ರೌಸ್ ಮಾಡಬಹುದು ಆದರೆ ಲೈಸನ್ಸ್ ಖರೀದಿಗೆ ಬಹಳಷ್ಟು ಹಣ ತೆರಬೇಕು!
9 ಪ್ರೊಪಾಗಾಂಡಾ ಹಳ್ಳಿ: 1953 ರಲ್ಲಿ ಉತ್ತರ ಕೋರಿಯಾ ಮತ್ತು ದಕ್ಷಿಣ ಕೋರಿಯಾ ನಡುವಿನ ಯುದ್ಧ ಸಮಾಪ್ತಿಯಾದಾಗ ಹುಟ್ಟಿಕೊಂಡ ವಿಶಿಷ್ಟ ಹಳ್ಳಿ. ಉತ್ತರ ಕೋರಿಯಾ ಇದನ್ನು ಗಡಿ ಎಂದು ಭಾವಿಸಿದ್ದರೆ, ದಕ್ಷಿಣ ಕೋರಿಯಾ ಇಲ್ಲಿ ಸಕಲ ಅಭಿವೃದ್ಧಿಯಾಗಿದೆ ಎಂದು ಭ್ರಮೆ ಹುಟ್ಟಿಸುವ ಕೆಲಸ ಮಾಡಿಕೊಂಡು ಬರುತ್ತಿದೆ.
10. ಕಿಮ್ ಜಾಂಗ್-2 ದೇಹ ಕಾಯ್ದಿಟ್ಟಿದ್ದಾರೆ: ಕಿಮ್ ಜಾಂಗ್-2 ಶರೀರವನ್ನು ಇನ್ನು ಕಾಯ್ದಿರಿಸಿದ್ದಾರೆ. ಗಾಜಿನ ಮನೆಯಲ್ಲಿ ಇರಿಸಲಾಗಿದ್ದು ಪ್ರವಾಸಿಗರಿಗೂ ಶವಕ್ಕೆ ನಮಸ್ಕಾರ ಮಾಡುವಂತೆ ಕೇಳಿಕೊಳ್ಳಲಾಗುತ್ತದೆ.
11. ನೀಲಿ ಜೀನ್ಸ್ ಗೆ ನಿಷೇಧ: ನೀಲಿ ಜೀನ್ಸ್ ಅನ್ನು ಅಮೆರಿಕದ ಸಾಮಂತಿಕೆ ಎಂದು ಭಾವಿಸಿರುವ ನಾರ್ತ್ ಕೋರಿಯಾ ನಿಷೇಧ ಹೇರಿದೆ.
12.28 ಕೇಶ ವಿನ್ಯಾಸ: ಪುರುಷರು ಕೇವಲ 28 ಬಗೆಯ ಕೇಶ ವಿನ್ಯಾಸ ಮಾಡಿಕೊಳ್ಳಲು ಅವಕಾಶ ಇದೆ.ಸರಕಾರ ನಿಗದಿಪಡಿಸಿದ್ದಕ್ಕಿಂತ ಹೊರತಾದ ಕೇಶ ವಿನ್ಯಾಸ ಮಾಡಿಸಿಕೊಂಡರೆ ಬಂಧನಕ್ಕೆ ಗುರಿಯಾಗಬೇಕಾಗುತ್ತದೆ. ಮದುವೆಯಾಗದ ಮಹಿಳೆ ತಲೆ ಕೂದಲನ್ನು ಸಣ್ಣದಾಗಿರಿಸಿಕೊಳ್ಳಬೇಕು.
13. ಧಾರ್ಮಿಕ ಸ್ವಾತಂತ್ರ್ಯ ಇಲ್ಲ: ಕೋರಿಯಾದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಇಲ್ಲ. ನಾಸ್ತಿಕ ರಾಷ್ಟ್ರ ಎಂದು ಕರೆದುಕೊಂಡಿರುವ ರಾಷ್ಟ್ರದಲ್ಲಿ ಧಾರ್ಮಿಕ ಆಚರಣೆ ಸಲ್ಲ.
14. ಮಾನವ ಮಲವೇ ರಸಗೊಬ್ಬರ: 2008ರಲ್ಲಿ ದಕ್ಷಿಣ ಕೋರಿಯಾ ಉತ್ತರ ಕೋರಿಯಾಕ್ಕೆ ರಸಗೊಬ್ಬರ ಪೂರೈಕೆ ಮಾಡುವುದನ್ನು ನಿಲ್ಲಿಸಿತು. ಇದಕ್ಕೆ ಒಂದು ಯೋಚನೆ ಮಾಡಿದ ಸರಕಾರ ನಾಗರಿಕರು ತಮ್ಮ ಮಲ ಸಂಗ್ರಹಣೆ ಮಾಡಿ ಅಧಿಕಾರಿಗಳಿಗೆ ನೀಡಬೇಕು ಇದನ್ನೆ ನಂತರ ಗೊಬ್ಬರವಾಗಿ ಬಳಕೆ ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಲಾಯಿತು.
15. ನಾಗರಿಕರು ಸರಕಾರದ ಸ್ವತ್ತು: ಕೋರಿಯಾ ರಾಜಧಾನಿ ಪೋಯಿಂಗ್ ಯಾಂಗ್ ನಲ್ಲಿ ವಾಸಿಸುವ ಪ್ರತಿಯೊಬ್ಬರ ಮೇಲೆಯೂ ಸರಕಾರದ ಹಿಡಿತ ಇರುತ್ತದೆ. ರಾಜಧಾನಿಯಿಂದ ಹೊರ ಹೋಗಬೇಕಾದರೆ ಸರಕಾರದ ಅನುಮತಿ ಪಡೆದುಕೊಳ್ಳಬೇಕಾಗುತ್ತದೆ.
16. ಗಾಂಜಾ ಬಳಕೆ ಮುಕ್ತ: ನಾಗರಿಕರ ಮೂಲಭೂತ ಹಕ್ಕುಗಳಿಗೆ ಒಂದು ಕಡೆ ನಿರ್ಬಂಧ ಹೇರಿರುವ ರಾಷ್ಟ್ರದಲ್ಲಿ ಗಾಂಜಾ ಬಳಕೆ ಮುಕ್ತವಾಗಿದೆ!
17. ಸಾರ್ವಜನಿಕ ಶಿಕ್ಷೆ: ಅಪರಾಧ ಪ್ರಕರಣ ಮತ್ತು ದೇಶದ್ರೋಹಕ್ಕೆ ಸಾರ್ವಜನಿಕರ ಎದುರೆ ಘೋರ ಶಿಕ್ಷೆ ನೀಡಲಾಗುತ್ತದೆ, ನೇಣಿಗೆ ಹಾಕುವುದು ಅಥವಾ ಶೂಟ್ ಮಾಡಿ ಸಾಯಿಸುವುದು ದೇಶದಲ್ಲಿ ತುಂಬಾ ಸಾಮಾನ್ಯ.
18. ಬಾಸ್ಕೇಟ್ ಬಾಲ್ ಗೆ ಪ್ರತ್ಯೇಕ ನಿಯಮ: ರಾಷ್ಟ್ರದಲ್ಲಿ ಪ್ರತ್ಯೇಕ ನಿಯಮ ಮಾಡಿಕೊಳ್ಳಲಾಗಿದ್ದು ಪಾಯಿಂಟ್ ಗಳ ಲೆಕ್ಕಾಚಾರ ಸಾಮಾನ್ಯಕ್ಕಿಂತ ಭಿನ್ನವಾಗಿದೆ.
19. ಮುಸ್ಲಿಂ ಆಚರಣೆ ನಿಷಿದ್ಧ: ಬುರ್ಖಾ ಧರಿಸುವುದು ಇಲ್ಲಿ ನಿಷಿದ್ಧ. ನಿಗದಿಪಡಿಸಿದ ಸಾಹಿತ್ಯ ಬಿಟ್ಟು ಹಾಡು ಬರೆದು ಸಂಯೋಜಿಸಿದರೂ ಶಿಕ್ಷೆ ಗ್ಯಾರಂಟಿ.
20. ಮಿಲಿಟರಿಗೆ ಅಧಿಕ ವೆಚ್ಚ: ನ್ಯೂಕ್ಲಿಯರ್ ಶಕ್ತಿಯನ್ನು ಹೊಂದಿರುವ ರಾಷ್ಟ್ರ ದೇಶದ 20 ಶೇಕಡಾ ಜಿಡಿಪಿಯನ್ನು ಮಿಲಿಟರಿ ವೆಚ್ಚಕ್ಕೆ ಬಳಕೆ ಮಾಡುತ್ತದೆ.