
ಬೆಂಗಳೂರು: ಕೇಂದ್ರ ಸರ್ಕಾರ ನೋಟು ಅಪಮೌಲ್ಯಗೊಳಿಸಿದ್ದೇ ತಡ ಕಾರಾರಯಚರಣೆಗಿಳಿದಿದ್ದ ರಾಜ್ಯ ಹೆದ್ದಾರಿ ಪ್ರಾಧಿಕಾರದ ಮುಖ್ಯ ಯೋಜನಾಧಿಕಾರಿ ಎಸ್.ಸಿ.ಜಯಚಂದ್ರ ನೋಟು ಬದಲಾವಣೆಯ ಸಿಂಡಿಕೇಟ್ ಮಾಡಿಕೊಂಡಿರುವುದು ಇದೀಗ ಬೆಳಕಿಗೆ ಬಂದಿದೆ. ಮಾತ್ರವಲ್ಲ ಸ್ತ್ರೀ ಶಕ್ತಿ ಸಂಘದ ಸದಸ್ಯರನ್ನು, ಚಾಲ್ತಿ ಖಾತೆದಾರರನ್ನೂ ಈ ಜಾಲಕ್ಕೆ ಬಳಸಿಕೊಂಡಿರುವುದನ್ನು ಜಾರಿ ನಿರ್ದೇಶನಾಲಯ ಪತ್ತೆ ಮಾಡಿದೆ.
ಜಯಚಂದ್ರ ತನ್ನ ಭಾವ ಜಿ.ಪ್ರಶಾಂತ್ ಮೂಲಕವೇ ಹಣ ಪಡೆಯುತ್ತಿರುವುದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದು ಈ ದಂಧೆಯ ಕಿಂಗ್‌ಪಿನ್ ಎನಿಸಿಕೊಂಡಿದ್ದಾನೆ. ಪ್ರಕರಣದಲ್ಲಿ ಜಯಚಂದ್ರ ನೀಡಿದ ಮಾಹಿತಿ ಮೇರೆಗೆ ಜಯಚಂದ್ರ ಮತ್ತು ಅವರ ಭಾವ ಸೇರಿ ಈವರೆಗೆ ಒಟ್ಟು 8 ಮಂದಿಯನ್ನು ಬಂಧಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.
ಸಿಬಿಐ ದಾಖಲಿಸಿದ್ದ ಎಫ್‌ಐಆರ್ ಆಧರಿಸಿ ಜಯಚಂದ್ರರನ್ನು ಡಿ.5ರಂದೇ ಬಂಧಿಸಿದ್ದ ಜಾರಿ ನಿರ್ದೇಶನಾಲಯ ನಡೆಸಿದ ವಿಚಾರಣೆ ವೇಳೆ ಇಷ್ಟುಅಗಾಧ ಪ್ರಮಾಣದ ಹೊಸ ನೋಟುಗಳನ್ನು ಸಂಗ್ರಹಿಸಿದ ರೀತಿ ಬೆಳಕಿಗೆ ಬಂದಿದೆ. ಜಯಚಂದ್ರ ನಿವಾಸದ ಮೇಲೆ ದಾಳಿ ನಡೆಸಿದಾಗ 2 ಸಾವಿರ ಮುಖಬೆಲೆಯ 4597 ನೋಟುಗಳು (ರೂ.91,94,000) ಪತ್ತೆಯಾಗಿದ್ದವು. ಸಿಬಿಐ ಅಧಿಕಾರಿಗಳು ಎಫ್‌ಐಆರ್ ದಾಖಲಿಸಿಕೊಂಡಿದ್ದರು.
ಹಳೆ ನೋಟುಗಳಿಗೆ ಹೊಸ ನೋಟುಗಳನ್ನು ಬದಲಿಸಿಕೊಡುವ ವ್ಯವಸ್ಥಿತ ಜಾಲವನ್ನು ಪ್ರಶಾಂತ್ ನೇತೃತ್ವದ ತಂಡ ರೂಪಿಸಿತ್ತು. ಹೊಸ ನೋಟುಗಳಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದವರನ್ನು ಬಲೆಗೆ ಬೀಳಿಸುತ್ತಿದ್ದ ತಂಡ ಶೇ.20ರಿಂದ ಶೇ.35ರಷ್ಟುಕಮಿಷನ್ ಪಡೆದು ನೋಟು ಬದಲಾವಣೆ ಮಾಡುತ್ತಿತ್ತು. ಈ ಜಾಲ ಈ ಮೊದಲೂ ಅನೇಕ ಬಾರಿ ಪ್ರಶಾಂತ್ ಮೂಲಕ ಜಯಚಂದ್ರಗೆ ಹೊಸ ನೋಟು ಗಳನ್ನು ಸರಬರಾಜು ಮಾಡಿತ್ತು ಎಂದು ತನಿಖೆ ವೇಳೆ ದೃಢವಾಗಿದೆ. ಡಿ.4ರಂದು ಹಳೆ ನೋಟುಗಳ ಬದಲಾವಣೆ ನಡೆಸುತಿ ್ತದ್ದ ವೇಳೆಯೇ ಜಾರಿ ನಿರ್ದೇಶನಾಲಯದ ಬಲೆಗೆ ಸಿಕ್ಕಿ ಬಿದ್ದಿದ್ದ ಇವರು ನೋಟುಗಳನ್ನು ಅಮಾನ್ಯ ಮಾಡಿದ ಬಳಿಕ ವಿವಿಧ ಭಾಗಗಳಿಂದ ಹೊಸ ನೋಟುಗಳನ್ನು ಸಂಗ್ರಹಿಸಿರುವುದು ತಿಳಿದು ಬಂದಿದೆ.
ಕಾರ್ಯಾಚರಣೆ ಹೇಗೆ?: ಕೇಂದ್ರವು ರೂ.500 ಮತ್ತು ರೂ.1000 ನೋಟುಗಳನ್ನು ಅಮಾನ್ಯ ಮಾಡಿದ ಬಳಿಕ ವ್ಯವಸ್ಥಿತ ಜಾಲ ಹೆಣೆದಿದ್ದ ಜಯಚಂದ್ರ ತಂಡ, ಬ್ಯಾಂಕ್ ಖಾತೆ ಹೊಂದಿದ್ದ ಹಲವರನ್ನು ಸಂಪರ್ಕಿಸಿ ಅವರ ಮೂಲಕ ಹಳೆ ನೋಟುಗಳನ್ನು ಡಿಪಾಸಿಟ್ ಮಾಡಿಸಿ ಹೊಸ ನೋಟುಗಳನ್ನು ಪಡೆಯುತ್ತಿತ್ತು. ಇದಕ್ಕಾಗಿ ಅನೇಕ ಮಧ್ಯವರ್ತಿಗಳು, ಕಮಿಷನ್ ಏಜೆಂಟ್’ಗಳನ್ನೂ ನೇಮಿಸಿ ಕಾರಾರಯಚರಣೆ ನಡೆಸಲಾಗುತ್ತಿತ್ತು. ಸ್ತ್ರೀ ಶಕ್ತಿ ಸಂಘಗಳ ಸದಸ್ಯರ ಮೂಲಕ ಅನೇಕ ಮೈಕ್ರೋಫೈನಾನ್ಸ್ ಸಂಸ್ಥೆಗಳ ಕಲೆಕ್ಷನ್ ಏಜೆಂಟರು ಪ್ರತಿದಿನ ವಸೂಲಿ ಮಾಡಿದ ಹೊಸ ನೋಟುಗಳನ್ನು ಈ ಮಧ್ಯವರ್ತಿಗಳು, ಕಮಿಷನ್ ಏಜೆಂಟ್‌ಗಳು ಸಂಗ್ರಹಿಸಿ ಇದಕ್ಕೆ ಬದಲಾಗಿ ಹಳೆ ನೋಟುಗಳನ್ನು ಬ್ಯಾಂಕ್’ಗೆ ಜಮಾ ಮಾಡುತ್ತಿದ್ದರು. ಮೈಕ್ರೋಫೈನಾನ್ಸ್’ಗಳು ಹಳೆ ನೋಟು ಡಿಪಾಸಿಟ್ ಮಾಡಲು ಆರ್’ಬಿಐ ರಿಯಾಯ್ತಿ ನೀಡಿತ್ತು.
ನೋಟು ಅಮಾನ್ಯಗೊಳಿಸಿದ ಬಳಿಕ ಖಾತೆದಾರರು ವಾರಕ್ಕೆ ರೂ.24 ಸಾವಿರ ಪಡೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿದ್ದ ಅವಕಾಶವನ್ನೂ ಬಳಸಿಕೊಂಡ ಜಾಲ, ಕೆಲ ಬ್ಯಾಂಕ್ ಖಾತೆದಾರರು ಹಾಗೂ ಮಧ್ಯವರ್ತಿಗಳಿಗೆ ಶೇ.25ರಷ್ಟು ಕಮಿಷನ್ ನೀಡಿ ಹೊಸ ನೋಟುಗಳನ್ನು ಪಡೆದುಕೊಳ್ಳುತ್ತಿತ್ತು. ಈ ಮೂಲಕ ಲಕ್ಷಾಂತರ ರು. ಹೊಸ ನೋಟುಗಳನ್ನು ಪಡೆದುಕೊಳ್ಳಲಾಗಿತ್ತು.
ಚಾಲ್ತಿ ಖಾತೆದಾರರ ನೆರವನ್ನೂ ಪಡೆಯುತ್ತಿದ್ದ ತಂಡದ ಸದಸ್ಯರು ಚಾಲ್ತಿ ಖಾತೆ ಹೊಂದಿರುವವರು ತಮ್ಮ ಖಾತೆಗಳಿಂದ ವಾರಕ್ಕೆ ರೂ.50,000 ಪಡೆಯಬಹುದಾಗಿತ್ತು. ಈ ಮೊತ್ತ ಪಡೆಯುವ ಖಾತೆದಾರರು ಕಮಿಷನ್’ಗೆ ಹಳೆ ನೋಟುಗಳನ್ನು ಪಡೆದು ಹೊಸ ನೋಟುಗಳನ್ನು ನೀಡಿ ಮತ್ತೆ ಹಳೆಯ ನೋಟುಗಳನ್ನು ಮತ್ತದೇ ತಮ್ಮ ಖಾತೆಗಳಿಗೆ ಜಮಾ ಮಾಡುತ್ತಿದ್ದರು ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.
(epaper.kannadaprabha.in)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.