ಡಿಡಿ ಪತ್ರಕರ್ತನ ಸಾವು ಅನಿರೀಕ್ಷಿತ ಮತ್ತು ಖೇದಕರ: ನಕ್ಸಲರ ಪತ್ರ!

By Web DeskFirst Published Nov 2, 2018, 11:57 AM IST
Highlights

ದಂತೇವಾಡ ದಾಳಿ ಕುರಿತಂತೆ ಪತ್ರ ಬಿಡುಗಡೆ ಮಾಡಿದ ನಕ್ಸಲರು! ದೂರದಶರ್ಶನ ಕ್ಯಾಮರಾಮ್ಯಾನ್ ಸಾವಿಗೆ ನಕ್ಸಲರ ಕಂಬನಿ! ಪತ್ರಕರ್ತನನ್ನು ಹತ್ಯೆ ಮಾಡುವ ಉದ್ದೇಶ ಇರಲಿಲಲ್ಲ ಎಂದ ನಕ್ಸಲರು!
ಪೊಲೀಸರ ಜೊತೆ ದೂರದರ್ಶನ ತಂಡ ಇತ್ತೆಂದು ಗೊತ್ತಿರಲಿಲ್ಲ! ಪತ್ರಕರ್ತರು ಪೊಲೀಸರ ಜೊತೆ ಇರಬೇಡಿ ಎಂದು ನಕ್ಸಲರ ಮನವಿ  

ನವದೆಹಲಿ(ನ.2): ದಂತೇವಾಡ ದಾಳಿ ಕುರಿತಂತೆ ನಕ್ಸಲರು ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ಮಾಧ್ಯಮಗಳ ಮೇಲೆ ದಾಳಿ ಮಾಡುವ ಉದ್ದೇಶವಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 

ಕೆಲ ದಿನಗದಳ ಹಿಂದಷ್ಟೇ ದಂತೇವಾಡದಲ್ಲಿ ನಕ್ಸಲರು ಭೀಕರ ದಾಳಿ ನಡೆಸಿದ್ದು, ದಾಳಿಯಲ್ಲಿ ಇಬ್ಬರು ಪೊಲೀಸರು ಹುತಾತ್ಮರಾಗಿದ್ದಲ್ಲದೇ ದೂರದರ್ಶನದ ಕ್ಯಾಮೆರಾಮ್ಯಾನ್ ಅಚ್ಯುತಾನಂದನ್ ಸಾಹು ಕೂಡ ಮೃತಪಟ್ಟಿದ್ದರು. 

ಘಟನೆ ಕುರಿತಂತೆ ಇದೀಗ ನಕ್ಸಲರು ಎರಡು ಪುಟಗಳ ಹೇಳಿಕೆ ಬಿಡುಗಡೆ ಮಾಡಿದ್ದು, ಪ್ರತೀನಿತ್ಯ ನಮ್ಮ ಗ್ರಾಮದ ಮೇಲೆ ದಾಳಿ ನಡೆಯುತ್ತಲೇ ಇರುತ್ತದೆ. ಸ್ಥಳೀಯರನ್ನು ಥಳಿಸಲಾಗುತ್ತಿರುತ್ತದೆ. ನಕಲಿ ಎನ್ ಕೌಂಟರ್ ಗಳಲ್ಲಿ ಜನರನ್ನು ಪೊಲೀಸರು ಹತ್ಯೆ ಮಾಡುತ್ತಿರುತ್ತಾರೆ. ರಾಜಕೀಯ ಪಕ್ಷಗಳು ಮಾಧ್ಯಮಗಳನ್ನು ತಪ್ಪು ಹಾದಿಗೆಳೆಯುತ್ತಿವೆ ಎಂದು ಕಿಡಿ ಕಾರಿದ್ದಾರೆ. 

ಇನ್ನು ಅಚ್ಯುತಾನಂದನ್ ಸಾಹು ಸಾವಿಗೆ ಖೇದ ವ್ಯಕ್ತಪಡಿಸಿರುವ ನಕ್ಸಲರು, ಪೊಲೀಸ್ ತಂಡದಲ್ಲಿ ದೂರದರ್ಶನ ತಂಡ ಕೂಡ ಇರುತ್ತದೆ ಎಂಬುದು ನಮಗೆ ಗೊತ್ತಿರಲಿಲ್ಲ. ಹೀಗಾಗಿ ದಾಳಿಯಲ್ಲಿ ಅಚ್ಯುತಾನಂದ್ ಸಾಹು ಸಾವನ್ನಪ್ಪಿದ್ದಾರೆ. ಉದ್ದೇಶಪೂರ್ವಕವಾಗಿ ನಾವು ಎಂದಿಗೂ ಯಾವುದೇ ಪತ್ರಕರ್ತರನ್ನು ಹತ್ಯೆ ಮಾಡಿಲ್ಲ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

Naxals release a statement on Dantewada attack, saying 'DD Cameraman Achutyanand Sahu was killed after being caught in the ambush and we had no intention of targeting the media.' pic.twitter.com/bAoEQ8ScaS

— ANI (@ANI)

ಅಲ್ಲದೇ ಪತ್ರಕರ್ತರು ಪೊಲೀಸರೊಂದಿಗೆ ಇರಬಾರದೆಂದು ನಕ್ಸಲರು ಪತ್ರದಲ್ಲಿ ಮನವಿ ಮಾಡಿದ್ದಾರೆ. ನಮ್ಮ ಹೋರಾಟಡ ವ್ಯವಸ್ಥೆಯ ವಿರುದ್ಧವೇ ಹೊರತು ವ್ಯಕ್ತಿಗಳ ವಿರುದ್ಧ ಅಲ್ಲ ಎಂದು ನಕ್ಸಲರು ಸ್ಪಷ್ಟಪಡಿಸಿದ್ದಾರೆ.

Why was camera looted? Because it had recorded evidence of what happened in the first few minutes of targeted media ambush. Multiple bullet wounds and skull fractures on the martyred cameraman in no ways indicates it was by mistake: Dantewada SP Abhishek Pallav on Naxal statement https://t.co/9U2cgLdWph

— ANI (@ANI)

ಇನ್ನು ನಕ್ಸಲರ ಹೇಳಿಕೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ದಂತೇವಾಡ ಪೊಲೀಸ್ ಅಧಿಕಾರಿ ಅಭಿಷೇಕ್ ಪಲ್ಲವ್,  ದಾಳಿ ನಡೆಯುವುದಕ್ಕೂ ಮುನ್ನ ಸಾಕ್ಷ್ಯಾಧಾರಗಳು ಕ್ಯಾಮೆರಾಗಳಲ್ಲಿ ರೆಕಾರ್ಡ್ ಆಗಿದ್ದವು. ಪತ್ರಕರ್ತರನ್ನು ಹತ್ಯೆ ಮಾಡುವ ಉದ್ದೇಶವಿಲ್ಲದಿದ್ದರೆ, ಕ್ಯಾಮೆರಾವನ್ನೇಕೆ ಹೊತ್ತೊಯ್ದರು ಎಂದು ಪ್ರಶ್ನಿಸಿದ್ದಾರೆ.

click me!