ಕೊಡಗು ಜಿಲ್ಲೆಯಲ್ಲಿ ನಕ್ಸಲರು ಪ್ರತ್ಯಕ್ಷ : ಗ್ರಾಮಸ್ಥರಲ್ಲಿ ಆತಂಕ

By Suvarna Web DeskFirst Published Feb 3, 2018, 10:56 AM IST
Highlights

ಕೊಡಗು  ಜಿಲ್ಲೆಯ ಮಡಿಕೇರಿ ಗಡಿ ಗ್ರಾಮದಲ್ಲಿ ನಕ್ಸಲರು ಪ್ರತ್ಯಕ್ಷರಾಗಿದ್ದಾರೆ. ದಕ್ಷಿಣ ಕನ್ನಡ, ಕೊಡಗಿನ ಗಡಿ ಗ್ರಾಮವಾದ ಕೊಯನಾಡು ಪ್ರದೇಶದಲ್ಲಿ ನಕ್ಸಲಿಯರು ಸುಳಿದಾಡುತ್ತಿದ್ದಾರೆ.

ಮಡಿಕೇರಿ : ಕೊಡಗು  ಜಿಲ್ಲೆಯ ಮಡಿಕೇರಿ ಗಡಿ ಗ್ರಾಮದಲ್ಲಿ ನಕ್ಸಲರು ಪ್ರತ್ಯಕ್ಷರಾಗಿದ್ದಾರೆ. ದಕ್ಷಿಣ ಕನ್ನಡ, ಕೊಡಗಿನ ಗಡಿ ಗ್ರಾಮವಾದ ಕೊಯನಾಡು ಪ್ರದೇಶದಲ್ಲಿ ನಕ್ಸಲಿಯರು ಸುಳಿದಾಡುತ್ತಿದ್ದಾರೆ.

ಈ ಗ್ರಾಮದ ಮೂರು ಮನೆಗೆ ಬಂದಿದ್ದ ನಕ್ಸಲರು ವಿವಿಧ ರೀತಿಯಾದ ದವಸ-ಧಾನ್ಯಗಳನ್ನು ಸಂಗ್ರಹಿಸಿಕೊಂಡು ತೆರಳಿದ್ದಾರೆ. ಅಲ್ಲದೇ  ಇದೇ ಗ್ರಾಮದ ಯುವಕನೊಬ್ಬನಿಗೆ 2700 ರು. ಹಣವನ್ನು ನೀಡಿ ವಿವಿಧ ಅಡುಗೆ ಸಾಮಾಗ್ರಿಗಳನ್ನು ಖರೀದಿ ಮಾಡಿದ್ದಾರೆ ಎನ್ನಲಾಗಿದೆ.

ಅಲ್ಲದೇ ಇಲ್ಲಿಂದ ಹೋಗುವ ಮುನ್ನ ಜೀವ ಬೆದರಿಕೆಯನ್ನು ಒಡ್ಡಿದ್ದಾರೆ. ಪೊಲೀಸರಿಗೆ ತಮ್ಮ ಬಗ್ಗೆ ಮಾಹಿತಿ ನೀಡಿದಲ್ಲಿ ಸಮಸ್ಯೆ ಎದುರಿಸುತ್ತೀರಾ ಎಂದು ಬೆದರಿಸಿದ್ದಾರೆ ಎನ್ನಲಾಗಿದೆ.

ಅಲ್ಲದೇ ಅವರ ಬ್ಯಾಗ್’ನಲ್ಲಿ ವಿವಿಧ ರೀತಿಯಾದ ಶಸ್ತ್ರಾಸ್ತ್ರಗಳನ್ನು ಇರಿಸಿಕೊಂಡಿದ್ದರು ಎಂದು ಗ್ರಾಮಸ್ಥರು ಹೇಳಿದ್ದು, ನಕ್ಸಲರ ಆಗಮನದಿಂದ ಇಲ್ಲಿನ ಜನರು ತೀವ್ರ ಆತಂಕಗೊಂಡಿದ್ದಾರೆ.

ಅಲ್ಲದೇ ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಬಗ್ಗೆ ಗ್ರಾಮಸ್ಥರಿಂದ ಮಾಹಿತಿ ಸಂಗ್ರಹಿಸಿದ್ದಾರೆ.

click me!