
ಇಸ್ಲಾಮಾಬಾದ್(ಸೆ.29): ಭಾರತೀಯ ಸೇನೆ ಏಕಾಏಕಿ ಪಾಕಿಸ್ತಾನ ಗಡಿದಾಟಿ ಕಾರ್ಯಾಚರಣೆ ನಡೆಸಿರುವುದು ಅಪ್ರಚೋದಿತ ಹಾಗೂ ಲಜ್ಜೆಗೆಟ್ಟ ನಡೆಯಾಗಿದೆ ಎಂದು ಪಾಕ್ ಪ್ರಧಾನಿ ನವಾಜ್ ಷರೀಪ್ ಹೇಳಿದ್ದಾರೆ.
ನಮ್ಮ ಸೇನೆ ದೇಶದ ಭದ್ರತೆಯನ್ನು ಕಾಪಾಡಿಕೊಳ್ಳಲು ಸಶಕ್ತವಾಗಿದೆ. ನಾವು ಯಾವಾಗಲೂ ನೆರೆರಾಷ್ಟ್ರಗಳೊಂದಿಗೆ ಶಾಂತಿಯುತವಾಗಿರಲು ಬಯಸುತ್ತೇವೆ. ಇದನ್ನೇ ನಮ್ಮ ದೌರ್ಬಲ್ಯವೆಂದು ಭಾವಿಸಬಾರದು ಎಂದಿದ್ದಾರೆ ರೇಡಿಯೋ ಪಾಕಿಸ್ತಾನ್ ವರದಿ ಮಾಡಿದೆ.
ದೇಶದ ಸಾರ್ವಭೌಮತೆಗೆ ಭಂಗ ತರುವಂತಹ ಹೇಯಕೃತ್ಯಗಳನ್ನು ವಿಫಲಗೊಳಿಸಲು ಪಾಕಿಸ್ತಾನ ಶಕ್ತವಾಗಿದೆ. ಆದರೆ ಅಪ್ರಚೋದಿತವಾಗಿ ಭಾರತೀಯ ಸೇನೆ ಗಡಿ ನಿಯಂತ್ರಣ ರೇಖೆ ಉಲ್ಲಂಘಿಸಿ ಕಾರ್ಯಾಚರಣೆ ನಡೆಸಿರುವ ಕ್ರಮವನ್ನು ಖಂಡಿಸುತ್ತೇನೆ. ನಾವು ಇದಕ್ಕೆ ತಕ್ಕ ಪ್ರತ್ಯುತ್ತರ ನೀಡಲು ಸಿದ್ದರಿದ್ದೇವೆ ಎಂದು ಎಂದು ಷರೀಪ್ ಹೇಳಿದ್ದಾರೆ.
ಇದರ ನಡುವೆಯೇ ಪ್ರಧಾನಿ ನವಾಜ್ ಷರೀಫ್ ಅಕ್ಟೋಬರ್ 5 ರಂದು ಜಂಟಿ ಅಧಿವೇಶನಕ್ಕೆ ಕರೆ ನೀಡಿದ್ದಾರೆ. ಗಡಿ ನಿಯಂತ್ರಣ ರೇಖೆಯಲ್ಲಿನ ವಿದ್ಯಮಾನಗಳ ಕುರಿತಂತೆ ಷರೀಫ್ ರಕ್ಷಣಾಪಡೆಯ ಉನ್ನತಾಧಿಕಾರಿಗಳಿಂದ ಮಾಹಿತಿಯನ್ನು ಪಡೆದುಕೊಂಡಿದ್ದಾರೆ ಎನ್ನಲಾ
ಭಾರತೀಯ ಸೇನೆ ಪಾಕಿಸ್ತಾನದ ಇಬ್ಬರು ಸೈನಿಕರನ್ನು ಹತ್ಯೆ ಮಾಡಿದ್ದಾರೆ. ಗಡಿ ನಿಯಂತ್ರಣ ರೇಖೆ ಅತಿಕ್ರಮಿಸಿ ಈ ಕಾರ್ಯಾಚರಣೆ ನಡೆಸಿರುವುದು ಕದನ ವಿರಾಮದ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಪಾಕ್ ಸೇನೆ ಆರೋಪಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.