ಕಣ್ಮರೆಯಾದ ವಿಮಾನ ಶೋಧಕ್ಕೆ ಧುಮುಕಿದ ಇಸ್ರೋ, ನೌಕಾಪಡೆ

Published : Jun 05, 2019, 09:11 AM IST
ಕಣ್ಮರೆಯಾದ ವಿಮಾನ ಶೋಧಕ್ಕೆ ಧುಮುಕಿದ ಇಸ್ರೋ, ನೌಕಾಪಡೆ

ಸಾರಾಂಶ

ಕಾಣೆಯಾದ ವಿಮಾನ ಪತ್ತೆಗೆ ಇದೀಗ ಇಸ್ರೋ ಹಾಗೂ ನೌಕಾಪಡೆ ತೆರಳಿವೆ. ಅರುಣಾಚಲ ಪ್ರದೇಶದ ಮೆಚುಕಾ ಹಾಗೂ ಅಸ್ಸಾಂನ ಜೊರ್ಹಾಟ್‌ ಪ್ರದೇಶಗಳ ನಡುವಿರುವ ಅರಣ್ಯ ಪ್ರದೇಶದಲ್ಲಿ ಹುಡುಕಾಟ ನಡೆಸಲಾಗುತ್ತಿದೆ.

ಇಟಾನಗರ/ನವದೆಹಲಿ: ಸೋಮವಾರ ಮಧ್ಯಾಹ್ನ ಕಾಣೆಯಾದ ಭಾರತೀಯ ವಾಯುಪಡೆಯ ರಷ್ಯಾ ನಿರ್ಮಿತ ಎಎನ್‌-32 ವಿಮಾನದ ಶೋಧ ಕಾರ್ಯಾಚರಣೆಗೆ ಇದೀಗ ನೌಕಾಪಡೆ ಹಾಗೂ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಧುಮುಕಿವೆ. 

8 ಮಂದಿ ವಿಮಾನ ಸಿಬ್ಬಂದಿ ಹಾಗೂ ಐವರು ಯೋಧರನ್ನು ಹೊತ್ತೊಯ್ಯುತ್ತಿದ್ದ ರಷ್ಯಾ ನಿರ್ಮಿತ ಎಎನ್‌-32 ಸೋಮವಾರ ಟೇಕಾಫ್‌ ಆದ ಅರ್ಧಗಂಟೆಯಲ್ಲೇ ಸಂಪರ್ಕ ಕಡಿದುಕೊಂಡು ಕಣ್ಮರೆಯಾಗಿತ್ತು. 

ಹೀಗಾಗಿ, ಅರುಣಾಚಲ ಪ್ರದೇಶದ ಮೆಚುಕಾ ಹಾಗೂ ಅಸ್ಸಾಂನ ಜೊರ್ಹಾಟ್‌ ಪ್ರದೇಶಗಳ ನಡುವಿರುವ ಅರಣ್ಯ ಪ್ರದೇಶದಲ್ಲಿ ನೌಕಾಪಡೆಗೆ ಸೇರಿದ ಪಿ 8ಐ ವಿಮಾನವು ಆಪ್ಟಿಕಲ್‌ ಹಾಗೂ ಇನ್ಫ್ರಾ ರೆಡ್‌ ಸೆನ್ಸಾರ್‌ ತಂತ್ರಜ್ಞಾನವನ್ನು ಬಳಸಿ ಎಎನ್‌-32 ವಿಮಾನದ ಹುಡುಕಾಟವನ್ನು ನಡೆಸುತ್ತಿದೆ. 

ಈ ಕುರಿತು ಮಂಗಳವಾರ ಪ್ರತಿಕ್ರಿಯಿಸಿದ ವಾಯುಪಡೆ ವಕ್ತಾರ, ‘ನಿಯಂತ್ರಣ ಕೇಂದ್ರದ ಸಂಪರ್ಕ ಕಡಿದುಕೊಂಡು ಕಾಣೆಯಾಗಿರುವ ಎಎನ್‌-32 ವಿಮಾನದ ಶೋಧಕ್ಕಾಗಿ ಎರಡು ಎಂಐ-17 ಹಾಗೂ ಒಂದು ಎಎಲ್‌ಎಚ್‌ ಹೆಲಿಕಾಪ್ಟರ್‌ ಅನ್ನು ನಿಯೋಜಿಸಲಾಗಿದೆ. ಅಗತ್ಯಬಿದ್ದಲ್ಲಿ ಹೆಚ್ಚಿನ ಕಾರ್ಯಾಚರಣೆ ಕೈಗೊಳ್ಳಲಾಗುತ್ತದೆ’ ಎಂದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗ್ರೇಟರ್‌ ಬೆಂಗಳೂರು.. ವೈಜ್ಞಾನಿಕವಾಗಿ ಕಸ ಸಂಸ್ಕರಣೆ, ಆತಂಕ ಬೇಡ: ಡಿ.ಕೆ.ಶಿವಕುಮಾರ್‌
ಅನ್ನಭಾಗ್ಯ ಅಕ್ಕಿ ಫಾರಿನ್‌ಗೆ ಪ್ರಕರಣ: ಎಸ್ಐಟಿ ತನಿಖೆಗೆ ಸಿ.ಟಿ.ರವಿ ಆಗ್ರಹ