
ನವದೆಹಲಿ: 1998 ರಲ್ಲಿ ನಡೆದ ರಸ್ತೆ ಗಲಾಟೆ ಪ್ರಕರಣ ದಲ್ಲಿ ಕೇವಲ 1000 ರು. ದಂಡ ಕಟ್ಟಿ ಖುಲಾಸೆಗೊಂಡಿದ್ದ ಮಾಜಿ ಸಂಸದ ನವಜೋತ್ ಸಿಂಗ್ ಸಿಧುಗೆ ಇದೀಗ ಮತ್ತೊಮ್ಮೆ ಸಂಕಷ್ಟ ಎದುರಾಗಿದೆ.
ಘಟನೆಯಲ್ಲಿ ಮೃತ ಪಟ್ಟ ವ್ಯಕ್ತಿಯ ಮಗ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಶಿಕ್ಷೆಯ ಪ್ರಮಾಣವನ್ನು ಮರುಪರಿಶೀಲಿಸಲು ಒಪ್ಪಿಗೆ ಸೂಚಿಸಿದೆ.
1998 ರಲ್ಲಿ ನಡೆದ ರಸ್ತೆ ಗಲಾಟೆಯೊಂದರಲ್ಲಿ ಸಿಧು ಕೋಪದಿಂದ ಗುರುನಾಮ್ ಸಿಂಗ್ ಎನ್ನುವವರ ಮೇಲೆ ಹಲ್ಲೆ ನಡೆಸಿದ್ದರು. ಆಸ್ಪತ್ರೆಗೆ ದಾಖಲಿಸುವ ವೇಳೆ ಗುರು ನಾಮ್ ಸಿಂಗ್ ಸಾವಿಗೀಡಾಗಿದ್ದರು.
ಈ ಸಂಬಂಧ ಸೆಕ್ಷನ್ 323 ಅಡಿ ಸಿಧುಗೆ ಕೋರ್ಟ್1000 ರು. ದಂಡ ವಿಧಿಸಿ ಪ್ರಕ ರಣದಿಂದ ಖುಲಾಸೆ ಗೊಳಿಸಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.