ತೇಜಸ್ ಫಾಸ್ಟ್ ಲ್ಯಾಂಡಿಂಗ್ ಪರೀಕ್ಷೆ ಯಶಸ್ವಿ: ವಿಡಿಯೋ ನೋಡೋದೇ ಚೆಂದ!

By Web DeskFirst Published Sep 13, 2019, 5:59 PM IST
Highlights

ಭಾರತೀಯ ನೌಕಾಸೇನೆಗಾಗಿ ತಯಾರಿಸಲಾಗಿರುವ ಸ್ವದೇಶಿ ನಿರ್ಮಿತ ತೇಜಸ್| ಲಘು ಯುದ್ಧ ವಿಮಾನ ತೇಜಸ್‌ನ ಲ್ಯಾಂಡಿಂಗ್ ಪರೀಕ್ಷೆ ಯಶಸ್ವಿ| ಅತ್ಯಂತ ವೇಗವಾಗಿ ಇಳಿಯಬಲ್ಲ ಯುದ್ಧ ವಿಮಾನ ಹೊಂದಿದ ರಾಷ್ಟ್ರಗಳ ಪಟ್ಟಿಯಲ್ಲಿ ಸೇರಿದ ಭಾರತ|

ಪಣಜಿ(ಸೆ.13): ಭಾರತೀಯ ನೌಕಾಸೇನೆಗಾಗಿ ತಯಾರಿಸಲಾಗಿರುವ ಸ್ವದೇಶಿ ನಿರ್ಮಿತ ಲಘು ಯುದ್ಧ ವಿಮಾನ ತೇಜಸ್‌ನ ಲ್ಯಾಂಡಿಂಗ್ ಪರೀಕ್ಷೆ ಯಶಸ್ವಿಯಾಗಿ ಪೂರ್ಣಗೊಳಿಸಿದೆ.

ಗೋವಾದಲ್ಲಿ ತಯಾರಿಸಲಾಗಿದ್ದ ಯುದ್ಧ ಹಡಗು ಮಾದರಿಯ ಚಿಕ್ಕ ಲ್ಯಾಂಡಿಂಗ್ ರನ್‌ವೇಯಲ್ಲಿ ತೇಜಸ್ ಅತ್ಯಂತ ವೇಗದಲ್ಲಿ ಇಳಿಯುವಲ್ಲಿ ಯಶಸ್ವಿಯಾಯಿತು.

DRDO and the Aeronautical Development Agency successfully executed the first ever arrested landing of LCA Tejas (Navy) at the shore based test facility in Goa. This is a step towards the aircraft getting operational on aircraft carrier INS Vikramaditya. (video:DRDO) pic.twitter.com/LcsnIYTHPU

— ANI (@ANI)

ಈ ಮೂಲಕ ಅತ್ಯಂತ ವೇಗವಾಗಿ ಕಡಿಮೆ ರನ್‌ವೇ ಸ್ಥಳದಲ್ಲಿ ಸುರಕ್ಷಿತವಾಗಿ ಇಳಿಯಬಲ್ಲ ಯುದ್ಧ ವಿಮಾನಗಳನ್ನು ಹೊಂದಿರುವ ಅಮೆರಿಕ, ರಷ್ಯಾ, ಫ್ರಾನ್ಸ್, ಇಂಗ್ಲೆಂಡ್ ಹಾಗೂ ಚೀನಾ ನಂತರದ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ.

ಮಲ್ಟಿರೋಲ್ ಫೈಟರ್ ಜೆಟ್ ಅತ್ಯಂತ ವೇಗವಾಗಿ ಕಡಿಮೆ ಅಂತರದ ರನ್‌ವೇನಲ್ಲಿ ಇಳಿಯುವಂತೆ ಮಾಡಲು, ಲ್ಯಾಂಡಿಂಗ್ ವೇಳೆ ತಂತಿಯೊಂದನ್ನು ಉರುಳಿಸಲಾಗುತ್ತದೆ. ಇದು ಯುದ್ಧ ಹಡಗಿನ ರನ್‌ವೇ ಗೆ ಸೇರಿ ವಿಮಾನವನ್ನು ಅತ್ಯಂತ ತ್ವರಿತವಾಗಿ ಲ್ಯಾಂಡ್ ಆಗುವಂತೆ ಮಾಡುತ್ತದೆ.

click me!