ಅತ್ಯಚಾರಕ್ಕೊಳಗಾಗುತ್ತಿದ್ದ ಬಾಲೆಯನ್ನು ರಕ್ಷಿಸಿದ ಶ್ವಾನ!

Published : Aug 22, 2018, 03:16 PM ISTUpdated : Sep 09, 2018, 09:51 PM IST
ಅತ್ಯಚಾರಕ್ಕೊಳಗಾಗುತ್ತಿದ್ದ ಬಾಲೆಯನ್ನು ರಕ್ಷಿಸಿದ ಶ್ವಾನ!

ಸಾರಾಂಶ

ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದರೆ ಗಲ್ಲು ಶಿಕ್ಷೆಯನ್ನೂ ವಿಧಿಸಲಾಗುತ್ತಿದೆ. ಆದರೆ, ಮಕ್ಕಳು, ಮಹಿಳೆಯರ ಮೇಲಿನ ದುಷ್ಕೃತ್ಯಗಳು ಮುಂದುವರಿಯುತ್ತಲೇ ಇವೆ. ಇಂಥದ್ದೇ ಮತ್ತೊಂದು ಘಟನೆ ಮರುಕಳಿಸುವ ಮುನ್ನ ನಾಯಿಯೊಂದು ಬಾಲಕಿಯನ್ನು ರಕ್ಷಿಸಿದೆ. 

ಸಾಗರ: ನಾಯಿ ತನ್ನ ನಿಯತ್ತನ್ನು ಸಾಕಷ್ಟು ಬಾರಿ ಜಗಜ್ಜಾಹೀರಗೊಳಿಸಿದೆ. ಈ ಶ್ವಾನದ ನಿಯತ್ತನ್ನು ಮೀರಿಸುವ ಪ್ರಾಣಿ ಮತ್ತೊಂದಿಲ್ಲ. ಇದೀಗ ಮತ್ತೊಮ್ಮೆ ತನ್ನ ಪ್ರಾಮಾಣಿಕತೆಯನ್ನು ಮೆರೆದಿದ್ದು, ಅತ್ಯಾಚಾರಕ್ಕೊಳಗಾಗುತ್ತಿದ್ದ ಬಾಲಕಿಯನ್ನು ನಾಯಿ ರಕ್ಷಿಸಿದೆ.

ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಲು ಮೂವರು ದುರುಳಲು ಯತ್ನಿಸಿದ್ದರು. ಆ ಸಂದರ್ಭದಲ್ಲಿ ಸಹಾಯ ಕೋರಿ ಬಾಲಕಿ ಕೂಗಿ ಕೊಂಡಿದ್ದಾಳೆ. ಆದರೆ, ಆ ನಿರ್ಜನ ಪ್ರದೇಶದಲ್ಲಿ ಯಾರಿಗೂ ಈ ಬಾಲೆಯ ಆರ್ತನಾದ ಕೇಳಿರಲೇ ಇಲ್ಲ. ಆಮೇಲೆ ತಾನು ಪ್ರೀತಿಯಿಂದ ಸಾಕಿರುವ ನಾಯಿಯನ್ನೂ ಕೂಗಿದ್ದಾಳೆ. ತಕ್ಷಣವೇ ನೆರವಿಗೆ ಧಾವಿಸಿದ ಈ ನಾಯಿ ಆರೋಪಿಗಳನ್ನು ಬೆದರಿಸಿ, ಓಡಿಸಿದೆ. ಮಗುವೊಂದು ಅತ್ಯಂತ ಹೇಯ ಕೃತ್ಯಕ್ಕೆ ಬಲಿಯಾಗುವುದನ್ನು ಈ ನಾಯಿ ತಪ್ಪಿಸಿದೆ.

ಅತ್ಯಾಚಾರ ದೋಷಿಗಳಿಗೆ ಗಲ್ಲು ವಿಧಿಸುತ್ತಿದ್ದರೂ, ಅತ್ಯಾಚಾರದಂಥ ಕೃತ್ಯಗಳು ನಡೆಯುತ್ತಲೇ ಇವೆ. ಮಧ್ಯ ಪ್ರದೇಶದ ಮೋತಿನಗರ ಠಾಣಾ ವ್ಯಾಪ್ತಿಯಲ್ಲಿ ಇಂಥದ್ದೊಂದು ದುರ್ಘಟನೆ ನಡೆದಿದ್ದು, ಜಾನುವಾರುಗಳಿಗೆ ಮೇವಿಡುವ ಕೊಠಡಿಗೆ ಬಾಲಕಿಯನ್ನು ಎಳೆದೊಯ್ದು, ಅತ್ಯಾಚಾರವೆಸಗಲು ದುಷ್ಕರ್ಮಿಗಳು ಯತ್ನಿಸಿದ್ದರು.

ಅತ್ಯಾಚಾರ ಆರೋಪಿಗಳನ್ನು ನಾಯಿ ಕಚ್ಚಿದ್ದು, ಅವರು ಸ್ಥಳದಿಂದ ಹೆದರಿ ಕಾಲ್ಕಿತ್ತಿದ್ದಾರೆ. ನಾಯಿಯ ಕೂಗಿಗೆ ತಕ್ಷಣವೇ ಎಲ್ಲರೂ  ಸ್ಥಳಕ್ಕೆ ಧಾವಿಸಿದ್ದು, ತಕ್ಷಣವೇ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 

ಆರೋಪಿಗಳ ವಿರುದ್ಧ ಐಪಿಸಿ 376 ಸೆಕ್ಷನ್ ಅಡಿ ದೂರು ದಾಖಲಿಸಲಾಗಿದೆ. 

PREV
click me!

Recommended Stories

ಥೈಲ್ಯಾಂಡ್‌ನಿಂದ ಚೀಲದಲ್ಲಿ 48 ವಿಷಕಾರಿ ಹಾವನ್ನು ತಂದ ಪ್ರಯಾಣಿಕ; ಇಲ್ಲಿವೆ ಫೋಟೋಗಳು
Bride Calls Off Wedding: ಮದುವೆ ಮಂಟಪದಲ್ಲೇ ವರನ ಅಸಲಿಯತ್ತು ಕಂಡುಹಿಡಿದ ವಧು! ಮದುವೆ ನಿಂತೋಯ್ತು!