ಸುಪ್ರೀಂಕೋರ್ಟ್`ನಲ್ಲಿ ಫಾಲಿ ನಾರಿಮನ್, ಅಟಾರ್ನಿ ಜನರಲ್ ಖಡಕ್ ವಾದ

By internet desk-First Published Oct 3, 2016, 6:33 AM IST
Highlights

ನವದೆಹಲಿ(ಅ.04): ನಿನ್ನೆ ಕರ್ನಾಟಕದ ಪರ ವಾದ ಮಾಡುವುದಿಲ್ಲ ಎಂದು ಹೇಳಿದ್ದ ವಕೀಲ ಫಾಲಿ ನಾರಿಮನ್ ಇವತ್ತು ಸುಪ್ರೀಂಕೋರ್ಟ್`ನಲ್ಲಿ ಖಡಕ್ ವಾದ ಮಂಡಿಸಿದ್ದಾರೆ. ಯಾವ ಆಧಾರದ ಮೇಲೆ 3 ಬಾರಿ ನೀರು ಬಿಡಲು ಆದೇಶ ಮಾಡಿದ್ದೀರಿ ಎಂದು ನಾರಿಮನ್ ಪ್ರಶ್ನಿಸಿದರು. ಈ ಪ್ರಶ್ನೆಗೆ ಉತ್ತರಿಸಿದ ನ್ಯಾಯಮೂರ್ತಿಗಳು ಅಂಕಗಣಿತದ ಆಧಾರದ ಮೇಲೆ ಎಂದರು. ಗಣಿತ ಒಂದೇ ಸಾಲದು, ವಾಸ್ತವ ಸ್ಥಿತಿಯನ್ನ ಅರಿತು ಆದೇಶವನ್ನ ಕೊಡಬೇಕಿತ್ತು. ಕೇವಲ ಲೆಕ್ಕಾಚಾರದಿಂದ ಆದೇಶ ನೀಡುವುದು ಸರಿಯಲ್ಲ. ಈಗಾಗಲೇ, ಕರ್ನಾಟಕದ ರಾಜಕಾರಣಿಗಳಿಂ ಟೀಕೆಗಳನ್ನ ಅನುಭವಿಸಿದ್ದೇನೆ. ಇನ್ಮುಂದೆ ಇಂತಹ ಆದೇಶ ನೀಡಬೇಡಿ ಎಂದು ನಾರಿಮನ್ ಕೋರ್ಟ್ ಮುಂದೆ ಮನವಿ ಮಾಡಿದ್ದಾರೆ

ಇದೇವೇಳೆ, ಈ ಹಿಂದೆ ನೀಡಿದ್ದ ಆದೇಶವನ್ನ ಪಾಲಿಸುತ್ತೇವೆ ಎಂದು ಫಾಲಿ ನಾರಿಮನ್, ಈಗಾಗಲೇ 9 ಸಾವಿರ ಕ್ಯೂಸೆಕ್ ನೀರು ಬಿಟ್ಟಿದ್ದೇವೆ, ಇನ್ನುಳಿದ 24 ಸಾವಿರ ಕ್ಯೂಸೆಕ್ ನೀರು ಬಿಡುತ್ತೇವೆ ಎಂದು ತಿಳಿಸಿದರು.

Latest Videos

ಎಜಿಯಿಂದಲೂ ಖಡಕ್ ವಾದ: ಇದಕ್ಕೂ ಮುನ್ನ ಕಾವೇರಿ ನಿರ್ವಹಣಾ ಮಂಡಳಿ ರಚನೆ ಆದೇಶ ಹಿಂಪಡೆಯುವಂತೆ ವಾದ ಮಂಡಿಸಿದ ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ, ಕಾವೇರಿ ನಿರ್ವಹಣಾ ಮಂಡಳಿ ರಚನೆ ಅಧಿಕಾರ ಸಂಸತ್ತಿಗಿದೆ. ಮಂಡಳಿ ರಚಿಸುವಂತೆ ಆದೇಶಿಸುವ ಅಧಿಕಾರ ಸುಪ್ರೀಂಕೋರ್ಟ್​ಗೆ ಇಲ್ಲ. ಸೆ.30ರ ಆದೇಶ ಹಿಂಪಡೆಯಿರಿ ಎಂದು ವಾದಿಸಿದರು.

click me!