
ಬೀದರ್ (ಅ.29): ಬೀದರ್ ಜಿಲ್ಲೆ ಪವಿತ್ರ ಪುಣ್ಯ ಭೂಮಿ .ಬಸವಕಲ್ಯಾಣದ ಗೋರ್ಟಾವನ್ನು ಮೋದಿ ಶ್ಲಾಘಿಸಿದರು.
ಜಿಎಸ್ ಟಿ ಬಗ್ಗೆ ಪ್ರಸ್ತಾಪಿಸಿ, ದೇಶದ ವ್ಯಾಪಾರಿಗಳು ಜಿಎಸ್ಟಿ ವಿರೋಧಿಸಿಲ್ಲ, ಸ್ವೀಕರಿಸಿದ್ದಾರೆ. ಸಣ್ಣ ಪುಟ್ಟ ಸಮಸ್ಯೆಗಳ ಬಗ್ಗೆ ಮಾತ್ರ ವ್ಯಾಪಾರಿಗಳು ಹೇಳುತ್ತಿದ್ದಾರೆ. ಸಣ್ಣ ಪುಟ್ಟ ಸಮಸ್ಯೆಗಳನ್ನು ಸರಿಪಡಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ. ವ್ಯಾಪಾರಿಗಳು ತಿಳಿಸುತ್ತಿರುವ ಸಮಸ್ಯೆಗಳ ಸಲಹೆ ಸ್ವೀಕಾರಕ್ಕೆ ಸಿದ್ಧವಾಗಿದ್ದೇವೆ. ನೋಟ್ ಬ್ಯಾನ್ ಬಳಿಕ 3 ಲಕ್ಷ ಬೋಗಸ್ ಕಂಪನಿಗಳಿಗೆ ಬೀಗಮುದ್ರೆ ಹಾಕಲಾಗಿದೆ ಎಂದು ಮೋದಿ ಹೇಳಿದ್ದಾರೆ.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಲೂಟಿಯ ಬಗ್ಗೆಯೇ ಚರ್ಚೆ ಮಾಡುತ್ತಾ, ಪ್ರಾಮಾಣಿಕ ಜನರ ಹಣವನ್ನು ಕಾಂಗ್ರೆಸ್ ಪಕ್ಷ ಕೊಳ್ಳೆ ಹೊಡೆದಿದೆ. ನನ್ನನ್ನೂ ಹಾಗೆಯೇ ಲೂಟಿ ಮಾಡು ಅಂತಾ ಹೇಳುತ್ತೀರಾ ಎಂದು ಪ್ರಶ್ನಿಸಿದರು. ಸರ್ಕಾರದ ಹಣವನ್ನು ಉಳಿಸಿಕೊಳ್ಳಲು ನಾನು ನಿರಂತರ ಹೋರಾಟ ಮಾಡುತ್ತೇನೆ ಎಂದರು.
ಇದೇ ಸಂದರ್ಭದಲ್ಲಿ ಡಿಕೆಶಿ ಮನೆ ಮೇಲಿನ ಐಟಿ ರೇಡ್ ಪ್ರಸ್ತಾಪಿಸುತ್ತಾ, ಕಾಂಗ್ರೆಸ್ ಪಕ್ಷ ಸಂವೇದನಾ ಹೀನವಾಗಿದೆ. ಗುಜರಾತ್ ಪ್ರವಾಹ ಪರಿಸ್ಥಿತಿ ವೇಳೆ ಕಾಂಗ್ರೆಸ್ಸಿಗರು ಮೋಜಿ-ಮಸ್ತಿಯಲ್ಲಿ ಮುಳುಗಿದ್ದರು. ಗುಜರಾತ್ ನಲ್ಲಿ ಪ್ರವಾಹ ಪರಿಸ್ಥಿತಿಯಿಂದ ಜನರು ನೊಂದಿದ್ದರೆ ಬಂಗಲೆ ರೂಂಗಳಲ್ಲಿ ಕಾಂಗ್ರೆಸ್ಸಿಗರು ಮೋಜು ಮಾಡುತ್ತಿದ್ದರು. ಇದೇ ವೇಳೆ ನಡೆದ ಐಟಿ ದಾಳಿಯಲ್ಲಿ ಕೋಟಿಗಟ್ಟಲೆ ಹಣ ಪತ್ತೆಯಾಗಿದೆ ಎಂದು ವಾಗ್ದಾಳಿ ನಡೆಸಿದರು.
ದೇಶದ ಜನರ ಹಣ ಕೊಳ್ಳೊ ಹೊಡೆಯಲು ನಾನು ಬಿಡುತ್ತಿಲ್ಲ. ಆದ್ದರಿಂದ ನನ್ನ ವಿರುದ್ಧ ದಂಧೆಕೋರರಿಂದ ವ್ಯವಸ್ಥಿತ ಪಿತೂರಿ ನಡೆಯುತ್ತಿದೆ. ದಂಧೆಕೋರರು ನನ್ನ ಹೇಗೆ ತಾನೆಯೇ ಇಷ್ಟುಪಡುತ್ತಾರೆ? ಅಭಿವೃದ್ಧಿ ಅಜೆಂಡಾ ಇಟ್ಟುಕೊಂಡು ದೇಶ ಮುನ್ನೆಡೆಸುತ್ತಿದ್ದೇನೆ ಎಂದು ನರೇಂದ್ರ ಮೋದಿ ಹೇಳಿದರು.
ಮುದ್ರಾ ಯೋಜನೆ ಕುರಿತು ಪ್ರಶಂಸೆ ವ್ಯಕ್ತಪಡಿಸುತ್ತಾ, ಕೋಟ್ಯಂತರ ಯುವಕರಿಗೆ ಮುದ್ರಾ ಯೋಜನೆ ಮೂಲಕ ಸಾಲ ನೀಡಿದ್ದೇವೆ. ಸಾಲ ಪಡೆದು ಯುವಜನರು ಉದ್ದಿಮೆ ಸ್ಥಾಪಿಸಿಕೊಂಡಿದ್ದಾರೆ. ಗ್ರಾಮೀಣ ಪ್ರದೇಶದ ರೈತರಲ್ಲಿ ಬದಲಾವಣೆ ಈಗ ಹೆಚ್ಚಾಗಿದೆ. ಬಡವರಿಗೆ ಸೇರಬೇಕಿದ್ದ ಹಣ ಲೂಟಿ ತಡೆಗೆ ಈಗ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ನಿಜವಾದ ಫಲಾನುಭವಿಗೆ ಈಗ ನೇರವಾಗಿ ಹಣ ವರ್ಗಾವಣೆ ಮಾಡಲಾಗುತ್ತಿದೆ. ಮೊದಲಿಗಿಂತ ಯುವಕರಿಗೆ ಉದ್ಯೋಗ ನೀಡಿಕೆ ಪ್ರಮಾಣ ಹೆಚ್ಚಾಗಿದೆ. ಬಡ ಜನರ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರದ ಹಲವು ಯೋಜನೆ ಕೈಗೊಂಡಿದೆ ಎಂದು ಮೋದಿ ಹೇಳಿದ್ದಾರೆ.
30-40 ವರ್ಷಗಳ ಹಿಂದಿನ ಕಾಮಗಾರಿಗಳು ಪೂರ್ಣಗೊಂಡಿವೆ. ಹಿಂದಿನ ಸರ್ಕಾರಗಳಲ್ಲಿ ಅನೇಕ ಯೋಜನೆಗಳು ಅರ್ಧಕ್ಕೆ ಮೊಟಕುಗೊಂಡಿದೆ. ಸರ್ಕಾರದ ಬಳಿ ಈ ಬಗ್ಗೆ ಉತ್ತರವೇ ಇರಲಿಲ್ಲ. ಅರ್ಧಕ್ಕೆ ನಿಂತ ಯೋಜನೆಗಳನ್ನು ಪಟ್ಟಿ ಮಾಡಿ ಈಗ ಕಾರ್ಯಗತಗೊಳಿಸಿದ್ದೇವೆ. ದೇಶದ ಜನರಲ್ಲಿ ಕನಸುಗಳಿವೆ, ದೇಶಕ್ಕೆ ಸಾಮರ್ಥ್ಯವೂ ಸಹ ಇದೆ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.