
ನವದೆಹಲಿ(ಅ.29): ದಲಿತ ಉದ್ಯಮಿಗಳ ಯಶಸ್ಸನ್ನು ಸಂಭ್ರಮಿಸಿ, ಸಮುದಾಯದ ಇತರ ಜನರು ಉದ್ಯಮಿಗಳಾಗುವಂತೆ ಪ್ರೇರೇಪಿಸುವ ಸಲುವಾಗಿ ‘ದ ದಲಿತ್ ಎಂಟರ್ ಪ್ರೈಸಸ್’ ಎಂಬ ನಿಯತಕಾಲಿಕೆಯೊಂದನ್ನು ಬಿಡುಗಡೆ ಮಾಡಲಾಗಿದೆ.
116 ಪುಟಗಳನ್ನು ಹೊಂದಿರುವ ಮೊದಲ ಮಾಸಿಕ ನಿಯತಕಾಲಿಕೆ ಅಂಗಡಿಗಳಲ್ಲಿ ಲಭ್ಯವಿರುವುದಿಲ್ಲ. ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ)ದ ಸದಸ್ಯರಿಗೆ ಹಂಚಲಾಗುತ್ತದೆ.
ಮೊದಲ ಆವೃತ್ತಿ ಯು ಇನ್ನೊಂದು ವಾರದಲ್ಲಿ ಆನ್‌ಲೈನ್‌ನಲ್ಲಿ ಲಭ್ಯವಿರುತ್ತದೆ. ಮೊದಲ ಆವೃತ್ತಿಯಲ್ಲಿ 18 ದಲಿತ ಉದ್ಯಮಿಗಳ ಪರಿಚಯ ಮಾಡಿಕೊಡಲಾಗಿದೆ. ಸಮುದಾಯ ಎದುರಿಸುತ್ತಿರುವ ಸವಾಲುಗಳ ಬಗ್ಗೆಯೂ ಪ್ರಸ್ತಾಪಿಸಲಾಗಿದೆ. ದಲಿತ ಉದ್ಯಮಿ ಚಂದ್ರ ಭಾನ್ ಪ್ರಸಾದ್ ಈ ನಿಯತಕಾಲಿಕೆಯ ಸಂಪಾದಕರಾಗಿದ್ದಾರೆ. ಆಫ್ರಿಕಾ- ಅಮೆರಿಕ ಉದ್ಯಮಿಗಳ ಯಶೋಗಾಥೆಯನ್ನು ಬಿಂಬಿಸುವ ಸಲುವಾಗಿ 1970ರಲ್ಲಿ ಅಮೆರಿಕದಲ್ಲಿ ‘ಬ್ಲ್ಯಾಕ್ ಎಂಟರ್‌ಪ್ರೈಸಸ್’ ಎಂಬ ನಿಯತಕಾಲಿಕೆ ಹೊರತರಲಾಗಿತ್ತು. ಅದರಿಂದ ಪ್ರೇರಿತವಾಗಿ ಈ ನಿಯತಕಾಲಿಕೆ ರೂಪಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.