ಗುಡ್ಡ ಅಗೆದು ಇಲಿ ಹಿಡಿದ ಎಂದನ್ನುತ್ತಿದ್ದವರಿಗೆ ಪ್ರಧಾನಿ ಮೋದಿ ಪ್ರತ್ಯುತ್ತರ

By Suvarna Web DeskFirst Published Dec 30, 2016, 12:31 PM IST
Highlights

"ಹಿಂದೆ ಅನಕ್ಷರಸ್ಥರಿಗೆ ಹೆಬ್ಬೆಟ್ಟು ಎಂದು ಕರೆಯುತ್ತಿದ್ದರು. ಈಗ ಹೆಬ್ಬಟ್ಟೇ ನಿಮ್ಮ ಬ್ಯಾಂಕ್ ಆಗಲಿದೆ. ಬೆರಳ ತುದಿಯಲ್ಲೇ ಬ್ಯಾಂಕ್ ವ್ಯವಹಾರ ಮಾಡಬಹುದು. ಮೊಬೈಲ್ ಕೂಡ ಅವಶ್ಯಕತೆ ಇರೋದಿಲ್ಲ" ಎಂದು ಪ್ರಧಾನಿ ಅಭಿಪ್ರಾಯಪಟ್ಟಿದ್ದಾರೆ.

ನವದೆಹಲಿ(ಡಿ. 30): ನೋಟ್ ಅಪಮೌಲ್ಯ ಮಾಡುವ ಕೇಂದ್ರ ಸರಕಾರದ ನಿರ್ಧಾರವನ್ನು ಟೀಕಿಸುತ್ತಿದ್ದವರಿಗೆ ಪ್ರಧಾನಿ ಮೋದಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಇಂದು ಡಿಜಿ ಧನ್ ಮೇಳದಲ್ಲಿ ಮಾತನಾಡುತ್ತಿದ್ದ ಮೋದಿ, ವಿಪಕ್ಷ ನಾಯಕರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. "ಗುಡ್ಡ ಅಗೆದು ಇಲಿ ಹಿಡಿದ ಎಂದು ಕೆಲ ಜನರು ಆಡಿಕೊಳ್ಳುತ್ತಿದ್ದಾರೆ. ಆದರೆ, ಗುಡ್ಡ ಬಗೆದು ತಿನ್ನುತ್ತಿದ್ದ ಇಲಿಗಳನ್ನೇ ನಾನು ಕೂಡ ಹಿಡಿಯಬೇಕಿರುವುದು," ಎಂದು ಮೋದಿ ಮಾರ್ಮಿಕವಾಗಿ ಹೇಳಿದ್ದಾರೆ.

ಇದೇ ವೇಳೆ, ಪ್ರಧಾನಿಯವರು ಅಂಬೇಡ್ಕರ್ ಹೆಸರಿನ "ಭೀಮ್" ಆ್ಯಪ್ ಬಿಡುಗಡೆ ಮಾಡಿದ್ದಾರೆ. ಸ್ಮಾರ್ಟ್'ಫೋನ್ ಮತ್ತು ಇಂಟರ್ನೆಟ್ ಪಾವತಿಗೆ ಪರ್ಯಾಯವಾಗಿರುವ ಭೀಮ್ ಆ್ಯಪ್ ಬಡವರಿಗಾಗಿಯೇ ತಯಾರಾಗಿದೆ. ಇದು ವಿಶ್ವದ ಅತ್ಯುತ್ಕೃಷ್ಟ ಆ್ಯಪ್ ಆಗಿರಲಿದೆ ಎಂದು ಮೋದಿ ಹೇಳಿದ್ದಾರೆ.

"ಹಿಂದೆ ಅನಕ್ಷರಸ್ಥರಿಗೆ ಹೆಬ್ಬೆಟ್ಟು ಎಂದು ಕರೆಯುತ್ತಿದ್ದರು. ಈಗ ಹೆಬ್ಬಟ್ಟೇ ನಿಮ್ಮ ಬ್ಯಾಂಕ್ ಆಗಲಿದೆ. ಬೆರಳ ತುದಿಯಲ್ಲೇ ಬ್ಯಾಂಕ್ ವ್ಯವಹಾರ ಮಾಡಬಹುದು. ಮೊಬೈಲ್ ಕೂಡ ಅವಶ್ಯಕತೆ ಇರೋದಿಲ್ಲ" ಎಂದು ಪ್ರಧಾನಿ ಅಭಿಪ್ರಾಯಪಟ್ಟಿದ್ದಾರೆ.

ಇದಕ್ಕೂ ಮುನ್ನ, ಡಿಜಿ ಧನ್ ಮೇಳದಲ್ಲಿ ನರೇಂದ್ರ ಮೋದಿಯವರು ಲಕ್ಕಿ ಗ್ರಾಹಕ ಯೋಜನೆಯಡಿ ನಾಲ್ವರು ವಿಜೇತರಿಗೆ ಬಹುಮಾನ ವಿತರಣೆ ಮಾಡಿದ್ದಾರೆ. ಏಪ್ರಿಲ್ 24ರವರೆಗೂ ಬಹುಮಾನ ನೀಡುವುದನ್ನು ಮುಂದುವರಿಸಲಾಗುವುದು ಎಂದು ಈ ವೇಳೆ ಪ್ರಧಾನಿ ಹೇಳಿದ್ದಾರೆ.

click me!