ಜೆಡಿಎಸ್'ನಿಂದ ಸೋತ ಮೂವರಿಗೆ ಜಾಕ್'ಪಾಟ್ ಹುದ್ದೆ

First Published Jun 28, 2018, 8:16 PM IST
Highlights
  • ವೈ.ಎಸ್.ವಿ.ದತ್ತಾ, ಕೋನಾ ರೆಡ್ಡಿ, ಮಧು ಬಂಗಾರಪ್ಪ ಹಾಗೂ ಟಿ.ಎ ಸರವಣ ಸಂಸದೀಯ ಕಾರ್ಯದರ್ಶಿಗಳಾಗಿ ನೇಮಕವಾಗುವ ಸಂಭವ
  • ಕೆಲವೇ ದಿನಗಳಲ್ಲಿ ಅಂತಿಮ ಆದೇಶ ಹೊರಬೀಳುವ ಸಾಧ್ಯತೆ

ಬೆಂಗಳೂರು[ಜೂ.28]: ಜೆಡಿಎಸ್ ಪಕ್ಷದಿಂದ ಸೋತ ಮೂವರು ಮಾಜಿ ಶಾಸಕರು ಹಾಗೂ ಒರ್ವ ಪರಿಷತ್ ಸದಸ್ಯರಿಗೆ ಸರ್ಕಾರ ಉನ್ನತ ನೀಡುವ ಸಾಧ್ಯತೆ ಹೆಚ್ಚಾಗಿದೆ.

ಕಡೂರಿನ ವೈ.ಎಸ್.ವಿ.ದತ್ತಾ, ನವಲಗುಂದದ ಕೋನಾ ರೆಡ್ಡಿ, ಸೊರಬಾದ ಮಧು ಬಂಗಾರಪ್ಪ ಹಾಗೂ ಪರಿಷತ್ ಸದಸ್ಯ ಟಿ.ಎ ಸರವಣ ಅವರು ಸಂಸದೀಯ ಕಾರ್ಯದರ್ಶಿಗಳಾಗಿ ನೇಮಕವಾಗುವ ಸಂಭವವಿದೆ.

ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಹಾಗೂ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಈ ನಾಲ್ವರನ್ನು ಸಂಸದೀಯ ಕಾರ್ಯದರ್ಶಿಗಳಾಗಿ ನೇಮಕ ಮಾಡಲು ಆಸಕ್ತಿ ತೋರಿದ್ದು ಕೆಲವೇ ದಿನಗಳಲ್ಲಿ ಅಂತಿಮ ಆದೇಶ ಹೊರಬೀಳಲಿದೆ.

ರಾಜಕೀಯ ಕ್ಷೇತ್ರದಲ್ಲಿ ಪ್ರಮಾಣಿಕ ಶಾಸಕರೆಂದು ಹೆಸರು ಗಳಿಸಿದ್ದ ದತ್ತಾ ಅವರು ದೊಡ್ಡ ಗೌಡರ ದತ್ತು ಪುತ್ರ ಎಂದು ಖ್ಯಾತರಾದವರು. ಕೋನಾ ರೆಡ್ಡಿ ಮಹದಾಯಿ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ನಾಯಕ. ಮಧು ಬಂಗಾರಪ್ಪ ಜೆಡಿಎಸ್ ಯುವ ನಾಯಕರಾಗಿ ಹೆಸರು ಗಳಿಸಿದ್ದಲ್ಲದೆ ಹೆಚ್.ಡಿ.ಕೆಗೆ ಆಪ್ತರು ಕೂಡ. 

ಪರಿಷತ್ ಸದಸ್ಯರಾದ ಸರವಣ ದೇವೇಗೌಡರಿಗೆ ಹತ್ತಿರರಾದವರಲ್ಲದೆ ಮಂತ್ರಿ ಸ್ಥಾನದ ಆಕಾಂಕ್ಷೆ ಕೂಡ ಆಗಿದ್ದರು. ಮೈತ್ರಿ ಸರ್ಕಾರವಿದ್ದ ಕಾರಣ ಸಚಿವಗಿರಿ ದೊರಕಿರಲಿಲ್ಲ.  ಚುನಾವಣೆಯಲ್ಲಿ ಗೆಲ್ಲುವ  ಹೆಚ್ಚು ನಿರೀಕ್ಷೆಯಲ್ಲಿದ್ದ ಈ ನಾಲ್ವರ ಸೋಲು ಪಕ್ಷದ ನಾಯಕರಿಗೆ ಆಘಾತವುಂಟು ಮಾಡಿದಂತ್ತು ಸುಳ್ಳಲ್ಲ.

click me!