ಮೆಸೆಜ್ ರೋಮಿಯೋಗಳಿಗೆ ಕಾದಿದೆ ಗಂಡಾಂತರ
ಯುವತಿಯರನ್ನು ಕಾಡುವ ಮಜ್ನಗಳಿಗೆ ಬೀಳಲಿದೆ ಗುನ್ನಾ
ಮುಂಬೈ ಪೊಲೀಸರು ಮಾಡಿರುವ ಟ್ವಿಟ್ ನಲ್ಲಿ ಏನಿದೆ?
ಮುಂಬೈ(ಜೂ.28): ಮಹಿಳೆಯರು ಮತ್ತು ಯುವತಿಯರನ್ನು ಕಾಡುವ ಮೆಸೇಜಿಂಗ್ ಮಜ್ನುಗಳ ಕುರಿತಾದ ಮುಂಬೈ ಪೊಲೀಸರುರ ಟ್ವೀಟ್ ವೊಂದು ಭಾರೀ ವೈರಲ್ ಆಗಿದೆ.
Block them. Call us. We will take good care of their emotion & intention! pic.twitter.com/lrUy4j6xSj
— Mumbai Police (@MumbaiPolice)ಮಹಿಳೆಯರಿಗೆ ಇಂಟರ್ ನೆಟ್ ಮೂಲಕ ಫ್ರೆಂಡ್ ರಿಕ್ವೆಸ್ಟ್ ಕಳಿಸಿ ಕಾಡುವ ಮಜ್ನುಗಳೊಂದಿಗೆ ಈಗ ಮುಂಬೈ ಪೊಲೀಸರು ಫ್ರೆಂಡ್ ಶಿಪ್ ಬಯಸುತ್ತಿದು, ಬೆಂಡೆತ್ತಲು ತಯಾರಾಗಿದ್ದಾರೆ. ಗೊತ್ತೇ ಇಲ್ಲದ ವ್ಯಕ್ತಿಗಳು ಮೆಸೇಜ್ ಮಾಡಿ ಕಾಟ ನೀಡುತ್ತಿರುವ ಪ್ರಕರಣಗಳಿಂದ ಮಹಿಳೆಯರಿಗೆ ಕಿರಿಕಿರಿ ಉಂಟಾಗುತ್ತಿದ್ದು, ಮಹಿಳೆಯರಿಗೆ ಈ ಕಿರಿಕಿರಿಯಿಂದ ಮುಕ್ತಿ ಕೊಡಿಸಲು ಮುಂಬೈ ಪೊಲೀಸರು ಸಜ್ಜಾಗಿದ್ದಾರೆ.
ಈ ಬಗ್ಗೆ ಮುಂಬೈ ಪೊಲೀಸರು ಮಾಡಿರುವ ಟ್ವೀಟ್ ನಲ್ಲಿರುವ ಮೀಮ್ ಎಲ್ಲರ ಗಮನ ಸೆಳೆಯುತ್ತಿದೆ. ನಿಮಗೆ ಮೆಸೇಜ್ ಕಳಿಸುವ ಪರಿಚಯವಿಲ್ಲದ ವ್ಯಕ್ತಿಗಳ ನಂಬರ್ ನ್ನು ಬ್ಲಾಕ್ ಮಾಡಿ, ನಾವು ಅವರ ಭಾವನೆ ಮತ್ತು ಉದ್ದೇಶಗಳನ್ನು ವಿಚಾರಿಸಿಕೊಳ್ಳುತ್ತೇವೆ ಎಂದು ಟ್ವಿಟ್ ನಲ್ಲಿ ಹೇಳಲಾಗಿದೆ.