ನಲಪಾಡ್’ಗೆ ಜೈಲಾ? ಜಾಮೀನಾ? ಇಂದು ನಿರ್ಧಾರ

By Suvarna Web DeskFirst Published Feb 26, 2018, 9:37 AM IST
Highlights

ಮೊಹಮ್ಮದ್ ನಲಪಾಡ್  ಜಾಮೀನು ಅರ್ಜಿ ವಿಚಾರಣೆ ಇಂದು 63 ನೇ ಸೆಷನ್ಸ್ ನ್ಯಾಯಾಲಯದಲ್ಲಿ ನಡೆಯಲಿದೆ. 

ಬೆಂಗಳೂರು (ಫೆ.26):  ಮೊಹಮ್ಮದ್ ನಲಪಾಡ್  ಜಾಮೀನು ಅರ್ಜಿ ವಿಚಾರಣೆ ಇಂದು 63 ನೇ ಸೆಷನ್ಸ್ ನ್ಯಾಯಾಲಯದಲ್ಲಿ ನಡೆಯಲಿದೆ. 

ಉದ್ಯಮಿ ಲೋಕನಾಥ್’ರ ಮಗ ವಿದ್ವತ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಜೈಲು ಸೇರಿರುವ ನಲಪಾಡ್ ಅಂಡ್ ಟೀಮ್’ನ ಸೆರೆವಾಸದ ಹಣೆಬರಹ ಇಂದು ನಿರ್ಧಾರವಾಗಲಿದೆ. ಈಗಾಗಲೇ ಸರ್ಕಾರ ಪ್ರಕರಣಕ್ಕೆ ವಿಶೇಷ ಅಭಿಯೋಜಕರನ್ನು ನೇಮಿಸಿ ಅಧಿ ಸೂಚನೆ ಹೊರಡಿಸಿದೆ.  ವಕೀಲ ಶ್ಯಾಮ್ ಸುಂದರ್ ವಿದ್ವತ್ ಪರ ವಕಾಲತ್ತು ವಹಿಸಲಿದ್ದಾರೆ. ಹಾಗೇ ನಲಪಾಡ್ ಮತ್ತವರ ಗ್ಯಾಂಗ್’ಗೆ ಜಾಮೀನು ಕೋರಿ ಹಿರಿಯ ವಕೀಲ ಟಾಮಿ ಸೆಬಾಸ್ಟಿಯನ್ ವಾದ ಮಾಡಲಿದ್ದಾರೆ. 

ರಾಜ್ಯದ ಗಮನ ಸೆಳೆದಿದ್ದ ಈ ಪ್ರಕರಣದತ್ತ ನಾಳೆ ಎಲ್ಲರ ಚಿತ್ತ ಇದ್ದು ನಲಪಾಡ್ ಮತ್ತು ಸಹಚರರಿಗೆ ಜಾಮೀನು ಸಿಗುತ್ತಾ? ಅಥವಾ ಜೈಲು ವಾಸ ಮುಂದುವರೆಯುತ್ತಾ ಎನ್ನುವುದು ಕುತೂಹಲ ಮೂಡಿಸಿದೆ. ಇನ್ನೂ ವಿದ್ವತ್ ಮಲ್ಯ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಮುಂದುವರಿದಿದೆ. ಸ್ವಲ್ಪ ಚೇತರಿಸಿಕೊಂಡಿದ್ದು,ಇನ್ನೊಂದು ಎರಡ್ಮೂರು ದಿನದಲ್ಲಿ ಡಿಸ್ಚಾರ್ಜ್ ಆಗೋ ಸಾಧ್ಯತೆ ಇದೆ.  ವಿದ್ವತ್ ತನಿಖಾಧಿಕಾರಿಗಳ ಮುಂದೆ ಹೇಳಿಕೆ ದಾಖಲಿಸದ ಕಾರಣ ನಲಪಾಡ್ ಮತ್ತು ಗ್ಯಾಂಗ್ ಗೆ ಜಾಮೀನು ಸಿಗುತ್ತಾ ಇಲ್ವಾ ಅನ್ನೋ ಕೂತುಹಲ ಉಂಟಾಗಿದೆ. 

click me!