
ಭಾರತದ ಹಿಮಾಲಯ ಪರ್ವತದ ತಪ್ಪಲಿನಲ್ಲಿ 36 ವರ್ಷಗಳಿಗೊಮ್ಮೆ ಮಾತ್ರ ಹೂವು ಬಿಡುವ ಅಪರೂಪದ ‘ನಾಗಪುಷ್ಪ ಹೂವು' ಇದೆ ಎಂಬ ಫೋಟೊವೊಂದು ಸಾಮಾಜಿಕ ತಾಣಗಳಲ್ಲಿ ಇತ್ತೀಚೆಗೆ ಹರಿದಾಡುತ್ತಿತ್ತು. ಈ ಫೋಟೊ ಪ್ರಚಲಿತಕ್ಕೆ ಬಂದ ಬಳಿಕದ ದಿನದಿಂದಲೂ 36 ವರ್ಷಗಳಿಗೊಮ್ಮೆ ಹೂವು ಬಿಡುವ ಹೂವಿನ ಗಿಡವೊಂದು ಇದೆಯೇ ಅಥವಾ ಸಾರ್ವಜನಿಕರ ಕುತೂಹಲ ಇಮ್ಮಡಿಗೊಳಿಸಲು ಫೋಟೊಗ್ರಾಫರ್‌ನಲ್ಲಿ ಎಡಿಟ್ ಮಾಡಿರುವ ಚಿತ್ರವೇ ಎಂಬ ಹಲವು ಪ್ರಶ್ನೆಗಳು ಯಾರನ್ನೇ ಆಗಲಿ ಕಾಡದೇ ಇರದು.
ವಾಸ್ತವ ಸಂಗತಿಯೆಂದರೆ, ಆ ಚಿತ್ರ ವಾಸ್ತವ ಚಿತ್ರವೇ ಆಗಿದ್ದರೂ, ಅದು ‘ನಾಗಪುಷ್ಪ ಹೂವು' ಅಲ್ಲ ಬದಲಿಗೆ ಅದು ಗರಿಗಳನ್ನು ಹೋಲುವ ಹವಳದ ಹುಳುವಿನಂಥ ಸಂಯುಕ್ತ ಜೀವಿಯಾಗಿದ್ದು, ಅದನ್ನು ಸಮುದ್ರದ ಅಕಶೇರುಕ ಎಂದೂ ಗುರುತಿಸಬಹುದಾಗಿದೆ. 2013ರಲ್ಲೇ ಈ ಫೋಟೊವನ್ನು ಗೋರ್ಡನ್ ಜೆ.ಬೌಬ್ರಿಕ್ ಎಂಬುವರು ಸೆರೆ ಹಿಡಿದಿದ್ದಾರೆ. ಇದೊಂದು ಸಮುದ್ರ ಜೀವಿಯಾಗಿದ್ದು, ಇದು ಮೃದು ಹವಳ ಎಂದೇ ಹೆಸರುವಾಸಿ. ಇಂಥ ಸಮುದ್ರ ಜೀವಿಯನ್ನು ಇತ್ತೀಚೆಗೆ ಆನ್‌ಲೈನ್‌ನಲ್ಲಿ ಇದೊಂದು ನಾಗಪುಷ್ಪ, ನಾಗಪುಷ್ಪಂ, ನಾಗ ಪುಷ್ಪ, ನಾಗ ಪುಷ್ಪಂ ಎಂಬ ವಿವಿಧ ಹೆಸರುಗಳಿಂದ ಪ್ರಚಾರ ಮಾಡಲಾಗಿತ್ತು. ಆದರೆ, ಸಮುದ್ರ ಜೀವಿಯ ಫೋಟೊಗೂ ಮತ್ತು ಹಿಮಾಲಯದ ತಪ್ಪಲಿನಲ್ಲಿ 36 ವರ್ಷಗಳಿಗೊಮ್ಮೆ ಹೂವು ಬಿಡುವ ನಾಗಪುಷ್ಪ ಹೂವಿಗೂ ಯಾವುದೇ ಸಂಬಂಧವಿಲ್ಲ ಎಂಬುದು ಇದೀಗ ಬಯಲಾಗಿದೆ. ನಾಗಪುಷ್ಪ ಎಂಬ ಪದ ಸಂಸ್ಕೃತ ಮೂಲದ್ದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.