(video) ಪರಂ ಜಂಟ್ಲ್'ಮೆನ್,ನಾನು ಸತ್ತರೆ ಸಿಎಂ ಕಾರಣ,ತಮಿಳನಾಗಿ ಹುಟ್ಟಿದ್ದೆ ದೊಡ್ಡ ದುರಂತ: :ನಾಗನ ಪಾರ್ಟ್-2 ಸಿಡಿಯ ಮಾತುಗಳು

Published : May 09, 2017, 04:24 AM ISTUpdated : Apr 11, 2018, 12:51 PM IST
(video) ಪರಂ ಜಂಟ್ಲ್'ಮೆನ್,ನಾನು ಸತ್ತರೆ ಸಿಎಂ ಕಾರಣ,ತಮಿಳನಾಗಿ ಹುಟ್ಟಿದ್ದೆ ದೊಡ್ಡ ದುರಂತ: :ನಾಗನ ಪಾರ್ಟ್-2 ಸಿಡಿಯ ಮಾತುಗಳು

ಸಾರಾಂಶ

ಪರಮೇಶ್ವರ್ ಸಾರ್ ಹೇಳಿದ್ರೆ 10 ನಿಮಿಷದಲ್ಲಿ ಸರೆಂಡರ್ ಆಗ್ತೀನಿ.ಪರಮೇಶ್ವರ್​​ಗೆ ಮಾತ್ರ ನನ್ನ ನೋವು ಅರ್ಥವಾಗಿದೆ.

ಬೆಂಗಳೂರು(ಮೇ.09): ಅಜ್ಞಾತ ಸ್ಥಳದಿಂದಲೇ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿರುವ ರೌಡಿ ಶೀಟರ್ ಬಾಂಬ್ ನಾಗ ಪುನಃ 2ನೇ ಸಿಡಿ ಬಿಡುಗಡೆ ಮಾಡಿದ್ದು, ಅದು ಸುವರ್ಣ ನ್ಯೂಸ್'ಗೆ ಲಭ್ಯವಾಗಿದೆ.

ಸೀಡಿಯಲ್ಲಿ ಹೇಳಿರುವ ಮಾತುಗಳ ಪ್ರಮುಖ ಅಂಶಗಳು ಹೀಗಿವೆ

1) ಹಿರಿಯ ಪೊಲೀಸ್ ಅಧಿಕಾರಿಗಳು ಹಳೇ ನೋಟು ದಂಧೆಯಲ್ಲಿ ಭಾಗಿಯಾಗಿದ್ದು, ನೋಟು ಬದಲಿಸಲಾಗದೇ ಪೊಲೀಸರಿಗೆ ಹುಚ್ಚು ಹಿಡಿದಿದೆ. ಪೊಲೀಸರಿಗೆ ಸಂಬಳ ಸಾಕಾಗಲ್ವಂತೆ, ಗಿಂಬಳಾನು ಕೊಡಬೇಕಂತೆ!

2) ಪರಮೇಶ್ವರ್ ಸಾರ್ ಹೇಳಿದ್ರೆ 10 ನಿಮಿಷದಲ್ಲಿ ಸರೆಂಡರ್ ಆಗ್ತೀನಿ.ಪರಮೇಶ್ವರ್​​ಗೆ ಮಾತ್ರ ನನ್ನ ನೋವು ಅರ್ಥವಾಗಿದೆ.

3) ರೌಡಿ ನಾಗ ಸತ್ತರೆ ಸಿಎಂ ಸಿದ್ದರಾಮಯ್ಯ ನೇರ ಹೊಣೆಯಂತೆ! ವಿಧಾನಸೌಧದ ಮುಂದೆ ಬಂದು ಸಾಯ್ತಿನಿ ಎಂದ ರೌಡಿ ನಾಗ: ನನ್ನ ಸಾವಿಗೆ ಸಿದ್ದರಾಮಯ್ಯ ಕಾರಣರಾಗ್ತಾರೆ. ವಿಧಾನಸೌಧದ ಮುಂದೆ ಬಂದು ಏನಾದ್ರು ಮಾಡ್ಕೋತೀನಿ.ಕೆಟ್ಟ IPS ಅಧಿಕಾರಿಗಳನ್ನು ಸಿಎಂ ಕಿತ್ತಾಕಲಿ. ಇಲ್ಲದಿದ್ರೆ ನನ್ನ ಸಾವಿಗೆ ಸಿಎಂ ಕಾರಣರಾಗ್ತಾರೆ ಎಂದ ರೌಡಿ ನಾಗ

4)  CBI ತನಿಖೆ ಮಾಡಿದ್ರೆ ರಾಜ್ಯದ ಮಾನ ಹೋಗುತ್ತೆ. ರಾಜ್ಯದ ಮಾನಕ್ಕೆ ಅಂಜಿ ನಾನು ಸುಮ್ಮನಿದ್ದಾನೆ. ರಾಜ್ಯದ ಮಾನವನ್ನು ನೀವೇ ಕಾಪಾಡಬೇಕು ಎಂದು ಸಿಎಂಗೆ ರೌಡಿ ನಾಗದಿಂದ ಮನವಿ

5)  ನಾನು ತಮಿಳನಾಗಿ ಹುಟ್ಟಿದ್ದೆ ದೊಡ್ಡ ದುರಂತ, ಬೆಂಗಳೂರು ತಮಿಳರು ನನಗೆ ಮೋಸ ಮಾಡಿದ್ದಾರೆ. ನನ್ನನ್ನು MLAಯಾಗಿ ಗೆಲ್ಲಿಸದೆ ಮೋಸ ಮಾಡಿದ್ದಾರೆ. 2018ರಲ್ಲಿ ಎಲೆಕ್ಷನ್‌ಗೆ ನಿಲ್ಲಬೇಕು ಅಂದುಕೊಂಡಿದ್ದೆ

ಪೊಲೀಸರು ಮಾನ ಹರಾಜು ಮಾಡಿದ್ದಾರೆ. ಹಾಗಾಗಿ 2018ರ ಎಲೆಕ್ಷನ್‌ಗೆ ನಿಲ್ಲೋದಿಲ್ಲ. ನನ್ನ ಇವತ್ತಿನ ಪರೀಸ್ಥಿತಿಗೆ ತಮಿಳು ಜನರೇ ಕಾರಣ

6) ನನ್ನ ವಿರುದ್ಧ 40ರಿಂದ 50 ಕೇಸುಗಳಿವೆ ಎಂದು ಮಾಧ್ಯಮಗಳಲ್ಲಿ ವರದಿಗಳು ಬರುತ್ತಿವೆ. ಆದರೆ, ನನ್ನ ಮೇಲಿರುವ ಕೇಸುಗಳೆಲ್ಲ 100-200 ರು. ದಂಡ ಹಾಕಿ ಬಿಟ್ಟುಬಿಡುವ ಕೇಸುಗಳಷ್ಟೆ. ಗಂಭೀರ ಪ್ರಕರಣ ಗಳಲ್ಲ. ರೌಡಿ ಅನ್ನುವ ಪದದ ಅರ್ಥವೇ ನನಗೆ ಗೊತ್ತಿಲ್ಲ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿಡಿಯೋ: ಅಂತರರಾಷ್ಟ್ರೀಯ ವೇದಿಕೆಯಲ್ಲಿ ಪಾಕಿಸ್ತಾನಕ್ಕೆ ಅವಮಾನ: ಶಹಬಾಜ್ ಷರೀಫ್‌ರನ್ನು ನಿರ್ಲಕ್ಷಿಸಿದ ಪುಟಿನ್!
ಯುಎಇ ಕಠಿಣ ಕಾನೂನು: ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ, ವೇಶ್ಯಾವಾಟಿಕೆಗೆ ಶಿಕ್ಷೆ ಪ್ರಮಾಣ ಭಾರೀ ಹೆಚ್ಚಳ!