
ಪ್ಯಾರಿಸ್(ಮೇ.09): ಸ್ಪರ್ಧಿಸಿದ ಮೊದಲ ಚುನಾವಣೆಯಲ್ಲೇ ಫ್ರಾನ್ಸ್ ಅಧ್ಯಕ್ಷ ಪಟ್ಟಕ್ಕೇರುವ ಮೂಲಕ ಕಿರಿಯ ವಯಸ್ಸಿನಲ್ಲೇ ಬಹು ದೊಡ್ಡ ಸಾಧನೆ ಮಾಡಿರುವ ಎಮ್ಯಾನ್ಯು ಯೆಲ್ ಮ್ಯಾಕ್ರಾನ್‌ರ ವೈವಾಹಿಕ ಜೀವ ನವೂ ಈಗ ಜಗತ್ತಿನಾದ್ಯಂತ ಸುದ್ದಿಯಾ ಗಿದೆ. 39ರ ಹರೆಯದ ಮ್ಯಾಕ್ರಾನ್ ಅವರು ತಮಗಿಂತ ವಯಸ್ಸಿನಲ್ಲಿ 25 ವರ್ಷ ಹಿರಿಯ ರಾದ, ಒಂದು ಕಾಲದ ತಮ್ಮ ನಾಟಕ ಶಿಕ್ಷಕಿ ಯನ್ನೇ ವರಿಸಿರುವುದು ಇದಕ್ಕೆ ಕಾರಣ!
ಎಮ್ಯಾನ್ಯುಯೆಲ್ ಅವರ ಪತ್ನಿ 64 ಹರೆಯದ ಬ್ರಿಗಿಟ್ ಟ್ರಾಗ್ನೆಕ್ಸ್ ಅವರು ಮೂರು ಮಕ್ಕಳ ತಾಯಿ. ಅವರ ಒಬ್ಬಳು ಪುತ್ರಿ ಲಾರೆನ್ಸ್ ಎಂಬಾಕೆ ಎಮ್‌ಯಾನ್ಯುಯೆಲ್ ಓರಗೆಯವರಾಗಿದ್ದು ಮಾತ್ರವ ಲ್ಲದೆ ಸಹಪಾಠಿ ಕೂಡ ಆಗಿದ್ದರು. ಆದರೆ ಲಾರೆನ್ಸ್ ಬದಲಿಗೆ ಅವರ ತಾಯಿ ಟ್ರಾಗ್ನೆಕ್ಸ್ ಅವರನ್ನೇ ಎಮ್ಯಾನ್ಯುಯೆಲ್ ವರಿಸಿದ್ದಾರೆ. ಈಗಾಗಲೇ ಟ್ರಾಗ್ನೆಕ್ಸ್ ಅವರಿಗೆ 7 ಮೊಮ್ಮಕ್ಕಳು ಕೂಡ ಇದ್ದಾರೆ.
ಉತ್ತರ ಫ್ರಾನ್ಸ್‌ನ ಏಮಿಯನ್ಸ್ ಪಟ್ಟಣ ದಲ್ಲಿ ಗೃಹಿಣಿಯಾಗಿದ್ದ ಟ್ರಾಗ್ನೆಕ್ಸ್ ನಾಟಕ ಕ್ಲಬ್‌ವೊಂದರ ಮೇಲುಸ್ತುವಾರಿ ಹೊತ್ತು ಕೊಂಡಿದ್ದರು. ಆಗ ಅವರಿಗೆ 40 ವರ್ಷ. 15 ವರ್ಷದವರಾಗಿದ್ದ ಎಮಾನ್ಯುಲ್ ಅಲ್ಲಿಗೆ ನಾಟಕದಲ್ಲಿ ಅಭಿನ ಯಿಸಲು ಬಂದಿದ್ದರು. ಅಲ್ಲಿ ಇವರಿಬ್ಬರ ನಡುವೆ ಸ್ನೇಹ ಆರಂಭವಾಯಿತು. ‘ಏನು ಬೇಕಾ ದರೂ ಮಾಡಿಕೊಳ್ಳಿ, ನಾನು ನಿಮ್ಮನ್ನು ಮದುವೆಯಾಗುತ್ತೇನೆ!' ಎಂದು ಟ್ರಾಗ್ನೆಕ್ಸ್ ಗೆ ಹೇಳಿದಾಗ ಎಮ್ಯಾನ್ಯುಯೆಲ್‌ಗೆ 17 ವರ್ಷ. 2006ರಲ್ಲಿ ತಮ್ಮ ಪತಿಗೆ ವಿಚ್ಛೇದನ ನೀಡಿದ ಟ್ರಾಗ್ನೆಕ್ಸ್, 2007ರಲ್ಲಿ ಎಮ್ಯಾನ್ಯು ಯೆಲ್‌ರನ್ನು ವರಿಸಿದರು. ಅಧ್ಯಕ್ಷೀಯ ಚುನಾವಣೆಯಲ್ಲಿ ಇಮ್ಯಾನ್ಯುಯಲ್‌ಗೆ ಟ್ರಾಗ್ನೆಕ್ಸ್ ಅವರು ಸಾಕಷ್ಟುನೆರವಾಗಿದ್ದಾರೆ. ಮೊದಲ ಮದುವೆಯಿಂದ ಅವರು ಪಡೆದಿ ರುವ ಮೂವರು ಮಕ್ಕಳು ಕೂಡ ಈ ಚುನಾವಣೆಯಲ್ಲಿ ದುಡಿದಿದ್ದಾರೆ ಎಂದು ಹೇಳಲಾಗಿದೆ. ಮಲ ತಂದೆ ಜತೆ ಮಕ್ಕಳು ಹೊಂದಿಕೊಂಡಿದ್ದಾರಂತೆ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.