ನೆರೆ ಸಂತ್ರಸ್ತರಿಗೆ ನೆರವು ನೀಡಿದ ಮುಸ್ಲಿಮರಿಗೆ ಪಾದ್ರಿ ಕೃತಜ್ಞತೆ

By Web DeskFirst Published Sep 3, 2018, 10:38 AM IST
Highlights

ಪ್ರವಾಹವೆಂದರೆ ಜಾತಿ, ಮತ, ಭೇದ ಮರೆತು ಒಬ್ಬರಿಗೊಬ್ಬರು ನೆರವಾಗುತ್ತಾರೆ. ಕೇರಳ ಹಾಗೂ ಕೊಡಗು ಮಂದಿಯೂ ನೆರೆಯಿಂದ ತತ್ತರಿಸಿದಾಗ ಯಾರು, ಇನ್ಯಾರಿಗೋ ನೆರವಾಗಿದ್ದಾರೆ. ಚರ್ಚ್‌ನಲ್ಲಿ ನೆರವಾದ ಮುಸ್ಲಿಮರಿಗೆ ಪಾದ್ರಿ ಥ್ಯಾಂಕ್ಸ್ ಹೇಳಿದ್ದು ಹೀಗೆ.

ತಿರುವನಂತಪುರ: ಕೇರಳ ಪ್ರವಾಹ ಸಂತ್ರಸ್ತರ ರಕ್ಷಣೆ ಹಾಗೂ ಅವರು ಚರ್ಚ್‌ನಲ್ಲಿ ಆಶ್ರಯ ಪಡೆಯುತ್ತಿದ್ದ ವೇಳೆ ನಿಸ್ವಾರ್ಥ ಸೇವೆ ಸಲ್ಲಿಸಿದ ಮುಸ್ಲಿಂ ಸಮುದಾಯದವರಿಗೆ ಕ್ಯಾಥೋಲಿಕ್‌ ಚರ್ಚ್ ಪಾದ್ರಿಯೊಬ್ಬರು ಕೃತಜ್ಞತೆ ಸಲ್ಲಿಸಿದರು.

ಕೊಟ್ಟಾಯಂ ಜಿಲ್ಲೆಯಲ್ಲಿರುವ ಜುಮ್ಮಾ ಮಸೀದಿಗೆ ಆಗಮಿಸಿದ ಸೈರೋ ಮಲಬಾರ್‌ ಚರ್ಚ್‌ನ ಪಾದ್ರಿ ಸಾನು ಪುಥುಸ್ಸರಿ, ಮಸೀದಿಯ ಪ್ರಾರ್ಥನೆ ಹಾಲ್‌ನಲ್ಲಿ ಮುಸ್ಲಿಂ ಸಹೋದರರನ್ನುದ್ದೇಶಿಸಿ ಭಾಷಣ ಮಾಡಿದರು.

ಈ ವೇಳೆ, ಶತಮಾನದಲ್ಲಿ ಕಂಡು ಕೇಳರಿಯದ ಪ್ರವಾಹಕ್ಕೆ ಕೇರಳ ತುತ್ತಾದಾಗ, 580ಕ್ಕೂ ಹೆಚ್ಚು ಮಂದಿ ನಿರಾಶ್ರಿತರು, ತಮ್ಮ ಚರ್ಚ್‌ನಲ್ಲಿ ಆಶ್ರಯ ಪಡೆದಿದ್ದರು. ಆದರೆ, ಅವರಿಗೆ ಅಗತ್ಯವಿರುವಷ್ಟುಆಹಾರ, ನೀರು ಸೇರಿದಂತೆ ಇತರ ವಸ್ತುಗಳು ತಮ್ಮಲ್ಲಿರಲಿಲ್ಲ. ಈ ವೇಳೆ ಮುಸ್ಲಿಂ ಸಹೋದರರು ಯಥೇಚ್ಛವಾಗಿ ಆಹಾರ ಮತ್ತು ನೀರಿನೊಂದಿಗೆ ಚಚ್‌ರ್‍ಗೆ ಆಗಮಿಸಿದರು ಎಂದು ಮುಸ್ಲಿಮರ ಬಗ್ಗೆ ಪಾದ್ರಿ ಕೊಂಡಾಡಿದರು.

ಕೇರಳ ಪ್ರವಾಹಕ್ಕೆ ಸಂಬಂಧಿಸಿದ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

click me!