ಇಸ್ರೋ ಮಾನವಸಹಿತ ಅಂತರಿಕ್ಷ ಯಾನ ಹೇಗಿರುತ್ತದೆ?

By Web Desk  |  First Published Sep 1, 2018, 8:45 AM IST

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತನ್ನ ಮಹತ್ವಾಕಾಂಕ್ಷಿ ಮಾನವಸಹಿತ ವ್ಯೋಮಯಾನದ ವಿವರಗಳನ್ನು ಇದೇ ಮೊದಲ ಬಾರಿಗೆ ಬಿಚ್ಚಿಟ್ಟಿದೆ. ದೇಶದ ಮೊದಲ ಮಾನವಸಹಿತ ಬಾಹ್ಯಾಕಾಶ ಯಾನಕ್ಕೆ 2022ರ ವರ್ಷ ನಿಗದಿಯಾಗಿದೆ. ಇದು ಭಾರತದ ಮೊದಲ ಮಾನವಸಹಿತ ಬಾಹ್ಯಾಕಾಶ ಯಾನ. ಇದಕ್ಕೆ ಮೂವರು ಭಾರತೀಯರನ್ನು ಆಯ್ಕೆ ಮಾಡಲಾಗುತ್ತದೆ. ಈ ಸಾಹಸದೊಂದಿಗೆ ಜಗತ್ತಿನಲ್ಲೇ ಬಾಹ್ಯಾಕಾಶ ಸಂಶೋಧನೆಯಲ್ಲಿ ಭಾರತ ಕೆಲವೇ ಕೆಲವು ಮುಂದುವರಿದ ದೇಶಗಳ ಸಾಲಿನಲ್ಲಿ ನಿಲ್ಲಲಿದೆ. ಇಷ್ಟಕ್ಕೂ ಈ ಯಾನದಿಂದ ಏನು ಲಾಭ? ವಿಜ್ಞಾನಿಗಳು ಅಂತರಿಕ್ಷದಲ್ಲಿ ಕುಳಿತು ಏನು ಮಾಡುತ್ತಾರೆ? ಅವರನ್ನು ಕರೆದೊಯ್ಯುವ ನೌಕೆ ಹೇಗಿರುತ್ತದೆ? ತಗಲುವ ವೆಚ್ಚ ಎಷ್ಟುಎಂಬಿತ್ಯಾದಿ ಮಾಹಿತಿಗಳು ಇಲ್ಲಿವೆ.


click me!