ಷರಿಯಾ ಕೋರ್ಟ್‌ ವಿರುದ್ಧ ಮುಸ್ಲಿಂ ಮಹಿಳೆ ಸುಪ್ರೀಂ ಮೊರೆ

By Web DeskFirst Published Sep 3, 2018, 11:27 AM IST
Highlights

ಮುಸ್ಲಿಂ ಮಹಿಳೆಯರಿಗೆ ಮಾರಕವಾಗಿದ್ದ ತ್ರಿವಳಿ ತಲಾಖ್ ಅಂಸವಿಧಾನಿಕವೆಂದು ಕೋರ್ಟ್ ತೀರ್ಪು ನೀಡಿದೆ. ಈ ಬೆನ್ನಲ್ಲೇ ಮುಸ್ಲಿಂ ಮದುವೆ, ವಿಚ್ಚೇದನಕ್ಕೆ ಸಂಬಂಧಿಸಿದಂತೆ ಸ್ಥಾಪಿಸಲು ಉದ್ದೇಶಿಸಿರುವ ಷರಿಯಾ ಕೋರ್ಟ್ ಅಸಂವಿಧಾನಕವೆಂದು ಮುಸ್ಲಿಂ ಮಹಿಳೆಯೊಬ್ಬರು ಕೋರ್ಟ್ ಮೆಟ್ಟಿಲೇರಿದ್ದಾರೆ.

ನವದೆಹಲಿ: ಮುಸ್ಲಿಂ ಸಮುದಾಯದ ವಿವಾಹ, ವಿಚ್ಛೇದನ ಹಾಗೂ ಇತರೆ ಪ್ರಕರಣಗಳ ವಿಚಾರಣೆಗಾಗಿ ಸ್ಥಾಪಿಸಲು ನಿರ್ಧರಿಸಲಾಗಿರುವ ಷರಿಯಾ ನ್ಯಾಯಾಲಯಗಳನ್ನು ಅಸಾಂವಿಧಾನಿಕ ಎಂದು ಘೋಷಿಸುವಂತೆ ಕೋರಿ ಮುಸ್ಲಿಂ ಮಹಿಳೆಯೊಬ್ಬರು ಸುಪ್ರೀಂ ಮೊರೆ ಹೋಗಿದ್ದಾರೆ.

ಈ ಅರ್ಜಿ ಬಗ್ಗೆ ವಿಚಾರಣೆ ನಡೆಸಿದ ನ್ಯಾ.ದೀಪಕ್‌ ಮಿಶ್ರಾ, ನ್ಯಾ.ಎ.ಎಂ ಖಾನ್ವಿಲ್ಕರ್‌ ಹಾಗೂ ಡಿ.ವೈ.ಚಂದ್ರಚೂಡ್‌ ಅವರಿದ್ದ ಪೀಠ, ನಿಖಾ ಹಲಾಲಾ ಹಾಗೂ ಬಹುಪತ್ನಿತ್ವದ ವಿರುದ್ಧ ಸಲ್ಲಿಸಲಾಗಿರುವ ಅರ್ಜಿಯಲ್ಲಿ ತನ್ನನ್ನೂ ಪಾಲುದಾರೆಯನ್ನಾಗಿ ಮಾಡುವಂತೆ ಕೋರಿ ಅರ್ಜಿ ಸಲ್ಲಿಸುವಂತೆ ಅರ್ಜಿದಾರೆ ಝಿಕ್ರಾ ಎಂಬುವರಿಗೆ ಸೂಚಿಸಿದೆ.

click me!