
ಗದಗ(ಸೆ.06): ಆ ಮನೆಯಲ್ಲಿ ಇಷ್ಟು ದಿನ ಅಲ್ಲಾನ ನಾಮಸ್ಮರಣೆ ಕೇಳಿಬರುತ್ತಿತ್ತು. ಆದರೀಗ ಅಲ್ಲಾನ ಜೊತೆ ವಿಘ್ನ ವಿನಾಶಕ ಗಪಣನ ನಾಮಸ್ಮರಣೆ ಕೇಳಿಬರುತ್ತಿದೆ. ತಮ್ಮ ಮನೆಯಲ್ಲಿ ಗಣಪತಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸುವ ಮೂಲಕ ಇಲ್ಲೊಂದು ಕುಟುಂಬ ಭಾವೈಕ್ಯತೆ ಸಾರಿದೆ.
ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ ಅಣ್ಣಿಗೇರಿ ಪಟ್ಟಣದಲ್ಲಿರೋ ನೂರ್ ಸಾಬ್ ಮನೆಯಲ್ಲಿ ಅಲ್ಲಾನ ಜೊತೆ ಗಣಪತಿ ನಾಮಸ್ಮರಣೆ ಕೇಳಿಬರುತ್ತಿದೆ. ಇವರು ಗಣಪತಿ ಪೂಜಿಸುವುದಕ್ಕೆ ಕಾರಣವೂ ಇದೆ. ಕೆಲ ವರ್ಷಗಳ ಹಿಂದೆ ಕೆಲಸ ಮಾಡ್ತಿರುವಾಗ ಬೆಳಗಾವಿಯಲ್ಲಿ ಗಣೇಶನ ಬೆಳ್ಳಿ ಮೂರ್ತಿ ಸಿಕ್ಕಿತಂತೆ. ಮನೆಗೆ ತಂದು ವಾಲಿ ಗುರಿಗಳನ್ನು ಕೇಳಿದ್ದಾಗ, ಮನೆಯಲ್ಲಿಟ್ಟು ಪೂಜೆ ಮಾಡುವಂತೆ ಹೇಳಿದ್ದಾರೆ. ಆದರೆ ಈ ವರ್ಷ ಮನೆಯಲ್ಲಿಯೇ ಪ್ರತಿಷ್ಠಾಪನೆ ಮಾಡಿ ಪೂಜೆ ಸಲ್ಲಿಸುತ್ತಿದ್ದಾರೆ.
ಜಾತಿ ಜಾತಿ ಎಂದು ಹೊಡೆದಾಡುವ ಜನರ ನಡುವೆ ಇಂಥ ಭಾವೈಕ್ಯತೆ ಇರುವವರು ತುಂಬಾ ಅಪರೂಪ ಅಂತಾರೆ ಸಿತಾಗಿರಿಯ ಪೀಠದ ಗುರುಗುಳಾದ ವಾಲಿ ಅವರು.
ಒಟ್ಟಿನಲ್ಲಿ ರಿಹಾನಾ ಬೇಗಂ ಅವರು, ತಮ್ಮ ಮನೆಯಲ್ಲಿ ಗಣಪತಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸುವ ಮೂಲಕ ಭಾವೈಕ್ಯತೆ ಸಾರಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.