ಪತ್ನಿಯ ಜೊತೆ ಮಾತನಾಡಿದ್ದಕ್ಕೆ ಮರ್ಮಾಂಗಕ್ಕೆ ಒದ್ದು ಕೊಂದ

Published : Jan 12, 2018, 09:09 AM ISTUpdated : Apr 11, 2018, 12:58 PM IST
ಪತ್ನಿಯ ಜೊತೆ ಮಾತನಾಡಿದ್ದಕ್ಕೆ ಮರ್ಮಾಂಗಕ್ಕೆ ಒದ್ದು ಕೊಂದ

ಸಾರಾಂಶ

ತನ್ನ ಪತ್ನಿ ಜತೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂಬ ಶಂಕೆ ಮೇರೆಗೆ ಬಟ್ಟೆ ವ್ಯಾಪಾರಿ ಸಯ್ಯದ್ ಹುಸೇನ್ ಎಂಬಾತನಿಗೆ ಮರ್ಮಾಂಗಕ್ಕೆ ಒದ್ದು ಕೊಲೆ ಮಾಡಿದ್ದ ಆಟೋ ಚಾಲಕ ವಿವೇಕನಗರ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಬೆಂಗಳೂರು (ಜ.12): ತನ್ನ ಪತ್ನಿ ಜತೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂಬ ಶಂಕೆ ಮೇರೆಗೆ ಬಟ್ಟೆ ವ್ಯಾಪಾರಿ ಸಯ್ಯದ್ ಹುಸೇನ್ ಎಂಬಾತನಿಗೆ ಮರ್ಮಾಂಗಕ್ಕೆ ಒದ್ದು ಕೊಲೆ ಮಾಡಿದ್ದ ಆಟೋ ಚಾಲಕ ವಿವೇಕನಗರ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ವಿವೇಕನಗರದ ಶ್ಯಾಮಣ್ಣ ರಸ್ತೆಯ ನಿವಾಸಿ ಶಿವಶಂಕರ್ ಬಂಧಿತ. ತನ್ನ ಮನೆ ಬಳಿ ಜ.5ರಂದು ಬಂದು ಪತ್ನಿ ಜತೆ ಮಾತನಾಡುತ್ತಿದ್ದ ಹುಸೇನ್ ಕಂಡು ಕೆರಳಿದ ಶಿವಶಂಕರ್, ಆತನನ್ನು ಮನೆ ಹತ್ತಿರದ ಉದ್ಯಾನಕ್ಕೆ ಕರೆದೊಯ್ದು ಹಲ್ಲೆ ನಡೆಸಿದ್ದ. ತೀವ್ರವಾಗಿ ಗಾಯಗೊಂಡಿದ್ದ ಹುಸೇನ್, ಮರುದಿನ ಬೌರಿಂಗ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ. 

ಈ ಕೃತ್ಯ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಶಿವಶಂಕರ್ ಮನೆ ಹತ್ತಿರದ ಬಾರ್‌ನ ಸಿಸಿಟೀವಿ ಕ್ಯಾಮೆರಾ ವಶಕ್ಕೆ ಪಡೆದು ಪರಿಶೀಲಿಸಿದಾಗ ಹಲ್ಲೆ ದೃಶ್ಯಾವಳಿಗಳು ಪತ್ತೆಯಾಗಿದ್ದವು. ಈ ಸುಳಿವು ಆಧರಿಸಿ ಬುಧವಾರ ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಹೊಟ್ಟೆ ನೋವು ಎಂದು ಆಸ್ಪತ್ರೆ ಸೇರಿದ: ಮೃತ ಹುಸೇನ್, ರೋಸ್‌ಗಾಡರ್ನ್ ಬಸ್ ನಿಲ್ದಾಣದ ಬಳಿ ಫುಟ್‌ಪಾತ್‌ನಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿದ್ದ. ಆಗ ಅವನಿಗೆ ಶಿವಶಂಕರ್ ಪತ್ನಿ ಪರಿಚಯವಾಗಿದ್ದಳು. ಈ ಗೆಳೆತನ ಕ್ರಮೇಣ ಅವರಲ್ಲಿ ‘ಆತ್ಮೀಯತೆ’ ಮೂಡಿಸಿತ್ತು. ಇತ್ತೀಚಿಗೆ ಈ ಸ್ನೇಹದ ವಿಚಾರ ತಿಳಿದ ಕ್ರುದ್ಧನಾದ ಶಿವಶಂಕರ್, ಹುಸೇನ್ ಸಂಪರ್ಕದಿಂದ ದೂರ ಇರುವಂತೆ ಪತ್ನಿಗೆ ತಾಕೀತು ಮಾಡಿದ್ದ. ಅಲ್ಲದೆ ಹುಸೇನ್‌ಗೂ ಎಚ್ಚರಿಕೆ ನೀಡಿದ್ದ. ಈ ಸೂಚನೆ ಹೊರತಾಗಿಯೂ ಅವರಿಬ್ಬರ ಮಧ್ಯೆ ಸ್ನೇಹ ಮುಂದುವರಿದಿತ್ತು ಎಂದು ಪೊಲೀಸರು ಹೇಳಿದ್ದಾರೆ.

ಜ.೫ರಂದು ರಾತ್ರಿ ರಸ್ತೆಯಲ್ಲಿ ಶಿವಶಂಕರ್ ಪತ್ನಿ ಜತೆ ಹುಸೇನ್ ಮಾತನಾಡುತ್ತಿದ್ದ. ಈ ವಿಚಾರವನ್ನು ಗೆಳೆಯರಿಂದ ತಿಳಿದು ಸಿಟ್ಟಿಗೆದ್ದ ಆತ, ತಕ್ಷಣವೇ ಅಲ್ಲಿಗೆ ತೆರಳಿ ಹುಸೇನ್‌ನನ್ನು ಸಮೀಪದ ಪಾರ್ಕ್‌ಗೆ ಎಳೆದೊಯ್ದಿದ್ದ. ಅಲ್ಲಿ ಮನಬಂದಂತೆ ಥಳಿಸಿದಲ್ಲದೆ, ಮರ್ಮಾಂಗಕ್ಕೂ ಒದ್ದು ಹೋಗಿದ್ದ. ಈ ಹಲ್ಲೆ ಬಳಿಕ ಶಿವಶಂಕರ್, ಅದೇ ರಸ್ತೆಯಲ್ಲಿರುವ ಹ್ಯಾಪಿ ಬಾರ್‌ಗೆ ಹೋಗಿದ್ದ. ಸ್ವಲ್ಪ ಸಮಯ ನಂತರ ಚೇತರಿಸಿ

ಕೊಂಡ ಹುಸೇನ್ ಕೂಡ ತನ್ನ ಗೆಳೆಯರ ಜತೆ ಅದೇ ಅದೇ ಬಾರ್‌ಗೆ ಹೋಗಿ ಮದ್ಯ ಸೇವಿಸಿದ್ದ ಎಂದು ಪೊಲೀಸರು ವಿವರಿಸಿದ್ದಾರೆ. ಮದ್ಯ ಸೇವನೆ ಬಳಿಕ ಹೊಟ್ಟೆ ನೋವಿನಿಂದ ನರಳಾಡಲು ಶುರು ಮಾಡಿದ ಆತನನ್ನು, ಸ್ನೇಹಿತರು ಆಟೋದಲ್ಲಿ ಮನೆಗೆ ಬಿಟ್ಟಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮದುವೆ ಮಾತುಕತೆಗೆಂದು ಕರೆಸಿ ಎಂಜಿನಿಯರಿಂಗ್ ವಿದ್ಯಾರ್ಥಿಯ ಮಸಣಕ್ಕೆ ಅಟ್ಟಿದ ಗರ್ಲ್‌ಫ್ರೆಂಡ್ ಮನೆಯವರು
ಕೆನಡಾದ ಮಹಿಳಾ ವೈದ್ಯರಿಗೆ ತೋರಿಸಬಾರದನ್ನು ತೋರಿಸಿದ ಭಾರತೀಯ ಯುವಕನ ಬಂಧನ