'ಟೈಗರ್ ಜಿಂದಾ ಹೈ’ ಹೈಕೋರ್ಟ್ ಮೆಟ್ಟಿಲೇರಿದ ಬೆಳಗೆರೆ

By Web Desk  |  First Published Nov 15, 2018, 6:17 PM IST

ಸಹೋದ್ಯೋಗಿ ಸುನೀಲ್ ಹೆಗ್ಗರವಳ್ಳಿ ಕೊಲೆಗೆ ಸುಪಾರಿ ನೀಡಿದ ಪ್ರಕರಣ ಮತ್ತು ಅಕ್ರಮ  ಅಕ್ರಮವಾಗಿ ಶಸ್ತಾಸ್ತ್ರ ಹೊಂದಿದ ಪ್ರಕರಕಣ ರದ್ದು ಕೋರಿ ಪತ್ರಕರ್ತ ರವಿ ಬೆಳಗೆರೆ ಹೈಕೋರ್ಟ್ ಮೆಟ್ಟಿಲು ಏರಿದ್ದಾರೆ.


ಬೆಂಗಳೂರು(ನ.15]  ಸಹೋದ್ಯೋಗಿ ಸುನೀಲ್ ಹೆಗ್ಗರವಳ್ಳಿ ಕೊಲೆಗೆ ಸುಪಾರಿ ನೀಡಿದ ಪ್ರಕರಣ ಮತ್ತು ಅಕ್ರಮ  ಅಕ್ರಮವಾಗಿ ಶಸ್ತಾಸ್ತ್ರ ಹೊಂದಿದ ಪ್ರಕರಕಣ ಸಂಬಂಧ  ಪತ್ರಕರ್ತ ರವಿ ಬೆಳಗೆರೆ ಮೇಲೆ ಆರೋಪಪಟ್ಟಿ ಸಲ್ಲಿಕೆಯಾಗಿದ್ದು ಸೆಷನ್ಸ್ ಕೋರ್ಟ್ ವಿಚಾರಣೆಗೆ ಬರಬೇಕಿದೆ. ಆದರೆ ಪ್ರಕರಣ ರದ್ದು ಕೋರಿ ರವಿ ಬೆಳೆಗೆರೆ ಹೈಕೋರ್ಟ್ ಮೆಟ್ಟಿಲು ಏರಿದ್ದಾರೆ.

ಪ್ರಕರಣವು ಕಾನೂನು ಬಾಹಿರ, ಅಸಮಂಜಸ ವಸ್ತು ಸಂಗತಿಗಳು ಮತ್ತು ಸಾಕ್ಷ್ಯಾಧಾರಗಳ ಕೊರತೆಯಿದೆ ಹೀಗಾಗಿ ಪ್ರಕರಣ ರದ್ದುಗೊಳಿಸಬೇಕು ಎಂದು ಅರ್ಜಿಯಲ್ಲಿ ಬೆಳಗೆರೆ ಮನವಿ ಮಾಡಿದ್ದಾರೆ ಹೈಕೋರ್ಟ್ ಗೆ ಇಂದು[ಗುರುವಾರ] ಅರ್ಜಿ ಸಲ್ಲಿಕೆಯಾಗಿದ್ದು ವಿಚಾರಣೆಗೆ ಬರಬೇಕಿದೆ.

Tap to resize

Latest Videos

ಏನಿದು ಪ್ರಕರಣ: ಗೌರಿ ಲಂಕೇಶ್ ಹತ್ಯೆ ವಿಚಾರಣೆ ವೇಳೆ ಬಂಧಿತನಾಗಿದ್ದ ಭೀಮಾ ತೀರದ  ವಿಜಯಪುರದ ಚಡಚಣದ  ಶಾರ್ಪ್ ಶೂಟರ್ ಶಶಿ ಮುಂಡೇವಾಡಗಿ ಸಿಸಿಬಿ ಪೊಲೀಸರ ಮುಂದೆ ಸ್ಫೋಟಕ ಮಾಹಿತಿಯನ್ನು ಕಳೆದ ಡಿಸೆಂಬರ್ ನಲ್ಲಿ ಹೊರ ಹಾಕಿದ್ದ. ರವಿ ಬೆಳಗೆರೆ ತಾವು ನಡೆಸುತ್ತಿದ್ದ ಪತ್ರಿಕೆಯ ವರದಿಗಾರ ಸಹದ್ಯೋಗಿ ಸುನೀಲ್ ಹೆಗ್ಗರವಳ್ಳಿ ಅವವರ ಹತ್ಯೆ ಮಾಡಲು ಸುಪಾರಿ ನನಗೆ ಸುಪಾರಿ  ನೀಡಿದ್ದರು ಎಂದು ಪೊಲೀಸರ ಮುಂದೆ  ಶಶಿ ಮುಂಡೇವಾಡಗಿ ಹೇಳಿದ್ದ.

 

 

click me!