ಮುನಿರತ್ನ ಜೆಡಿಎಸ್ ಸೇರ್ತಾರಾ?

Published : Dec 02, 2017, 05:44 PM ISTUpdated : Apr 11, 2018, 12:44 PM IST
ಮುನಿರತ್ನ ಜೆಡಿಎಸ್ ಸೇರ್ತಾರಾ?

ಸಾರಾಂಶ

ರಾಜರಾಜೇಶ್ವರಿನಗರದಲ್ಲಿ 7-8 ಮಂದಿ ಅಭ್ಯರ್ಥಿಗಳಿದ್ದಾರೆ. ಸ್ಥಳೀಯರಿಗೆ ಟಿಕೇಟ್ ಕೊಡಲಾಗವುದು. ಪ್ರಜ್ವಲ್ ರಾಜರಾಜೇಶ್ವರಿ ನಗರದಿಂದ ಸ್ಪರ್ಧಿಸಲ್ಲ. ಈ ಬಗ್ಗೆ  ಈಗಾಗಲೇ ಸ್ವತಃ ದೇವೇಗೌಡರೇ ಹೇಳಿದ್ದಾರೆ.

ಬೆಂಗಳೂರು(ಡಿ.02): ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಮುನಿರತ್ನ ಅವರು ಜೆಡಿಎಸ್ ಸೇರುತ್ತಾರೆ ಎಂಬ ಗಾಳಿ ಸುದ್ದಿ ಕೆಲವುಕಡೆ ಹರಡಿದೆ.

ಆದರೆ ಈ ಬಗ್ಗೆ ಸ್ವತಃ ಸುದ್ದಿಗಾರರಿಗೆ ಸ್ಪಷ್ಟಪಡಿಸಿದ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ, ಮುನಿರತ್ನ ಜೆಡಿಎಸ್ ಗೆ ಬರುವ ವಿಚಾರವನ್ನು ತಳ್ಳಿಹಾಕಿದರು. ಮಗನ ಸಿನಿಮಾ ವಿಚಾರವಾಗಿ ಎರಡ್ಮೂರು ಬಾರಿ ಮುನಿರತ್ನರನ್ನು ಭೇಟಿ ಮಾಡಿದ್ದೇನೆ. ಇದರಲ್ಲಿ ಯಾವುದೇ ರಾಜಕೀಯ ವಿಚಾರ ಪ್ರಸ್ತಾಪವಾಗಿಲ್ಲ.ರಾಜರಾಜೇಶ್ವರಿನಗರದಲ್ಲಿ 7-8 ಮಂದಿ ಅಭ್ಯರ್ಥಿಗಳಿದ್ದಾರೆ. ಸ್ಥಳೀಯರಿಗೆ ಟಿಕೇಟ್ ಕೊಡಲಾಗವುದು. ಪ್ರಜ್ವಲ್ ರಾಜರಾಜೇಶ್ವರಿ ನಗರದಿಂದ ಸ್ಪರ್ಧಿಸಲ್ಲ. ಈ ಬಗ್ಗೆ  ಈಗಾಗಲೇ ಸ್ವತಃ ದೇವೇಗೌಡರೇ ಹೇಳಿದ್ದಾರೆ.

ನಿಖಿಲ್ ರಾಜಕಾರಣಕ್ಕೆ ಬರಲ್ಲ

ನಿಖಿಲ್ ಸದ್ಯಕ್ಕೆ ರಾಜಕಾರಣಕ್ಕೆ ಬರುವ ಪ್ರಶ್ನೆಯೇ ಇಲ್ಲ. ಪಕ್ಷದಲ್ಲಿ ಯಾವುದೇ ಪದಾಧಿಕಾರಿಯ ಹುದ್ದೆಯನ್ನೂ ನೀಡಲ್ಲ. ನನ್ನ ಆರೋಗ್ಯ ಸರಿಯಿಲ್ಲದ ಕಾರಣ ನನ್ನ ಪರ ಪ್ರಚಾರ ಮಾಡುತ್ತಾನೆ.ಪಕ್ಷದಲ್ಲೂ ಆತನಿಗೆ ಯಾವ ಸ್ಥಾನಮಾನ ನೀಡುವುದಿಲ್ಲ. ಜೆಡಿಎಸ್ ಪರ ಪ್ರಚಾರಕ್ಕೆ ಪವನ್ ಕಲ್ಯಾಣ್ ಅವರ ಕರೆತರುವ ಚಿಂತನೆ ಇದೆ. ಈಗಲೂ ಹೇಳ್ತಾನೆ ದೇವೇಗೌಡರ ಕುಟುಂಬದಿಂದ ಚುನಾವಣೆಗೆ ನಿಲ್ಲೋದು ಇಬ್ಬರೇ. ಅನಿವಾರ್ಯ ಸ್ಥಿತಿ ಬಂದಾಗ ನೋಡೋಣ. ಮನೆಮನೆಗೆ ಕುಮಾರಣ್ಣ ಅಂಥ ಮೊದಲು ಪ್ರಾರಂಭ ಮಾಡಿದ್ದೇ ನಾವು. ಇದನ್ನು ಕಾಂಗ್ರೆಸ್ ನವರು ನಕಲು ಮಾಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಉಡುಪಿ: ವರನಿಗೆ ರಜೆ ಸಿಗದ ಕಾರಣ ವಿಡಿಯೋ ಮೂಲಕ ಅದ್ಧೂರಿ ನಿಶ್ಚಿತಾರ್ಥ! ಫೋಟೋ ಇಲ್ಲಿವೆ ನೋಡಿ
ಕಡಿಮೆ ಬಿಯರ್ ಉತ್ಪಾದನೆಗೆ ಯುಬಿ ಕಂಪನಿಗೆ ವಿಧಿಸಿದ್ದ 29 ಕೋಟಿ ರೂ. ದಂಡ ರದ್ದು!