ಭಯೋತ್ಪಾದನೆಗಾಗಿ ದೇಣಿಗೆ ಸಂಗ್ರಹದಲ್ಲಿ ನಿರತನಾಗಿರುವ ಮುಂಬೈ ದಾಳಿಯ ರೂವಾರಿ

First Published May 10, 2018, 6:13 PM IST
Highlights

ಲಷ್ಕರ್-ಇ-ತೊಯ್ಬಾ ಸಂಘಟನೆಯು ಎಫ್ಎಟಿಐನಂಥ ಹೊಸ ಚಾರಟಿ ಹೆಸರುಗಳಿಂದ ದೇಣಿಗೆ ಸಂಗ್ರಹಿಸುತ್ತಿದೆ. ಎಲ್ಇಟಿ ಮುಖ್ಯಸ್ಥ ಹಫೀಜ್ ಸಯ್ಯದ್ ಸಾರ್ವಜನಿಕ ಸಮಾರಂಭಗಳ ಭಾಷಣ ನಡೆಸಿ ಶೀಘ್ರದಲ್ಲಿ ಚುನಾವಣೆಗೆ ಸ್ಪರ್ಧಿಸುವುದಾಗಿ ಹೇಳಿಕೆ ನೀಡುತ್ತಿದ್ದಾನೆ.

ನವದೆಹಲಿ(ಮೇ.10): ಪಾಕ್ ಮೂಲದ 26/11 ಮುಂಬೈ ದಾಳಿಯ ರೂವಾರಿ ಲಷ್ಕರ್-ಇ-ತೊಯ್ಬಾ ಕಮಾಂಡರ್ ಜಾಕಿ ಉರ್ ರೆಹಮಾನ್ ಲಾಕ್ವಿ ಲಾಹೋರ್ ಹೈಕೋರ್ಟ್'ನಿಂದ ಜಾಮೀನು ದೊರೆತ ನಂತರ ಭಯೋತ್ಪಾದನಾ ಚಟುವಟಿಕೆಗಳಿಗೆ ದೇಣಿಗೆ ಸಂಗ್ರಹದಲ್ಲಿ ನಿರತನಾಗಿದ್ದಾನೆ.
2015ರ ಏಪ್ರಿಲ್'ನಲ್ಲಿ ಮೊದಲ ಬಾರಿಗೆ ಜಾಮೀನು ಪಡೆದು ರಾವಲ್ಪಿಂಡಿ ಅದಿಯಾಲಾ ಸೆರೆಮನೆಯಿಂದ ಬಿಡುಗಡೆಯಾಗಿದ್ದ. 2018ರ ಫೆಬ್ರವರಿಯಿಂದ  ಪಂಜಾಬ್ ಪ್ರಾಂತ್ಯದ ಗೋಧಿ ಬೆಳಗಾರರಿಂದ ದೇಣಿಗೆಯನ್ನು ಸಂಗ್ರಹಿಸುತ್ತಿದ್ದಾನೆ ಎಂದು ಭಾರತೀಯ ಗುಪ್ತಚರ ಇಲಾಖೆಯ ವರದಿಗಳು ತಿಳಿಸಿವೆ.
ಲಷ್ಕರ್-ಇ-ತೊಯ್ಬಾ ಸಂಘಟನೆಯು ಎಫ್ಎಟಿಐನಂಥ ಹೊಸ ಚಾರಟಿ ಹೆಸರುಗಳಿಂದ ದೇಣಿಗೆ ಸಂಗ್ರಹಿಸುತ್ತಿದೆ. ಎಲ್ಇಟಿ ಮುಖ್ಯಸ್ಥ ಹಫೀಜ್ ಸಯ್ಯದ್ ಸಾರ್ವಜನಿಕ ಸಮಾರಂಭಗಳ ಭಾಷಣ ನಡೆಸಿ ಶೀಘ್ರದಲ್ಲಿ ಚುನಾವಣೆಗೆ ಸ್ಪರ್ಧಿಸುವುದಾಗಿ ಹೇಳಿಕೆ ನೀಡುತ್ತಿದ್ದಾನೆ. ಇತ್ತೀಚಿಗಷ್ಟೆ ಎಲ್ಇಟಿ ಸಂಘಟನೆ ವ್ಯಾತ್ ಎಂಬ ಹೆಸರಿನಲ್ಲಿ ನಿಯತಕಾಲಿಕೆಯನ್ನು ಬಿಡುಗಡೆ ಮಾಡಿದ್ದು ಇದು ಕೇವಲ ಕಾಶ್ಮೀರ ಬಗ್ಗೆ ಹೆಚ್ಚು ಗಮನಹರಿಸುತ್ತಿದ್ದು ಅಲ್ಲಿನ ಯುವಕರು ಉಗ್ರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ  ಪ್ರೇರೇಪಿಸುತ್ತಿದೆ. 

click me!